ಕೆಪಿಸಿಸಿ ಕಚೇರಿ ಎದುರು ಪಕ್ಷದ ಘನತೆ| 200ಕ್ಕೂ ಹೆಚ್ಚು ಸುಧಾಕರ್‌ ಬೆಂಬಲಿಗರ ಅಮಾನತು ರದ್ದು

ಬೆಂಗಳೂರು[ಜ.17]: ಕೆಪಿಸಿಸಿ ಕಚೇರಿ ಎದುರು ಪಕ್ಷದ ಘನತೆಗೆ ಚ್ಯುತಿ ಬರುವಂತೆ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಇತ್ತೀಚೆಗೆ ಅಮಾನತುಗೊಳಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 200ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರ ಅಮಾನತು ಆದೇಶವನ್ನು ಕೆಪಿಸಿಸಿ ಹಿಂಪಡೆದಿದೆ.

ಜ.8ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ ವೇಳೆ ಆಗಮಿಸಿದ್ದ 200ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗಿದ್ದರು. ಶಾಸಕ ಡಾ

ಸುಧಾಕರ್‌ ಅವರಿಗೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ನೀಡದಂತೆ ತಡೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವೇಣುಗೋಪಾಲ್‌ ಅವರಿಗೆ ಮನವಿ ಪತ್ರ ನೀಡಲು ಮುಂದಾಗಿದ್ದರು.

ಈ ಹಿನ್ನೆ​ಲೆ​ಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಕೆ. ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಫೀಕ್‌, ಮಂಚೇನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಅಮಾನತುಗೊಳಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿ ಉಲ್ಲಾ ಆದೇಶಿಸಿದ್ದರು.

ಪಕ್ಷದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಡಾ

ಕೆ.ಸುಧಾಕರ್‌ ಜ.9ರಂದು ಪತ್ರ ಬರೆದು ಅಮಾನತುಗೊಳಿಸಿರುವ ತನ್ನ ನಿರ್ಧಾ​ರ​ವನ್ನು ಹಿಂಪ​ಡೆ​ಯು​ವಂತೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿ​ಸ​ಬ​ಹು​ದು.