ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದಿದ್ರು, ಬಿಜೆಪಿಗೇ ಅದೇ ಪರಿಸ್ಥಿತಿ ಬಂದಿದೆ: ಸ್ವಪಕ್ಷ ನಾಯಕರ ವಿರುದ್ಧ ರೇಣುಕಾಚಾರ್ಯ ಅಸಮಾಧಾನ

'ನಾನು ಬಕೆಟ್ ಹಿಡಿಯುವ ರಾಜಕಾರಣ ಮಾಡೋದಿಲ್ಲ,ಬ್ಲಾಕ್ ಮೇಲ್ ರಾಜಕಾರಣ ಗೊತ್ತೇ ಇಲ್ಲ. ರಾಜ್ಯ ನಾಯಕರು ಪಾರ್ಟಿ ಮೀಟಿಂಗ್ ಕರೆಯಲು ತಯಾರಿಲ್ಲ ಪಕ್ಷದಲ್ಲಿ ಸಮಸ್ಯೆ ಕೇಳೋರಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸ್ವ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದರು. 

MP Renukacharya outraged against state bjp leaders at davangere rav

ವರದಿ: ವರದರಾಜ್ 

ದಾವಣಗೆರೆ (ಆ.29): 'ನಾನು ಬಕೆಟ್ ಹಿಡಿಯುವ ರಾಜಕಾರಣ ಮಾಡೋದಿಲ್ಲ,ಬ್ಲಾಕ್ ಮೇಲ್ ರಾಜಕಾರಣ ಗೊತ್ತೇ ಇಲ್ಲ. ರಾಜ್ಯ ನಾಯಕರು ಪಾರ್ಟಿ ಮೀಟಿಂಗ್ ಕರೆಯಲು ತಯಾರಿಲ್ಲ ಪಕ್ಷದಲ್ಲಿ ಸಮಸ್ಯೆ ಕೇಳೋರಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸ್ವ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದರು. 

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು ಚಂದ್ರಯಾನ ಲ್ಯಾಂಡಿಂಗ್ ಆಗಿರುವುದು ಒಂದು ದೊಡ್ಡ ಸಾಧನೆ, ಇಸ್ರೋ ವಿಜ್ಞಾನಿ(Chandrayan 3 success)ಗಳ ಸಾಧನೆಗೆ ಪ್ರಶಂಸನೀಯ, ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ ಮಾಡಿರುವ ಪ್ರಥಮ ರಾಷ್ಟ್ರ, ಇಂತ ಸಾಧನೆ ಗಳನ್ನು ಮನೆ ಮನೆಗೆ ತಿಳಿಸಬೇಕು, ಇವುಗಳನ್ನು ಮತಗಳನ್ನಾಗಿ ಪರಿವರ್ತಿಸಬೇಕು, ಆದರೆ ನಮ್ಮ ನಾಯಕರು ಭ್ರಮಲೋಕದಲ್ಲಿದ್ದಾರೆ, ಕಳೆದ ಚುನಾವಣೆ ಏನ್ ಆಗಿದೆ ಎನ್ನುವುದು ನೋಡಿಕೊಳ್ಳಲಿ, ಮೋದಿ ವಿಶ್ವನಾಯಕ, ಅದರೆ ಕಾರ್ಯಕರ್ತರ ಹಾಗೂ ರಾಜ್ಯ ನಾಯಕರ ಕೊಡುಗೆ ಏನು, ಹಿಂದೆ ಅಟಲ್ ಬಿಹಾರಿ ವಾಜಪೇಯಿ ಯವರ ಸೋಲಿಗೆ ನಾವೇ ಕಾರಣ, ಮೋದಿ ಮುಖ ತೋರಿಸಿ ಗೆಲ್ಲುತ್ತೇವೆ ಎನ್ನುವರು ಜಾಸ್ತಿ ಜನ ಇದ್ದಾರೆ, ಕರ್ನಾಟಕದಲ್ಲಿ ಹಲವು ನಾಯಕರು ಮೋದಿ(Narendra Modi) ಮುಖ ತೋರಿಸಿ ಗೆಲ್ಲುತ್ತೆವೆ ಎನ್ನುವ ಭ್ರಮಾಲೋಕದಲ್ಲಿದ್ದಾರೆ, 

ಸಿದ್ದು, ಡಿಕೆಶಿ ಭೇಟಿಯಾದ ಬಿಜೆಪಿ ಮುಖಂಡ ರೇಣುಕಾಚಾರ್ಯ: ರಾಜಕೀಯ ವಲಯದಲ್ಲಿ ಚರ್ಚೆ

ಮೋದಿ ಜನಪ್ರಿಯ ನಾಯಕ ಆದ್ರೆ ರಾಜ್ಯ ನಾಯಕರ ಕೊಡುಗೆ ಏನು?

ಕರ್ನಾಟಕದಲ್ಲಿ ಹಲವು ನಾಯಕರು ಮೋದಿ(Narendra modi) ಮುಖ ತೋರಿಸಿ ಗೆಲ್ಲುತ್ತೆವೆ ಎನ್ನುವ ಭ್ರಮಾಲೋಕದಲ್ಲಿದ್ದಾರೆ,ರಾಜ್ಯ ನಾಯಕರ ಕೊಡುಗೆ ಏನ್ ಇದೆ, ಮೋದಿಯವರ ಜನಪ್ರಿಯ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿಲ್ಲ, ಬೇರೆ ರಾಜ್ಯದ ಮುಖ್ಯಮಂತ್ರಿ ಗಳು ಮೋದಿಯವರ ಕೆಲಸವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ, ನಮ್ಮ ರಾಜ್ಯದ ನಾಯಕರನ್ನು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿ ಪ್ರಚಾರ ಮಾಡ್ತಾ ಇದಾರೆ‌, ಜನ ಸಾಮಾನ್ಯರು ಕೇಳ್ತಾ ಇದಾರೆ ರಾಜ್ಯ ನಾಯಕರನ್ನು ನೇಮಕ ಮಾಡಿಲ್ಲ ಎಂದು, ಕರ್ನಾಟಕದ ಬಿಜೆಪಿ(BJP Karnataka) ಅಡಳಿತ ವನ್ನು ಎಲ್ಲೋ ಒಂದು ಕಡೆ ಯಾರೋ ಒಬ್ಬರು ನಿಯಂತ್ರಣ ಮಾಡ್ತಾ ಇದಾರೆ, ಇದೇ ರೀತಿ ಮುಂದುವರಿದರೆ ರಾಜ್ಯ ಅಧೋಗತಿಗೆ ಹೋಗುತ್ತೆ, ಪಕ್ಷದಲ್ಲಿ ನಾಯಕರು ಇಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ, ಆದರೆ ಹೋಗುವವರು ಹೋಗಲಿ, ಇರುವವರು ಇರಲಿ ಎಂದು ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ.ಇದನ್ನೇಲ್ಲ ಬಿಡಬೇಕು ಪಕ್ಷ ಸಂಘಟನೆ ಮಾಡಬೇಕು ಎಂದು ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ರು, 

ನಾನು ಬಕೆಟ್ ಹಿಡಿಯುವ ರಾಜಕಾರಣ ಮಾಡೋದಿಲ್ಲ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂದವರಿಗೆ ಈಗ ಅದೇ ಪರಿಸ್ಥಿತಿ ಬಂದಿದೆ

ನಾನು ಬಕೆಟ್ ಹಿಡಿಯುವ ರಾಜಕಾರಣ ಮಾಡೋದಿಲ್ಲ, ರಾಜ್ಯ ನಾಯಕರು ಪಾರ್ಟಿ ಮೀಟಿಂಗ್ ಕರೆಯಲು ತಯಾರಿಲ್ಲ, ಸಮಸ್ಯೆ ಕೇಳೋರಿಲ್ಲ, ನಾನು ಬಿಜೆಪಿ ಬಿಡುತ್ತೇನೆಂದು ಎಲ್ಲೂ ಹೇಳಿಲ್ಲಾ. ಬಿಜೆಪಿ ಪಾರ್ಟಿ ಆಫೀಸ್ ನಿಂದ ರೇಣುಕಾಚಾರ್ಯ ಕಾಂಗ್ರೇಸ್ ಸೇರುತ್ತಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ‌, ನಾನು ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲಾ.

ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ(Congress mukta karnataka) ಮಾಡುತ್ತೇವೆಂದು ಹೇಳುತ್ತಿದ್ದೇವು, ಆದರೇ ಆ ಪರಿಸ್ಥಿತಿ ನಮಗೆ ಬಂದಿದೆ, ನಾನು ಬ್ಲಾಕ್ ಮೇಲ್ ರಾಜಕಾರಣ ಮಾಡೋದಿಲ್ಲ, ಕರ ಪತ್ರ ಹಂಚಿಕೊಂಡು ಬೂಟಾಟಿಕೆ ಮಾಡ್ತಿನಾ, ನಾನು ಕ್ಷೇತ್ರದ ಸಮಸ್ಯೆಗಾಗಿ ಕಾಂಗ್ರೇಸ್ ನಾಯಕರನ್ನು ಭೇಟಿ ಮಾಡಿದರೆ ಏನು ತಪ್ಪು ಎಂದು ಪ್ರಶ್ನಿಸಿದ್ರು. 

ಆಪರೇಷನ್ ಹಸ್ತ ಬೆನ್ನಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ ಎಂಪಿ ರೇಣುಕಾಚಾರ್ಯ!

ಕೆಲವರು ಪತ್ರಿಕಾ ಹೇಳಿಕೆ ‌ನೀಡುವ ಟೈಗರ್ಸ್ ಗಳಾಗಿದ್ದಾರೆ‌, ಪಕ್ಷ ನನಗೆ ತಾಯಿ ಸಮಾನ ಆದು ಪಕ್ಷ‌ ಬಿಡುವ ಪ್ರಶ್ನೇಯೇ ಇಲ್ಲಾ, ಕೆಲ ನಾಯಕರ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ ಅದನ್ನು ಖಂಡಿಸುತ್ತೇನೆ‌, ಯಡಿಯೂರಪ್ಪ(BS Yadiyurappa)ನವರನ್ನು ಕಡೆಗಣಿಸಿದ್ದೇ ಪಕ್ಷಕ್ಕೆ ಶಾಪವಾಗಿದೆ‌ ಎಂದು ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ, ಈ ಬೆಳವಣಿಗೆ ಯಿಂದ ಯಡಿಯೂರಪ್ಪ ನವರಿಗೆ ನೋವಾಗಿದೆ, ರೇಣುಕಾಚಾರ್ಯ(MP Renukacharya) ಬೆಳೆಯುತ್ತಾನೆಂದು ತುಳಿಯುವ ಕೆಲಸ ಮಾಡಿದರು, ನಾನು ಮಾತಾಡಿದ ತಕ್ಷಣ ರೇಣುಕಾಚಾರ್ಯ ‌ಪಕ್ಷ ಬಿಡುತ್ತಾನೆಂದು ಬಿಂಬಿಸುತ್ತಿದ್ದಾರೆ, ಯಾರು ರಾಜಕೀಯವಾಗಿ ಬೆಳೆಯುತ್ತಾರೋ ಅವರನ್ನು ಕತ್ತಿರುಸುತ್ತಾರೆ, ಯಾರು ಬಕೇಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ, ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಒಬ್ಬ ಮಹಾನ್ ನಾಯಕ ತಪ್ಪಿಸಿದ್ದಾರೆ, ವಿಜಯೇಂದ್ರ ಅವರಿಗೆ ಸಾಮರ್ಥ್ಯ ಇದೇ ಅವರಿಗೆ ಅವಕಾಶ ಕೊಡುತ್ತಿಲ್ಲಾ ಎಂದು ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios