ಪ್ರಣಾವನಂದ ಸ್ವಾಮೀಜಿ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ. ಪ್ರಣಾವನಂದ ಸ್ವಾಮೀಜಿ ತಲೆಕೆಟ್ಟೋರು. ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೂ ನೋ ಕಾಮೆಂಟ್ ಎಂದ ಮಧು ಬಂಗಾರಪ್ಪ 

ಹುಬ್ಬಳ್ಳಿ(ಡಿ.30):  ಚೆಕ್ ಬೌನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾದ್ಯಮದವರು ಮಾಹಿತಿ ಕರೆಕ್ಟ್ ಹಾಕಿ. ನಾನು ಸೆಟ್ಲಮೆಂಟ್ ಮಾಡಿಕೊಂಡಿದ್ದೇನೆ. ಜನೆವರಿ 31 ರೊಳಗೆ ನಾವೇ ಕೊಡ್ತೀವಿ ಎಂದು ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಶಿಕ್ಷೆಗೆ ಗುರಿ ಆಗತ್ತೆ ಅಂದ್ರೆ ತಪ್ಪಾಗತ್ತೆ. ಇದು ನಮ್ಮ ತಂದೆಯವರ ಕಾಲದ್ದು, ಅದನ್ನು ನಿಮಗೆ ಹೇಳೋ ಅವಶ್ಯಕತೆ ಇಲ್ಲ. ಇದು ಹಳೇ ಕೇಸ್ ಚೆಕ್ ಬೌನ್ಸ್ ಬಿಟ್ಟ ಬಿಡಿ, ಅದು ಚೇಂಜ್ ಮಾಡಿ. ಇದು ವಯಕ್ತಿಕ ಅಲ್ಲ, ಕಂಪನಿಗೆ ಸಂಭಂದಿಸಿದ್ದು. ನೀವು ನೋಡಿ ಹಾಕಿ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ. 

ಚೆಕ್‌ ಬೌನ್ಸ್‌ ಕೇಸ್‌: ಸಚಿವ ಮಧು ಬಂಗಾರಪ್ಪ ದೋಷಿ

ಪ್ರಣಾವನಂದ ಸ್ವಾಮೀಜಿ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ. ಪ್ರಣಾವನಂದ ಸ್ವಾಮೀಜಿ ತಲೆಕೆಟ್ಟೋರು. ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೂ ಮಧು ಬಂಗಾರಪ್ಪ ನೋ ಕಾಮೆಂಟ್ ಎಂದಿದ್ದಾರೆ. 

ಶಾಲಾ ಶೌಚಾಲಯ ಮಕ್ಕಳಿಂದ ಕ್ಲೀನಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಇದಕ್ಕೆ ಹೊಸ ಕಾನೂನು‌ ಮಾಡ್ತೀದಿವಿ. ನಾಳೆ ನಾಡಿದ್ದು ಹೊಸ ಆದೇಶ ಬರತ್ತೆ. ಮಕ್ಕಳ ಕಡೆ ಯಾರೂ ಇಂತಹ ಕೆಲಸ ಮಾಡಿಸಬಾರದು. ಕೆಲವು ಕಡೆ ನಾವು ‌ಕೇಸ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.