Asianet Suvarna News Asianet Suvarna News

ಡಿಸಿಎಂ ಹುದ್ದೆ ಬೇಡಿಕೆ: ಸಚಿವ ಜಮೀರ್‌ ಅಹ್ಮದ್‌ ಖಾನ್ ಹೇಳಿದ್ದಿಷ್ಟು

ಈಗಾಗಲೇ ಪರಮೇಶ್ವರ ಅವರು, ರಾಜಣ್ಣ ಅವರು, ಜಾರಕಿಹೊಳಿ ಅವರು ಸೇರಿದಂತೆ ಮತ್ತಿತರರು ತಮ್ಮ ವಿಚಾರ ವ್ಯಕ್ತಪಡಿಸಿದ್ದಾರೆ. ನಾನು ಹಾಗೂ ಸಚಿವ ರಹೀಮ್‌ ಖಾನ್‌ ಅವರೂ ನಮ್ಮ ವಿಚಾರ ವ್ಯಕ್ತಪಡಿಸಿದ್ದೇವೆ. ನಮ್ಮದು ಹೈಕಮಾಂಡ್‌ ಪಕ್ಷ ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತೆ ಎಂದ ಸಚಿವ ಜಮೀರ್‌ ಅಹ್ಮದ್‌ ಖಾನ್

Minister Zameer Ahmed Khan React to Demand for the post of DCM in Karnataka grg
Author
First Published Jun 25, 2024, 7:08 AM IST | Last Updated Jun 25, 2024, 7:08 AM IST

ಬೀದರ್‌(ಜೂ.25): ವಕ್ಫ್‌ ಬೋರ್ಡ್‌ಗೆ ಸೇರಿದ ಆಸ್ತಿ ಸರ್ಕಾರ ಕೊಟ್ಟಿದ್ದಲ್ಲ ದಾನಿಗಳು ಕೊಟ್ಟಿರುವಂಥದ್ದು. ಸಮಾಜದ, ಬಡ ಜನರ ಅಭಿವೃದ್ಧಿಗಾಗಿ ದಾನಿಗಳು ನೀಡಿರುವ ಆಸ್ತಿ. ಹೀಗಾಗಿ ಸರ್ಕಾರ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್‌ ಅಹ್ಮದ್‌ ಖಾನ್ ಸ್ಪಷ್ಟಪಡಿಸಿದರು.

ಅವರು ಸೋಮವಾರ ಈ ಕುರಿತಂತೆ ನಗರದಲ್ಲಿ ವಕ್ಫ್‌ ಅದಾಲತ್‌ಗೆ ಚಾಲನೆ ನೀಡಿದ ಸಂದರ್ಭದಲ್ಲಿ ಭೇಟಿಯಾದ ಸುದ್ದಿಗಾರರಿಗೆ ವಕ್ಫ್‌ ಬೋರ್ಡ್‌ ರದ್ದು ಮಾಡಬೇಕು ಎಂಬ ಬಸವರಾಜ ಪಾಟೀಲ್‌ ಯತ್ನಾಳ್‌ ಹೇಳಿಕೆ ವಿಚಾರವಾಗಿ ಉತ್ತರಿಸಿ, ಸರ್ಕಾರ ವಕ್ಫ್‌ ಬೋರ್ಡ್‌ಗೆ ಆಸ್ತಿ ಕೊಟ್ಟಿದ್ದರೆ ಅದನ್ನು ತೆಗೆದುಕೊಳ್ಳುವ ಹಕ್ಕು‌ ಸರ್ಕಾರಕ್ಕೆ ಇತ್ತು. ಆದರೆ ವಕ್ಫ್‌ ಬೋರ್ಡ್‌ಗೆ ದಾನಿಗಳು ಆಸ್ತಿ ಕೊಟ್ಟಿದ್ದಾರೆ ಇದು ವಕ್ಫ್‌ನ ಸ್ವಂತ ಆಸ್ತಿ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲ್ಲ: ಸಚಿವ ಜಮೀರ್‌ ಅಹ್ಮದ್‌

ರಾಜ್ಯದಲ್ಲಿ ಒಟ್ಟು 37 ಸಾವಿರ ಎಕರೆಗಳಷ್ಟು ಜಮೀನು ವಕ್ಫ್‌ ಬೋರ್ಡ್‌ ಆಸ್ತಿ ಇದೆ. ಇದರಲ್ಲಿ 4570 ಎಕರೆಗಳಷ್ಟು ‌ವಕ್ಫ್‌ ಆಸ್ತಿ ಒತ್ತುವರಿಯಾಗಿದೆ ಅದಕ್ಕೆ ವಕ್ಫ್‌ ಅದಾಲತ್‌ ಮಾಡುತ್ತಿದ್ದೇವೆ. ವಕ್ಫ್‌ ಬೋರ್ಡ್‌ಗೆ ದಾನಿಗಳು ಆಸ್ತಿ ಕೊಡಬೇಕಾದರೆ ಅದನ್ನು ಯಾವುದಕ್ಕೆ ಬಳಸಬಹುದು ಎಂದು ಷರತ್ತು ಹಾಕಿ ಜಮೀನು ಕೊಟ್ಟಿರುತ್ತಾರೆ ಎಂದು ತಿಳಿಸಿದರು.

ವಕ್ಫ್‌ ಆಸ್ತಿ ಜಮೀರ್‌ ಅಪ್ಪನ ಆಸ್ತಿ ಅಲ್ಲ ಎಂಬ ಯತ್ನಾಳ್‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಸಚಿವರು ಅದು ಅವರ ತಂದೆಯ ಆಸ್ತಿನೂ ಅಲ್ಲ, ನನ್ನ ತಂದೆಯ ಆಸ್ತಿಯೂ ಅಲ್ಲ. ಇದು ಜನರು ದಾನ ಮಾಡಿದ ಆಸ್ತಿ. ಬೇರೆಯವರನ್ನು ಖುಷಿಪಡಿಸಲಿಕ್ಕಾಗಿ ಮುಸ್ಲಿಂಮರ ಬಗ್ಗೆ ಯತ್ನಾಳ್‌ ಮಾತಾಡ್ತಾರೆ. ಅವರಿಗೆ ರಾಜಕೀಯ ಅಷ್ಟೇ ಬೇಕು. ಹಿಂದೂ ಮುಸ್ಲೀಂ ಯಾರೂ ಬೇಕಾಗಿಲ್ಲ. ಅವರಿಗೆ ಅಭಿವೃದ್ಧಿ ಕೆಲಸ ಮಾಡೋಕೆ ಹೇಳಿ ಎಂದ ಅವರು ಮುಸ್ಲಿಂಮರು ಪಾಕಿಸ್ತಾನಕ್ಕೆ ಹೋಗ್ಬೇಕೆಂಬ ಯತ್ನಾಳ್‌ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿ, ನಾವ್ಯಾಕೆ ಪಾಕಿಸ್ತಾನಕ್ಕೆ ಹೋಗ್ಬೇಕು, ಸ್ವಾತಂತ್ರ್ಯ ತಂದವರು ನಾವು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್‌ಎಸ್‌ಎಸ್‌ನವರು ಯಾರ ಜೊತೆಗಿದ್ರು ಎಂಬುವದರ ಇತಿಹಾಸವಿದೆ. ಇದು ನಮ್ಮ ದೇಶ ಎಂದು ಯತ್ನಾಳ್‌ ವಿರುದ್ಧ ಜಮೀರ್‌ ಕಿಡಿ ಕಾರಿದರು.

ಕರ್ನಾಟಕದಲ್ಲಿ ಮತ್ತೆ ಭುಗಿಲೆದ್ದ ಡಿಸಿಎಂ ಕೂಗು..!

ಡಿಸಿಎಂ ಹುದ್ದೆ ವಿಚಾರ ವ್ಯಕ್ತಪಡಿಸಿದ್ದೇವೆ, ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು:

ಡಿಸಿಎಂ ಹುದ್ದೆ ಬೇಡಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಪರಮೇಶ್ವರ ಅವರು, ರಾಜಣ್ಣ ಅವರು, ಜಾರಕಿಹೊಳಿ ಅವರು ಸೇರಿದಂತೆ ಮತ್ತಿತರರು ತಮ್ಮ ವಿಚಾರ ವ್ಯಕ್ತಪಡಿಸಿದ್ದಾರೆ. ನಾನು ಹಾಗೂ ಸಚಿವ ರಹೀಮ್‌ ಖಾನ್‌ ಅವರೂ ನಮ್ಮ ವಿಚಾರ ವ್ಯಕ್ತಪಡಿಸಿದ್ದೇವೆ. ನಮ್ಮದು ಹೈಕಮಾಂಡ್‌ ಪಕ್ಷ ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತೆ ಎಂದರು.

ರೇಣುಕಾಸ್ವಾಮಿ ಹತ್ಯೆಯ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿರುವ ನಟ ದರ್ಶನ ಕುರಿತಾಗಿ ಸಚಿವ ಜಮೀರ್‌ ಅಹ್ಮದ ಖಾನ್‌ ಪ್ರಶ್ನೆಯೊಂದಕ್ಕೆ ಚುಟುಕಾಗಿ ಉತ್ತರಿಸಿ, ದರ್ಶನಗೆ ಆಯ್ತು ಶಿಕ್ಷೆ ಅವರಿಗ ಜೈಲಲ್ಲಿದ್ದಾರೆ ಎಂದು ಹೇಳಿ ಅಲ್ಲಿಂದ ಜಾರಿಕೊಂಡರು.

Latest Videos
Follow Us:
Download App:
  • android
  • ios