Asianet Suvarna News Asianet Suvarna News

Mysuru Dasara 2022: ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಬಸವಣ್ಣ, ಶಂಕರಾಚಾರ್ಯ, ಸಂತರನ್ನು ನೆನಪಿಸಿಕೊಂಡಿದ್ದಾರೆ. ಕರ್ನಾಟಕದ ಸಂಸ್ಕೃತಿ ವಿಶ್ವವ್ಯಾಪಿಯಾಗಿದ್ದು, ದಸರಾ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮತ್ತಷ್ಟು ವೈಭಯದತ್ತ ಸಾಗುತ್ತಿದೆ ಎಂದೂ ದ್ರೌಪದಿ ಮುರ್ಮು ಹೇಳಿದರು. 

mysuru dasara 2022 president draupadi murmu kannada speech basavaraj bommai thavar chand gehlot speech
Author
First Published Sep 26, 2022, 11:24 AM IST

ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಕನ್ನಡದಲ್ಲೇ ಭಾಷಣ ಆರಂಭಿಸಿದರು. ದೇವಿ ಚಾಮುಂಡೇಶ್ವರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಹೇಳಿದರು.  ಅಲ್ಲದೆ, ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ, ತಾಯಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ದ್ರೌಪದಿ ಮುರ್ಮು ಹೇಳಿದರು. ಅನ್ಯಾಯ, ಅಧರ್ಮ, ಅಹಂಕಾರ ಸೋಲಿಸಲು ದೇವಿ ಅವತಾರ ತೋರಿದ್ದಾರೆ. ಕರ್ನಾಟಕದ ಸಂಸ್ಕೃತಿ ವಿಶ್ವವ್ಯಾಪಿಯಾಗಿದ್ದು, ದಸರಾ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮತ್ತಷ್ಟು ವೈಭಯದತ್ತ ಸಾಗುತ್ತಿದ್ದು, ದಸರಾ ಮಹೋತ್ಸವ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತುಗಳನ್ನಾಡಿದ್ದಾರೆ. 

ಅಲ್ಲದೆ, ತಾಯಿ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿದ್ದೇನೆ. ಭಕ್ತಿ, ಸ್ವಾತಂತ್ರ್ಯಕ್ಕೆ ಕರ್ನಾಟಕ ಹೆಸರುವಾಸಿಯಾಗಿದೆ. ದಸರಾಗೆ ಉದ್ಘಾಟನೆ ತಂದಿದ್ದು ನನಗೆ ಸಂತಸ ತಂದಿದೆ ಎಮದೂ ದ್ರೌಪದಿ ಮುರ್ಮು 413ನೇ ವಿಶ್ವವಿಖ್ಯಾತ ದಸರಾಗೆ ಚಾಲನೆ ನೀಡಿದ ಬಳಿಕ ಹೇಳಿಕೆ ನೀಡಿದ್ದಾರೆ. ಇನ್ನು, ಕಲಬುರಗಿ ಸೂಫಿ ಸಂತರ ನೆಲೆಬೀಡಾಗಿತ್ತು, ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದಾರೆ, ಬಸವಣ್ಣ, ಸಂತರ ನಾಡು ಈ ಕರ್ನಾಟಕ ಎಂದೂ ರಾಷ್ಟ್ರಪತಿ ಹೇಳಿದ್ದಾರೆ. ಅಲ್ಲದೆ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವರಂತಹ ವೀರ ವನಿತೆಯರಿದ್ದಾರೆ ಎಂದೂ ದ್ರೌಪದಿ ಮುರ್ಮು ಹೇಳಿದ್ದಾರೆ.

ಇದನ್ನು ಓದಿ: ವಿಶ್ವವಿಖ್ಯಾತ Mysuru Dasaraಗೆ ರಾಷ್ಟ್ರಪತಿ Draupadi Murmu ವಿಧ್ಯುಕ್ತ ಚಾಲನೆ

Koo App
ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವವನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮರ್ಮು ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಒಂಬತ್ತು ದಿನಗಳ ಕಾಲ ನಡೆಯುವ ವೈಭವದ ನಾಡ ಹಬ್ಬ ದಸರಾ ಉತ್ಸವವನ್ನು ಪ್ರಪ್ರಥಮ ಬಾರಿಗೆ ರಾಷ್ಟ್ರಪತಿ ಸ್ಥಾನ ಅಲಂಕರಿಸಿದವರು ಉದ್ಘಾಟಿಸಿರುವುದು ಈ ಬಾರಿಯ ವಿಶೇಷವಾಗಿದ್ದು, ಈ ಐತಿಹಾಸಿಕ ಕ್ಷಣದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಲಾಯಿತು. ಹಲವಾರು ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಯಲಿದ್ದು, ಮೈಸೂರು ಕಂಗೊಳಿಸಲಿದೆ. - Pralhad Joshi (@joshipralhad) 26 Sep 2022

mysuru dasara 2022 president draupadi murmu kannada speech basavaraj bommai thavar chand gehlot speech

ನಾಡು ಸುಬಿಕ್ಷೆಯಿಂದ ಇರುವಂತೆ ಪ್ರಾರ್ಥನೆ ಮಾಡುತ್ತೇವೆ ಎಂದ ಸಿಎಂ

ರಾಷ್ಟ್ರಪತಿಗೂ ಮುನ್ನ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು. 10 ದಿನಗಳ ಈ ಕಾರ್ಯಕ್ರಮ ನಾಡ ಹಬ್ಬ, ನಾಡಿನ ಸಾಮಾನ್ಯ ವರ್ಗ ಮನೆ ಮನೆಗಳಲ್ಲಿ ದಸರಾ ಆಚರಣೆ ಮಾಡುತ್ತೆ. ನಾಡು ಸುಬಿಕ್ಷೆಯಿಂದ ಇರುವಂತೆ ಪ್ರಾರ್ಥನೆ ಮಾಡುತ್ತೇವೆ. ಅದಕ್ಕೆ ತಾಯಿ ಒಲಿದಿದ್ದು, ರಾಜ್ಯದಲ್ಲಿ ಉತ್ತಮ‌ ಮಳೆ ಆಗುತ್ತಿದೆ ಎಂದು ಸಿಎಂ ಮೈಸೂರಿನಲ್ಲಿ ಹೇಳಿದರು.

ಬಳಿಕ, ರಾಷ್ಟ್ರಪತಿ ದಸರಾ ಉದ್ಘಾಟನೆ ಬಂದಿರೋದು ಅಪರೂಪದ ಘಟನೆ, ರಾಷ್ಟ್ರಪತಿಗಳು ಬೆಳಿಗ್ಗೆ ಕರೆ ಮಾಡಿದ್ದಕ್ಕೆ ಕೂಡಲೇ ಸಂಜೆ ಒಪ್ಪಿಕೊಂಡರು. ರಾಷ್ಟ್ರಪತಿ ಆದ ನಂತರ ಮೊದಲ ರಾಜ್ಯ ಪ್ರವಾಸ ಅಂತ ಹೇಳಿದ್ರು. ನಾಡ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು.

ಹಾಗೆ, ರಾಷ್ಟ್ರಪತಿಯಾದ ಮೇಲೆ ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಇದೆ. ಮಹಿಷಾಸುರ ಈಗ ಇಲ್ಲ. ನಮ್ಮೊಳಗಿನ ಅವಗುಣಗಳನ್ನು ನಿಗ್ರಹಿಸಿಕೊಳ್ಳಬೇಕು. ಪ್ರತಿ ಬಾರಿ ದಸರಾ ಮಹೋತ್ಸವ ಸಂಕಲ್ಪ ಮಾಡುವ ದಿನ.  ತಾಯಿ ಚಾಮುಂಡೇಶ್ವರಿಗೆ ಹಂಸ ವಾಹಿನಿ ಅಲಂಕಾರ ಮಾಡಲಾಗಿದೆ. ಹಂಸ ಶುದ್ಧತೆಗೆ ಪ್ರತೀಕ. ಅತಿ ಎತ್ತರಕ್ಕೆ ಹಾರುವ ಪಕ್ಷಿಯೂ ಹಂಸ. ಶುದ್ಧತೆ ಇದ್ದರೆ ಎತ್ತರಕ್ಕೆ ಹಾರಬಹುದು ಎಂಬುದನ್ನು ಅರ್ಥೈಸಿಕೊಳ್ಳಬಹುದು. ನಮ್ಮಲ್ಲಿರುವ ಕಷ್ಟದಲ್ಲಿರುವ ಜನರನ್ನು ಎತ್ತರಕ್ಕೆ ಕರೆದೊಯ್ಯಲಿದೆ. ಸರ್ವ ಜನರನ್ನೂ ಕಲ್ಯಾಣದತ್ತ ಕೊಂಡೊಯ್ಯುವ ಶಕ್ತಿ ನೀಡಲಿ ಎಂದು ನಾನು ಬೇಡಿಕೊಂಡಿದ್ದೇನೆ ಎಂದೂ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಭಾಷಣದಲ್ಲಿ ಹೇಳಿದರು. 

mysuru dasara 2022 president draupadi murmu kannada speech basavaraj bommai thavar chand gehlot speech

ದಸರಾದಲ್ಲಿ ಪ್ರತ್ಯಕ್ಷವಾಗಿ ಭಾಗಿವಹಿಸುತ್ತಿರುವುದಕ್ಕೆ ನಾನು ಭಾಗ್ಯಶಾಲಿ ಎಂದ ರಾಜ್ಯಪಾಲರು

ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ್ಮ ಭಾಷಣದಲ್ಲಿ ಎಲ್ಲರಿಗೂ ನಮಸ್ಕಾರ, ಎಲ್ಲರಿಗೂ ನಾಡಹಬ್ಬ ದಸರಾ ಮಹೋತ್ಸವದ ಶುಭಾಶಯಗಳು. ನವರಾತ್ರಿಯಿಂದ ಶುರುವಾಗಿ ವಿಜಯ ದಶಮಿಯಂದು ಮುಕ್ತಾಯವಾಗುತ್ತದೆ. ದೇಶದ ತುಂಬೆಲ್ಲ ಆಚರಣೆಯಲ್ಲಿದೆ. ದಸರಾದಲ್ಲಿ ಪ್ರತ್ಯಕ್ಷವಾಗಿ ಭಾಗಿವಹಿಸುತ್ತಿರುವುದಕ್ಕೆ ನಾನು ಭಾಗ್ಯಶಾಲಿ. 
ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು, ಸಮಿತಿಯವರಿಗೆ ಶುಭ ಕಾಮನೆಗಳು. ಧರ್ಮ, ಸಂಸ್ಕೃತಿ, ಪರಂಪರೆಯ ಆಚರಣೆಯನ್ನು ಯಶಸ್ವಿಯಾಗಿಸಬೇಕು. ವಿಶ್ವಶಾಂತಿಗೆ ಪ್ರಾರ್ಥನೆ ಸಲ್ಲಿಸೋಣ ಎಂದು ಹೇಳಿದರು. 

Follow Us:
Download App:
  • android
  • ios