Asianet Suvarna News Asianet Suvarna News

ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನಗೆ ರಾಜ್ಯಾತಿಥ್ಯ ಪ್ರಕರಣ: ಇದು ಸಾರ್ವಜನಿಕ ಹಿತಾಸಕ್ತಿ ವಿಷಯವೇ ಅಲ್ಲ ಎಂದ ಸಚಿವ!

'ಎಲ್ಲದಕ್ಕೂ ಉತ್ತರ ಕೊಡೋಕೆ ಆಗೊಲ್ಲ. ಅದು ಸಾರ್ವಜನಿಕ ಹಿತಾಸಕ್ತಿ ವಿಷಯವೇ ಅಲ್ಲ' ಎನ್ನುವ ಮೂಲಕ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ಕೊಟ್ಟಿರುವ ಪ್ರಕರಣ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದರು.

Minister sathish jarkiholi refused to react about darshan parties with rowdysheeter in jail rav
Author
First Published Aug 26, 2024, 2:39 PM IST | Last Updated Aug 26, 2024, 2:39 PM IST

ಬೆಳಗಾವಿ (ಆ.26): 'ಎಲ್ಲದಕ್ಕೂ ಉತ್ತರ ಕೊಡೋಕೆ ಆಗೊಲ್ಲ. ಅದು ಸಾರ್ವಜನಿಕ ಹಿತಾಸಕ್ತಿ ವಿಷಯವೇ ಅಲ್ಲ' ಎನ್ನುವ ಮೂಲಕ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ಕೊಟ್ಟಿರುವ ಪ್ರಕರಣ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದರು

ಬೆಳಗಾವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,  ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಕೇಸ್ ಅದು ಆ ಇಲಾಖೆಗೆ ಸಂಬಂಧಿಸಿದ್ದು, ಅದರ ಬಗ್ಗೆ ರಾಜ್ಯದ ಜೊತೆಗೆ ಚರ್ಚೆ ಮಾಡೋ ಅವಶ್ಯಕತೆ ಇಲ್ಲ. ಇದು ಸಾರ್ವಜನಿಕವಾಗಿ ಚರ್ಚೆ ಮಾಡೋ ವಿಷಯವೇ ಅಲ್ಲ. ಇಲಾಖೆಯವರೇ ಪ್ರತಿಕ್ರಿಯೆ ಕೊಡಬೇಕು. ಕ್ರಮ ಜರುಗಿಸಲು ಇಲಾಖೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದ್ದಾರೆ. ಅವರೇ ಇದಕ್ಕೆ ಸೃಷ್ಟೀಕರಣ ಕೊಟ್ಟರೆ ಒಳ್ಳೆಯದು ಅದಕ್ಕೊಂದು ಮಹತ್ವ ಇರುತ್ತೆ ಎಂದರು.

'ಇವತ್ತು ಸಸ್ಪೆಂಡ್ ಮಾಡಿದ್ದೇನೆ ಅಂತಿದ್ದೀರಿ, ಇಷ್ಟು ದಿನ ಕತ್ತೆ ಕಾಯ್ತಾ ಇದ್ರಾ?' ಸಿಎಂ, ಗೃಹಸಚಿವ ವಿರುದ್ಧ ಕೇಂದ್ರ ಸಚಿವ ಗರಂ!

ಇನ್ನು ಸಿಎಂ ಬೆನ್ನಿಗೆ ಜಾರಕಿಹೊಳಿ ಬ್ರದರ್ಸ್ ನಿಂತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದಕ್ಕೂ ಇದಕ್ಕೂ ಏನು ಸಂಬಂಧವಿಲ್ಲ, ಬಹಳ ದಿನಗಳಿಂದ ಬರಬೇಕಿತ್ತು ಬರ್ತಿದ್ದಾರಷ್ಟೇ ಎಂದು ಸಮಜಾಯಿಷಿ ನೀಡಿದರು.  ಇನ್ನು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ನೂರು ಕೋಟಿ ಆಮಿಷೆ ನೀಡಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು 'ಅದಕ್ಕೂ ನನಗೆ ಸಂಬಂಧ ಇಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರಿಗೆ ಯಾರು ಕಾಂಟ್ಯಾಕ್ಟ್ ಮಾಡಿದ್ದಾರೆ, ನನಗೆ ಗೊತ್ತಿಲ್ಲ. ಅಪರೇಷನ ಕಮಲ್ ವಿಚಾರ, ಮುಗಿದು ಹೋದ ಅಧ್ಯಾಯ ಎಂದರು.

Latest Videos
Follow Us:
Download App:
  • android
  • ios