SC, ST ಕುಟುಂಬಗಳಿಗೆ ನೀಡುವ ಉಚಿತ ವಿದ್ಯುತ್ ಯೋಜನೆ ರದ್ದಾಯ್ತಾ? ಇಲ್ಲಿದೆ ಸತ್ಯಾಸತ್ಯತೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ 'ಅಮೃತ ಜ್ಯೋತಿ' ಯೋಜನೆಯಡಿ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಒದಗಿಸುವ ಕಾರ್ಯಕ್ರಮ ರದ್ದಾಗಿದೆಯೇ? ಇಲ್ಲಿದೆ ಸತ್ಯಾಸತ್ಯತೆ

Minister Sunil Kumar Clarify about free electricity Yojana for sc st families rbj

ಬೆಂಗಳೂರು, (ಸೆಪ್ಟೆಂಬರ್ 05): ಬಡತನ ರೇಖೆಗಿಂತ ಕೆಳಗಿರುವ ಎಸಿ. ಎಸ್​ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್​ ವರೆಗೆ ಉಚಿತ ವಿದ್ಯುತ್ ಒದಗಿಸುವ ​'ಅಮೃತ ಜ್ಯೋತಿ'ಯೋಜನೆಯನ್ನು ಸರ್ಕಾರ ರದ್ದು ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ, ಈ ಯೋಜನೆ ರದ್ದಾಗಿಲ್ಲ. ಬದಲಿಗೆ ಮಾರ್ಗಸೂಚಿಗಳನ್ನು ನೀಡಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ.

ಹೌದು...ಈ ಯೋಜನೆಯನ್ನು ಜಾರಿಗೆ ಮಾಡಿ ಮೇ 18 ರಂದು ಆದೇಶ ಹೊರಡಿಸಲಾಗಿತ್ತು. ಫಲಾನುಭವಿಗಳ ಅರ್ಹತೆ, ಮಂಜೂರಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳುಳ್ಳ ಸುತ್ತೋಲೆಯನ್ನು ಆಗಸ್ಟ್‌ 24 ರಂದು ನೀಡಲಾಗಿತ್ತು. ಇದೀಗ ಆ. 24ರ ಸುತ್ತೋಲೆಯನ್ನು ಹಿಂಪಡೆದು ಸರ್ಕಾರದ ಶನಿವಾರ (ಸೆಪ್ಟೆಂಬರ್‌ 3) ಆದೇಶ ಹೊರಡಿಸಿದೆ.

ಆದ್ರೆ, ಜನರು ಮಾತ್ರ 'ಅಮೃತ ಜ್ಯೋತಿ'ಯೋಜನೆಯನ್ನು ಸರ್ಕಾರ ರದ್ದು ಮಾಡಿದೆ ಅಂತ ಆಕ್ರೋಶ ಕಿಡಿಕಾರಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ನೀಡಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

SC-ST ಗ್ರಾಹಕರಿಗೆ 75 ಯೂನಿಟ್ ವಿದ್ಯುತ್ ಉಚಿತ: ಸರ್ಕಾರದ ವಿನೂತನ ಯೋಜನೆ

ಸುನಿಲ್ ಕುಮಾರ್ ಸ್ಪಷ್ಟನೆ
ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ ಉಚಿತ ವಿದ್ಯುತ್‌ ಪೂರೈಸುವ ಯೋಜನೆಯನ್ನೇ ಕೈಬಿಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌, 'ಯೋಜನೆ ಅನುಷ್ಠಾನದ ಆದೇಶ ರದ್ದಾಗಿಲ್ಲ. ಮಾರ್ಗಸೂಚಿಗಳನ್ನು ನೀಡಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.

ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ್ದ ಕೆಲವು ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕಾಗಿ ಸುತ್ತೋಲೆ ರದ್ದು ಮಾಡಲಾಗಿದೆ  ಎಂದು ಅವರು ಮಾಹಿತಿ ನೀಡಿದ್ದಾರೆ.  ಈ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸರ್ಕಾರದ ವಿರುದ್ಧ ಕಿರಿಕಾರಿದ ಪ್ರಿಯಾಂಕ್ ಖರ್ಗೆ
 ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಹ  ಈ ಬಗ್ಗೆ ಕಿಡಿಕಾರಿದ್ದಾರೆ.  ಕೇವಲ ಉದುದ್ದ ಭಾಷಣದ ಹೊರತಾಗಿ, ಶೋಷಿತ ಸಮುದಾಯಗಳ ಪರ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡಲು ಸಿದ್ದವಿಲ್ಲ.  ಕೇವಲ ಒಂದೇ ವಾರದಲ್ಲಿ ತಾನು ಹೊರಡಿಸಿದ್ದ ಕಾರ್ಯಕ್ರಮವನ್ನು ಮನುವಾದಿ ಬಿಜೆಪಿ ಸರ್ಕಾರ ಹಿಂಪಡೆದಿದ್ದೇಕೆ? ಕೇಶವಕೃಪಾ ಆದೇಶದ ಮೇರೆಗೋ? ಅಥವಾ ನಾಗಪುರದ ಆಜ್ಞೆಯ ಮೇರೆಗೋ? ಎಂದು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ತಿಳಿಸಿ ಹೇಳಿದ ಇಂಧಣ ಸಚಿವ
ಯೆಸ್...SC,ST ಸಮುದಾಯದವರಿಗೆ ಉಚಿತ ವಿದ್ಯುತ್ ಒದಗಿಸುವ 'ಅಮೃತ ಜ್ಯೋತಿ'ಯನ್ನು ಸರ್ಕಾರ ರದ್ದು ಮಾಡಿದೆ ಎನ್ನುವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ಟ್ವಿಟ್ಟರ್‌ನಲ್ಲಿ ತಿಳಿಸಿ ಹೇಳುವು ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಮಾನ್ಯ ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಅಜ್ಞಾನ ಹಾಗೂ ಅರೆಬೆಂದ ಮಾಹಿತಿ ಸಂಗ್ರಹಣೆ ಬಗ್ಗೆ ಅನುಕಂಪವಿದೆ.
ಫಲಾನುಭವಿಗಳ ಆಯ್ಕೆಗೆ ರೂಪಿಸಿದ್ದ ಮಾನದಂಡಗಳನ್ನು ಸರಳಗೊಳಿಸುವುದಕ್ಕಾಗಿ ಹಳೆಯ ಸುತ್ತೋಲೆಯನ್ನು ವಾಪಾಸ್ ತೆಗೆದುಕೊಂಡರೆ ಯೋಜನೆಯೇ ರದ್ದು ಎಂದು ಬೊಬ್ಬೆ ಹಾಕುತ್ತಿದ್ದೀರಿ ಎಂದು ಟಾಂಗ್ ಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios