‘ಕರ್ನಾಟಕ ಪ್ರಕಾಶಕರ ಸಂಘ’ ನೀಡಲಿರುವ 2021ರ ಸಾಲಿನ ಎರಡು ಪ್ರಶಸ್ತಿಗಳಿಗೆ ಮೈಸೂರಿನ ಕನ್ನಡ ಗ್ರಂಥಾಲಯ ಸ್ಥಾಪಕ ಸೈಯದ್‌ ಇಸಾಕ್‌ ಹಾಗೂ ಹಿರಿಯ ಪತ್ರಕರ್ತೆ ಮತ್ತು ಪ್ರಕಾಶಕರಾದ ಆರ್‌.ಪೂರ್ಣಿಮಾ ಭಾಜನರಾಗಿದ್ದಾರೆ. 

ಬೆಂಗಳೂರು (ಏ.20): ವಿಶ್ವ ಪುಸ್ತಕ ದಿನ(ಏ.23) ಪ್ರಯುಕ್ತ ‘ಕರ್ನಾಟಕ ಪ್ರಕಾಶಕರ ಸಂಘ’ ನೀಡಲಿರುವ 2021ರ ಸಾಲಿನ ಎರಡು ಪ್ರಶಸ್ತಿಗಳಿಗೆ ಮೈಸೂರಿನ ಕನ್ನಡ ಗ್ರಂಥಾಲಯ ಸ್ಥಾಪಕ ಸೈಯದ್‌ ಇಸಾಕ್‌ ಹಾಗೂ ಹಿರಿಯ ಪತ್ರಕರ್ತೆ ಮತ್ತು ಪ್ರಕಾಶಕರಾದ ಆರ್‌.ಪೂರ್ಣಿಮಾ ಭಾಜನರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಘದ ಸಂಸ್ಥಾಪಕ ಅಧ್ಯಕ್ಷ ಕವಿ ‘ಎಂ.ಗೋಪಾಲಕೃಷ್ಣ ಅಡಿಗ’ ಪ್ರಶಸ್ತಿ ಸೈಯದ್‌ ಇಸಾಕ್‌ ಮತ್ತು ಆಧುನಿಕ ಕಾಲದ ಮೊದಲ ಪ್ರಕಾಶಕಿ ‘ಶ್ರೀಮತಿ ನಂಜನಗೂಡು ತಿರುಮಲಾಂಬ’ ಪ್ರಶಸ್ತಿಯನ್ನು ಆರ್‌.ಪೂರ್ಣಿಮಾ ಅವರಿಗೆ ಸಂಘ ನೀಡಿ ಗೌರವಿಸಲಿದೆ. 

ಸೈಯದ್‌ ಇಸಾಕ್‌ ಗ್ರಂಥಾಲಯಕ್ಕೆ ಬೆಂಗ್ಳೂರು ಪ್ರಕಾಶಕರ ಸಂಘ ನೆರವು ...

ಏ.23ರಂದು ಬೆಳಗ್ಗೆ 11.30ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅವರು ಪುರಸ್ಕೃತರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂಕಿತ ಪುಸ್ತಕ ಮತ್ತು ಶೃಂಗಾರ ಪ್ರಕಾಶನ ಸಂಸ್ಥೆಗಳಿಂದ ಪ್ರಾಯೋಜಿತವಾದ ಈ ಪ್ರಶಸ್ತಿಗಳು 50 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.