‘ಇಂತಹದ್ದೇ ಖಾತೆ ಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ ಪಿಕ್ಚರ್‌ ಅಭಿ ಬಾಕಿ ಹೈ ಎಂದಿರುವ ಸಚಿವ ಆನಂದ್‌ ಸಿಂಗ್‌ ಅವರಿಗೆ ಥಿಯೇಟರ್‌ಗಳು ಬಂದ್‌ ಆಗಿವೆ ಎಂದು ಹೇಳಿದ್ದೇನೆ  ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿಕೆ

ಬೆಂಗಳೂರು (ಆ.22): ‘ಇಂತಹದ್ದೇ ಖಾತೆ ಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ. ಹೀಗಾಗಿ ಪಿಕ್ಚರ್‌ ಅಭಿ ಬಾಕಿ ಹೈ ಎಂದಿರುವ ಸಚಿವ ಆನಂದ್‌ ಸಿಂಗ್‌ ಅವರಿಗೆ ಥಿಯೇಟರ್‌ಗಳು ಬಂದ್‌ ಆಗಿವೆ ಎಂದು ಹೇಳಿದ್ದೇನೆ’ ಎಂದು ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಬ್ಬ ತಮ್ಮನಾಗಿ ಸಚಿವ ಸ್ಥಾನದ ಕುರಿತ ಅಸಮಾಧಾನದ ಬಗ್ಗೆ ಮಾತನಾಡಿದ್ದೇನೆ. ಕೊರೋನಾ ಸಂದರ್ಭದಲ್ಲಿ ಥಿಯೇಟರ್‌ಗಳು ಬಂದ್‌ ಆಗಿವೆ. ನೀನ್ಯಾಕಣ್ಣಾ ಈ ರೀತಿ ಹೇಳ್ತಿದಿಯಾ ಎಂದಿದ್ದೇನೆ’ ಎಂದು ಹೇಳಿದರು. ಕೊಟ್ಟಖಾತೆಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದೇನೆ. ಅವರೂ ಈಗ ಸಮಾಧಾನಗೊಂಡಿದ್ದಾರೆ. ಅವರ ಕ್ಷೇತ್ರದಲ್ಲಿ ಇದ್ದಾರೆ. ಸದ್ಯದಲ್ಲೇ ಅವರ ಖಾತೆ ವಹಿಸಿಕೊಂಡು ಕೆಲಸ ಮಾಡಲಿದ್ದಾರೆ ಎಂದರು.

ಬೊಮ್ಮಾಯಿ ಬೆಳಗಾವಿ ಭೇಟಿ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಪ್ರವಾಸೋದ್ಯಮ ಖಾತೆ ಏನು ಕಡಿಮೆ ಖಾತೆಯಲ್ಲ. ಅದು ಸಹ ಉತ್ತಮ ಖಾತೆ ಎಂದರು.

ಆನಂದ್‌ ಸಿಂಗ್‌ ಅವರ ಬಳಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಮಾತನಾಡಿದ್ದಾರೆ. ಉಪ ರಾಷ್ಟ್ರಪತಿಗಳು ಬಂದಾಗ ಅವರ ಕಾರ್ಯಕ್ರಮದಲ್ಲೂ ಆನಂದ್‌ ಸಿಂಗ್‌ ಭಾಗಿಯಾಗಿದ್ದಾರೆ. ಸದ್ಯದಲ್ಲೇ ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.