ತಾಲೂಕಿನ ಗಡಿ ಗ್ರಾಮವಾದ ಚೌಳಹಿರಿಯೂರು ಸಮೀಪದ ತಮ್ಮಿಹಳ್ಳಿಯಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಕಡೂರು (ಮೇ.13) ತಾಲೂಕಿನ ಗಡಿ ಗ್ರಾಮವಾದ ಚೌಳಹಿರಿಯೂರು ಸಮೀಪದ ತಮ್ಮಿಹಳ್ಳಿಯಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಚೌಳಹಿರಿಯೂರಿನ ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಎಂಬುವರಿಗೆ ಸೇರಿದ ಸುಮಾರು 20 ದನಗಳನ್ನು ಕಳ್ಳರು ತಂತಿ ಬೇಲಿಯೊಳಗೆ ಹಿಡಿದು ಕೂಡಿ ಹಾಕಿ ಬೇರೆಡೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆ ಪ್ರಯತ್ನ ವಿಫಲಗೊಂಡಿದ್ದರಿಂದ ಒಂದು ಹಸುವಿನ ಕೆಚ್ಚಲು ಕತ್ತರಿಸಿ ಪರಾರಿಯಾಗಿದ್ದಾರೆ. ಬಳಿಕ ಈ ಹಸು ಸತ್ತಿದ್ದು ಈ ಕೃತ್ಯವನ್ನು ಗ್ರಾಮಸ್ಥರು ಖಂಡಿಸುವ ಮೂಲಕ ರೈತರು ಯಗಟಿ ಠಾಣೆಗೆ ದೂರು ನೀಡಿದ್ದಾರೆ.

ಬಳಿಕ ಬೀರೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಯಗಟಿ ಪಿಎಸ್‍ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ರಾಸುಗಳ ಅಪಹರಣ: ಇತ್ತೀಚೆಗೆ ಚೌಳಹಿರಿಯೂರು ಭಾಗದಲ್ಲಿ ದನಗಳ್ಳರ ಹಾವಳಿ ಹೆಚ್ಚಾಗಿದೆ. ಕೊಟ್ಟಿಗೆಯೊಳಗೆ ಹಾಗೂ ಮನೆ ಮುಂಭಾಗದಲ್ಲಿ ಕಟ್ಟಿದ ದನಗಳನ್ನು ರಾತ್ರೋ ರಾತ್ರಿ ಅಪಹರಿಸುತ್ತಿರುವ ಪ್ರಕರಣಗಳು ನಡೆದಿವೆ.

ಇದನ್ನೂ ಓದಿ:  ಹಸುವಿನ ಕೆಚ್ಚಲು ಕತ್ತರಿಸುವ ರಾಕ್ಷಸರ ನಡುವೆ, ಕರುವಿನ ಮೊದಲ ವರ್ಷದ ಹುಟ್ಟುಹಬ್ಬ ಮಾಡಿದ ಬಾಗಲಕೋಟೆಯ ರೈತ!

ವೇದಾವತಿ ನದಿ ದಡದಲ್ಲಿ ಮೇಯುವ ದನಗಳನ್ನು ಹಿಡಿದು ಸಾಗಿಸಿದ ನಿದರ್ಶನಗಳೂ ಇವೆ. ಈವರೆಗೆ ಸುಮಾರು 50 ರಿಂದ 60 ರಾಸುಗಳ ಅಪಹರಣ ನಡೆದಿದೆ ಎಂದು ಗ್ರಾಮಸ್ಥರು ದೂರಿದರು.12ಕೆಕೆಡಿಯು2.ಕಡೂರು ತಾಲೂಕು ಚೌಳಹಿರಿಯೂರು ಗ್ರಾಮದ ಸಮೀಪದ ರೈತರ ಹಸುವಿನ ಕೆಚ್ಚಲು ಕತ್ತರಿಸಿರುವುದು.