Asianet Suvarna News Asianet Suvarna News

Chitradurga: ಮುಟ್ಟೆಂದು ಊರಾಚೆ ಇದ್ದವರನ್ನು ಮನೆಗೆ ಕರೆತಂದು ಶಾಸಕಿ ಪೂರ್ಣಿಮಾ ಜಾಗೃತಿ

ಕಾರ್ಗತ್ತಲು, ಕೊರೆವ ಚಳಿಯ ನಡುವೆ ಋುತುಚಕ್ರದಿಂದಾಗಿ ಊರಾಚೆ ಮರದ ಬುಡದಲ್ಲಿ ಮಲಗಿದ್ದ ಸುಮಾರು ಏಳು ಮಂದಿ ಮಹಿಳೆಯರ ಮನವೊಲಿಸಿ ಮೌಢ್ಯ ನಿವಾರಣೆಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಯತ್ನಿಸಿದ ಅಪರೂಪದ ಪ್ರಸಂಗ ಬಡ ಗೊಲ್ಲರಹಟ್ಟಿ ಸಾಕ್ಷಿಯಾಯಿತು.

MLA K Poornima Awareness to Badagollarahatti People about Superstition gvd
Author
First Published Feb 10, 2023, 2:00 AM IST

ಹಿರಿಯೂರು (ಫೆ.10): ಕಾರ್ಗತ್ತಲು, ಕೊರೆವ ಚಳಿಯ ನಡುವೆ ಋುತುಚಕ್ರದಿಂದಾಗಿ ಊರಾಚೆ ಮರದ ಬುಡದಲ್ಲಿ ಮಲಗಿದ್ದ ಸುಮಾರು ಏಳು ಮಂದಿ ಮಹಿಳೆಯರ ಮನವೊಲಿಸಿ ಮೌಢ್ಯ ನಿವಾರಣೆಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಯತ್ನಿಸಿದ ಅಪರೂಪದ ಪ್ರಸಂಗಕ್ಕೆ ಹಿರಿಯೂರು ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಗೊಲ್ಲರಹಟ್ಟಿ ಸಾಕ್ಷಿಯಾಯಿತು. ಬಡ ಗೊಲ್ಲರಹಟ್ಟಿಗೆ ಭೇಟಿ ನೀಡಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮರದ ಕೆಳಗೆ ಮಲಗಿದ್ದ ಮಹಿಳೆಯರನ್ನು ಕಂಡು ಯೋಗಕ್ಷೇಮ ವಿಚಾರಿಸಿದ್ದಾರೆ. 

ಋುತುಚಕ್ರಕ್ಕೆ ಒಳಗಾದ ಮಹಿಳೆಯರು ಮೂರು ದಿನ ಮನೆ ಒಳಗೆ ಹೋಗದೆ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಊರ ಹೊರಗೆ ಮೂರು ದಿನ ಕಳೆಯುವ ಸಂಗತಿ ಬೆಳಕಿಗೆ ಬಂದಿದೆ. ಅದೇ ಮೌಢ್ಯ ಆಚರಣೆಗಳ ಮುಂದುರಿಸುತ್ತಿರುವದನ್ನು ಕಂಡು ಬೇಸರ ವ್ಯಕ್ತಪಡಿಸಿ ಊರ ಜನರನ್ನು ಕರೆಸಿ ಮನವೊಲಿಸಲು ಯಶಸ್ವಿಯಾದರು. ಈ ವೇಳೆ ಮಾತನಾಡಿದ ಅವರು, ಇಂತಹ ಬದಲಾದ ಕಾಲದಲ್ಲೂ ಮೂಢನಂಬಿಕೆ ಆಚರಣೆ ಮಾಡುವುದು ಸರಿಯಾದುದಲ್ಲ. ಈ ಪದ್ದತಿಯನ್ನು ಇನ್ನೂ ಅನೇಕ ಗೊಲ್ಲರಹಟ್ಟಿಗಳಲ್ಲಿ ಆಚರಿಸುತ್ತಿದ್ದು, ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. 

ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ‌ ಸಮ್ಮೇಳನ: ರೋಹಿತ್ ಚಕ್ರತೀರ್ಥರಿಗೆ ಆಹ್ವಾನ ನೀಡಿರುವುದಕ್ಕೆ ವಿರೋಧ

ತಿಂಗಳಿಗೊಮ್ಮೆ ಹೆಣ್ಣು ಮಕ್ಕಳು ಮುಟ್ಟು ಆಗುವುದರಿಂದಲೇ ಬಹಳಷ್ಟು ಮಕ್ಕಳು ಶಾಲೆಗೆ ಹೋಗದೇ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಗ್ರಾಮದ ಹಿರಿಯರ, ಮಹಿಳೆಯರ ಮನವೊಲಿಸಿ ಈ ಶತ ಶತಮಾನಗಳಿಂದ ಆಚರಣೆ ಮಾಡಿಕೊಂಡು ಬರುತ್ತಿರುವ ಈ ಮೌಡ್ಯಾಚರಣೆಗೆ ಸದ್ಯಕ್ಕೆ ತಾತ್ಕಾಲಿಕ ವಿರಾಮ ಹಾಕಲಾಗಿದೆ ಎಂದರು. ಗ್ರಾಮ ಪಂಚಾಯ್ತಿ ಸದಸ್ಯರು, ಆಶಾ ಕಾರ್ಯಕರ್ತೆಯರು ಈ ವೇಳೆ ಉಪಸ್ಥಿತರಿದ್ದರು. ಋುತುಸ್ರಾವದ ಕಾರಣಕ್ಕೆ ಊರ ಹೊರಗಿದ್ದ ಗೊಲ್ಲರಹಟ್ಟಿ ಮಹಿಳೆಯರ ಮೇಲೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ನೀರು ಸುರಿದು ಮನೆಯೊಳಗೆ ಕರೆದೊಯ್ದರು.

Follow Us:
Download App:
  • android
  • ios