Asianet Suvarna News Asianet Suvarna News

ಮೈಸೂರು: 'ಚಾಮುಂಡಿ ಕಾಲ್ಪನಿಕ, ಮಹಿಷಾಸುರನನ್ನು ಕೊಂದಿಲ್ಲ' - ನಂಜರಾಜೇ ಅರಸ್‌

ಅಸುರ ಮತ್ತು ರಾಕ್ಷಸ ಸಮುದಾಯಗಳ ಹೆಸರು. ಮಹಿಷಾಸುರ ಜೀವಂತ ವ್ಯಕ್ತಿ, ಆದರೆ ಚಾಮುಂಡಿ ಕಾಲ್ಪನಿಕ ಎಂದು ಇತಿಹಾಸಕಾರ ನಂಜರಾಜೇ ಅರಸ್‌ ಹೇಳಿದರು.

Mysuru Darasa 2024 Chamundi is fairy did not kill Mahishasura Nanjaraj urs sat
Author
First Published Sep 29, 2024, 3:04 PM IST | Last Updated Sep 29, 2024, 3:04 PM IST

ಮೈಸೂರು (ಸೆ.29): ಅಸುರ ಮತ್ತು ರಾಕ್ಷಸ ಎನ್ನುವಂತದ್ದು ಸಮುದಾಯಗಳ ಹೆಸರು. ರಕ್ಷಣೆ ಮಾಡುವವರು ರಾಕ್ಷಸರು ಎಂದರ್ಥ. ಅಸುರರು ಎಂದರೆ ಇನ್ನೊಬ್ಬರ ಪ್ರಾಣ ರಕ್ಷಿಸುವವರು. ಮಹಿಷಾಸುರ ಜೀವಂತ ವ್ಯಕ್ತಿ. ಆದರೆ, ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ, ಕಾಲ್ಪನಿಕ. ಚಾಮುಂಡಿ ಮಹಿಷಾಸುರನನ್ನ ಕೊಂದಿಲ್ಲ ಎಂದು ಇತಿಹಾಸಕಾರ ನಂಜರಾಜೇ ಅರಸ್‌ ಹೇಳಿದರು.

ಮಹಿಷ ದಸರಾ 2024ರ ಮಂಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಂಸದನ ಮಾತಿಗೆ ಹೆದರಿ ಚಾಮುಂಡಿ ಬೆಟ್ಟಕ್ಕೆ ಪೊಲೀಸರು ಬೀಗ ಹಾಕಿದ್ದಾರೆ. ಚಿಂತನೆ ಮಾಡುವಂತಹ ಪ್ರಜ್ಞೆ ಪೊಲೀಸರಿಗೆ ಇಲ್ಲದಿರುವುದು ನಾಚಿಕೆಗೇಡು. ಚಾಮುಂಡಿಗೂ ಮಹಿಷನಿಗೂ ಏನಾದರೂ ಜಗಳವಾಗಿದ್ಯ? ಅಸುರ ಮತ್ತು ರಾಕ್ಷಸ ಎನ್ನುವಂತದ್ದು ಸಮುದಾಯಗಳ ಹೆಸರು. ರಕ್ಷಣೆ ಮಾಡುವವರು ರಾಕ್ಷಸರು ಎಂದರ್ಥ. ಅಸುರರು ಎಂದರೆ ಇನ್ನೊಬ್ಬರ ಪ್ರಾಣ ರಕ್ಷಿಸುವವರು ಎಂದು ಹೇಳಿದರು.

ಯಾವನೋ ತಲೆಕೆಟ್ಟವನು ಹೇಳಿದ ಅಂತಾ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಚಾಮುಂಡಿ ನೋಡಲು ಬಂದ ಭಕ್ತರಿಗೆ ಇಂದು ಬೇಜಾರಾಗಿದೆ. ಅಯೋಗ್ಯ ಮಾತು ಕೇಳಿ ಚಾಮುಂಡಿ ಬೆಟ್ಟಕ್ಕೆ ನಿಷೇಧಾಜ್ಞೆ ವಿಧಿಸಲಾಗಿದೆ. ಬೇಸರಗೊಂಡ ಪ್ರವಾಸಿಗರಿಗೆ ನಾನು ಕ್ಷಮೆ ಕೇಳ್ತೀನಿ. ಮಹಿಷಾಸುರ ಜೀವಂತ ವ್ಯಕ್ತಿ. ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ, ಕಾಲ್ಪನಿಕ. ದೇವರಗಳ ಪುರಾಣ ಓದಿದ್ರೆ ಸೂಸೈಡ್ ಮಾಡಿಕೊಳ್ಳಬೇಕಾಗುತ್ತದೆ. ಇಷ್ಟು ಹಲ್ಕಾಗಳ ಅಂತಾ? ಹಲ್ಕಾ ಎಂದರೆ ತಪ್ಪಾಗುತ್ತೆ ಇಷ್ಟು ಕೀಳಾದವರ ಎನಿಸುತ್ತದೆ. ಚಾಮುಂಡಿ ಮಹಿಷಾಸುರನನ್ನ ಕೊಂದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ, ಪುರೋಹಿತರು ಮಾಡಿದ ಇತಿಹಾಸ ಒಡೆಯುವ ಕಾಲ ಬಂದಿದೆ: ಯೋಗೇಶ್ ಮಾಸ್ಟರ್

ಚಂಡ ಮುಂಡ ಸೇನಾಪತಿಗಳು ಕಾರ್ತ್ಯಾಯಿಣಿಯನ್ನ ತಲೆ ಕೂದಲಿನಿಂದ ಕಾಲಿನ ಉಗುರುವರೆಗೂ ವರ್ಣಿಸುತ್ತಾರೆ. ಆಕೆಯನ್ನು ಬಲವಂತವಾಗಿ ಎಳೆದೊಯ್ಯಲು ಪ್ರಯತ್ನಿಸಿದಾಗ, ಕಾರ್ತ್ಯಾಯಿಣಿ ಹಣೆಯಿಂದ ಕಾಳಿ ಹುಟ್ಟಿಬಂದು ಚಂಡ ಮುಂಡರನ್ನ ಬಲಿ ಹಾಕುತ್ತಾಳೆ. ಆ ಕ್ಷಣದಿಂದ ಕಾಳಿಗೆ ಚಾಮುಂಡ ಎಂದು ಪ್ರಖ್ಯಾತಿಯಾಗು ಎಂದು ಕಾರ್ತ್ಯಾಯಿಣಿ ಹರಸುತ್ತಾಳೆ. ಆದರೆ ನಾವು ಮಹಿಷಾಸುರನನ್ನ ಕೊಂದವಳು ಎನ್ನುತ್ತೇವೆ ಎಂದು ತಮ್ಮ ಇತಿಹಾಸವನ್ನು ಪ್ರಚುರಪಡಿಸಿದರು.

ಇನ್ನು ಪಾರಿವಾಳಕ್ಕೆ ಕಾಳು ಹಾಕಿದರೆ ಅರಮನೆ ಅಂದ ಹಾಳಾಗುತ್ತಿದೆ ಎಂದು ಸಂಸದ ಪತ್ರ ಬರೆದ‌. ಆದ್ದರಿಂದ ಅವನ ಮಾತು ಕೇಳಿ ಪಾರಿವಾಳಕ್ಕೆ ಕಾಳು ಹಾಕುವುದನ್ನ ನಿಲ್ಲಿಸುತ್ತಾರೆ. ಇದು ಯಾವ ರೀತಿಯ ಸಂಪ್ರಯಾಯವೋ ತಿಳಿಯುತ್ತಿಲ್ಲ ಎಂದು ಇತಿಹಾಸಕಾರ ನಂಜರಾಜೇ ಅರಸ್‌ ಕಿಡಿಕಾರಿದರು.

ಇದನ್ನೂ ಓದಿ: ಮುಡಾ ಹಗರಣ ಎಫ್ಐಆರ್: ಸಿದ್ದರಾಮಯ್ಯ ಎ1, ಪಾರ್ವತಿ ಎ2 ಮತ್ತು ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಎ3

ಮಹಿಷ ದಸರಾದಲ್ಲಿ ಗದ್ದಲ: ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವಿಚಾರವಾಗಿ ಗಲಾಟೆ ನಡೆಯಿತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಭಾ ಕಾರ್ಯಕ್ರಮ ಮುಗಿದ ಕೂಡಲೇ ನೀವೇ ಐವರನ್ನು ಕರೆದುಕೊಂಡು ಹೋಗಿ. ಇಲ್ಲ, ನಾವೇ ಹೋಗಿ ಪುಷ್ಪಾರ್ಚನೆ ಮಾಡುತ್ತೇವೆ  ಎಂದು ಕರೆ ನೀಡಿದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಮನವೊಲಿಸಲು ಯತ್ನಿಸಿದ ಎಸಿಪಿ. ಆಗ ಎಸಿಪಿ‌ ಶಾಂತಮಲ್ಲಪ್ಪ ಅವರನ್ನು ಸಭಿಕರು ಸುತ್ತುವರಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆಗ ಮಾಜಿ ಮೇಯರ್ ಪುರುಷೋತ್ತಮ್ ಅವರು ಪ್ರತಿಭಟನಾಕಾರರನ್ನು ಮನವೊಲಿಸಿದರು.

Latest Videos
Follow Us:
Download App:
  • android
  • ios