ಭೋವಿ ನಿಗಮದ ಮೇಲೆ ಸಿಐಡಿ ದಾಳಿ: ಕೋಟಿ ಕೋಟಿ ಹಗರಣದ ಹಿಂದಿರುವ ಸತ್ಯವೇನು?

ರಾಜ್ಯ ಭೋವಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದ್ದು, ಕೇಂದ್ರ ಕಚೇರಿ ಬಳಿಕ ಜಿಲ್ಲಾ ಕಚೇರಿಗಳ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.  

multi crore scam CID officials raid Bhovi Development Corporation gow

 ಬೆಂಗಳೂರು (ಆ.16): ರಾಜ್ಯ ಭೋವಿ ನಿಗಮದ ಬಹುಕೋಟಿ ಹಗರಣ ಸಂಬಂಧ ಅಪರಾಧ ತನಿಖಾ ದಳವು (ಸಿಐಡಿ) ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಕೇಂದ್ರ ಕಚೇರಿ ಬಳಿಕ ನಿಗಮದ ಜಿಲ್ಲಾ ಕಾರ್ಯಾಲಯಗಳ ಮೇಲೆ ಬುಧವಾರ ದಾಳಿ ನಡೆಸಿದೆ.

ದೇವನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಹಾಗೂ ರಾಜಾಜಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲೆಗಳ ಭೋವಿ ನಿಗಮದ ಕಚೇರಿಗಳನ್ನು ಸಿಐಡಿ ಜಾಲಾಡಿದೆ. ಇದೇ ಹಗರಣ ಸಂಬಂಧ ಭೋವಿ ನಿಗಮದ ಕೇಂದ್ರ ಕಚೇರಿ ಮೇಲೆ ಮಂಗಳವಾರ ಸಂಜೆ ದಿಢೀರ್ ಸಿಐಡಿ ದಾಳಿ ನಡೆಸಿತ್ತು. ಕೇಂದ್ರ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳ ದಾಳಿ ವೇಳೆ ಸುಮಾರು 100ಕ್ಕೂ ಹೆಚ್ಚಿನ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ವೈದ್ಯರಿಲ್ಲದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಪರದಾಟ!

ಬಿಜೆಪಿ ಆಡಳಿತದ ಅ‍‍ವಧಿಯಲ್ಲಿ ರಾಜ್ಯ ಭೋವಿ ನಿಗಮದಲ್ಲಿ ಸಾಲ ಮಂಜೂರಾತಿ ಹೆಸರಿನಲ್ಲಿ 60 ಕೋಟಿ ಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಅಕ್ರಮ ಸಂಬಂಧ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಐದು ಪ್ರಕರಣಗಳು ದಾಖಲಾಗಿದ್ದವು. ಮುಡಾ ಹಾಗೂ ವಾಲ್ಮೀಕಿ ಹಗರಣಗಳ ಮುಂದಿಟ್ಟು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಹೋರಾಟಕ್ಕಿಳಿದ ಬೆನ್ನಲ್ಲೇ ಭೋವಿ ನಿಗಮದ ಅಕ್ರಮ ವ್ಯವಹಾರ ಶೋಧನೆ ಚುರುಕುಗೊಂಡಿದೆ. ಈ ಹಿನ್ನಲೆಯಲ್ಲಿ ಭೋವಿ ನಿಗಮದ ಕಚೇರಿಗಳನ್ನು ಹಣಕಾಸು ಭಾನಗಡಿಯ ಕಡತಗಳಿಗೆ ತನಿಖಾ ತಂಡಗಳು ಹುಡುಕಾಡಿದೆ.

ಕನ್ನಡ ಚಿತ್ರರಂಗಕ್ಕೆ ಫಲಿಸಿತೇ ಪೂಜಾಫಲ, ಕಾಂತಾರ, ಕೆಜಿಎಫ್‌ಗೆ ಎರಡೆರಡು ರಾಷ್ಟ್ರೀಯ ಪ್ರಶಸ್ತಿ!

100 ಕಡತಗಳ ರಹಸ್ಯ: ಭೋವಿ ನಿಗಮದ ಕಚೇರಿಗಳಲ್ಲಿ ಜಪ್ತಿ ಮಾಡಿರುವ 100ಕ್ಕೂ ಹೆಚ್ಚಿನ ಕಡತಗಳಲ್ಲಿ ಅಡಗಿರುವ ಆರ್ಥಿಕ ಅವ್ಯವಹಾರದ ರಹಸ್ಯ ಪತ್ತೆಗೆ ಸಿಐಡಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದಾರೆ. ಪ್ರತಿ ಕಡತಗಳನ್ನು ಕೂಲಂಕಷವಾಗಿ ತನಿಖಾ ಅಧಿಕಾರಿಗಳು ಪರೀಕ್ಷೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios