ಭದ್ರಾವತಿಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಯನ್ನು ಶಾಸಕ ಸಂಗಮೇಶ್ ಪುತ್ರ ಬಸವೇಶ್ ನಿಂದಿಸಿದ ಆರೋಪ ಕೇಳಿಬಂದಿದೆ. ಬಸವೇಶ್ ಆರೋಪ ನಿರಾಕರಿಸಿ, ಪಿತೂರಿ ಎಂದಿದ್ದಾರೆ. ಸಂಗಮೇಶ್ ಕೂಡ ಮಗನನ್ನು ಸಮರ್ಥಿಸಿ, ಮಹಿಳಾ ಅಧಿಕಾರಿಯೇ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ. ಮರಳು ದೇವಾಲಯ, ಬಡವರಿಗೆ ಎಂದಿದ್ದಾರೆ.
ಭದ್ರಾವತಿ (ಫೆ.11): ಅಕ್ರಮ ಮರಳು ದಂಧೆ ತಡೆಯಲು ಹೋದ ಗಣಿ ಮತ್ತು ಭೂವಿಜ್ಞಾನದ ಮಹಿಳಾ ಅಧಿಕಾರಿ ಜ್ಯೋತಿ ಎಂಬುವವರ ವಿರುದ್ಧ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಪುತ್ರ ಬಸವೇಶ್ ಅತ್ಯಂತ ಕೆಟ್ಟ ಪದಗಳಿಂದ ಬೈದು ನಿಂದಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪ ಮತ್ತು ಮಗ ಇಬ್ಬರೂ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಶಾಸಕ ಬಿಕೆ ಸಂಗಮೇಶ್ ಪುತ್ರನ ಗೂಂಡಾಗಿರಿ, ಮಹಿಳಾ ಅಧಿಕಾರಿಗೆ ಸೊಂಟದ ಕೆಳಗಿನ ಪದ ಬಳಸಿ ನಿಂದನೆ!
ಘಟನೆ ಸಂಬಂಧ ಸಂಗಮೇಶ್ ಪುತ್ರ ಬಸವೇಶ್ ಸುವರ್ಣ ನ್ಯೂಸ್ ಗೆ ಹೇಳಿಕೆ ನೀಡಿ ಆ ಜ್ಯೋತಿ ಎಂಬ ಅಧಿಕಾರಿ ಯಾರು ಅಂತಲೇ ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲೇ ನಾನು ಅವರನ್ನು ನೋಡಿಲ್ಲ. ನೀವು ವಿನಾಕಾರಣ ಸುದ್ದಿ ಮಾಡಿದ್ದೀರಿ. ನನ್ನ ವಿರುದ್ದ ಪಿತೂರಿ ಮಾಡಲಾಗ್ತಿದೆ. ನಾನು ಹಾಗೆ ಮಾತಾಡಿದ್ದಿದ್ರೆ, ಪೋಲಿಸ್ ದೂರು ಕೊಡಬೇಕಿತ್ತು. ಅವರು ಪೋಲಿಸ್ ಸ್ಟೇಷನ್ ಗೆ ಹೋಗಲೇ ಇಲ್ಲ, ಸುಮ್ಮನೆ ಈ ರೀತಿಯ ಅಲಿಗೇಷನ್ ಮಾಡಲಾಗ್ತಿದೆ. ನಾನು ಆ ರೀತಿಯ ವರ್ತನೆ ತೋರಿಲ್ಲ. ಮಹಿಳಾ ಅಧಿಕಾರಿ ಕೂಡಾ ನನ್ನ ಮೇಲೆ ವಿನಾ ಕಾರಣ ಆರೋಪ ಮಾಡಿದ್ದಾರೆ. ಇದರ ವಿರುದ್ದ ನಾನು ಕೋರ್ಟ್ ನಲ್ಲಿ ಫೈಟ್ ಮಾಡುತ್ತೇನೆ. ಸುವರ್ಣ ನ್ಯೂಸ್ ನಲ್ಲಿ ಕೂಡಾ ನನ್ನ ಮೇಲೆ ಸುಳ್ಳು ಸುದ್ದಿ ಮಾಡಲಾಗಿದೆ ಎಂದು ಬಸವೇಶ್ ಹೇಳಿಕೆ ನೀಡಿದ್ದು, ಸುದ್ದಿ ಮಾಡಿದ ಸುವರ್ಣ ನ್ಯೂಸ್ ಮೇಲೆ ಆರೋಪ ಮಾಡಿದ್ದಾರೆ.
ಶಾಸಕನ ಮಗನ ದರ್ಬಾರ್, ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ
ಇನ್ನು ಮಗನ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸಂಗಮೇಶ್ ಕೂಡ ಪುತ್ರನನ್ನು ಸಮರ್ಥಿಸಿಕೊಂಡಿದ್ದಾರೆ.ನನ್ನ ಮಗನದ್ದು ತಪ್ಪೇನಿಲ್ಲ. ರಾಜಕೀಯದಲ್ಲಿ ಈ ರೀತಿಯ ಆರೋಪಗಳು ಸಹಜ ಇದು ಬಿಜೆಪಿ-ಜೆಡಿಎಸ್ ನವರ ಹುನ್ನಾರ. ಮಹಿಳಾ ಅಧಿಕಾರಿಗೆ ಮಧ್ಯರಾತ್ರಿ 12 ಗಂಟೆಗೆ ಅಲ್ಲಿಗೆ ಹೋಗುವ ಅವಶ್ಯಕತೆ ಏನಿತ್ತು. ಆ ಮಹಿಳೆ ದುಡ್ಡಿಗೆ ಬೇಡಿಕೆ ಇಟ್ಟಿದ್ದರು. ನಾವು ಮರಳು ಮಾರಾಟಕ್ಕೆ ಮಾಡುತ್ತಿಲ್ಲ. ದೇವಾಲಯಕ್ಕೆ, ಬಡವರು ಮನೆ ಕಟ್ಟಿಕೊಳ್ಳಲು ನೀಡುತ್ತೇವೆ. ವಿಡಿಯೋದಲ್ಲಿ ಕಾಣಿಸಿದಂತೆ ಮಾತನಾಡಿರುವುದು ನನ್ನ ಮಗನಲ್ಲ. ನಾನು ಫೋನ್ ಮಾಡಿ ವಿಚಾರಿಸಿದ್ದೇನೆ. ನನ್ನ ಮಗ ಆ ರೀತಿ ಮಾಡೇ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
