ಬೆಂಗಳೂರು, (ಜ.08): ಶುಕ್ರವಾರ ನಗರದ ಹೊಟಲ್ ಕ್ಯಾಪಿಟಲ್‌ ನಲ್ಲಿ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ  ಎಲ್ಲಾ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ, ಮುಖ್ಯ ಅಭಿಯಂತರರ ಹಾಗೂ ನೂಡಲ್ ಅಧಿಕಾರಿಗಳ  ಕಾರ್ಯಾಗಾರ ನಡೆಯಿತು. ಅದರ ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದಾರೆ.

ಪ್ರಧಾನ ಗ್ರಾಮ ಸಡಾಕ್ ಯೋಜನೆ ಮೂಲಕ 2169 ಕೋಟಿ ಮೊತ್ತದಲ್ಲಿ ಕಾಮಗಾರಿ ಆರಂಭ ಮಾಡಲಾಗಿದೆ.  ಎರಡು ಹಂತಕ್ಕೆ 1271 ಕೋಟಿ ರೂ ಅನುದಾನ ಈಗಾಗಲೇ ಬಂದಿದೆ. 5427 ಕೀ.ಮೀಗೆ 3671 ಕೋ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. 1ಕೋಟಿ 10 ಲಕ್ಷ ಮಾನವ ದಿನವನ್ನು ಹೆಚ್ಚುವರಿ ಅನುದಾನವನ್ನು ಕೂಡ ಕೊಟ್ಟಿದ್ದಾರೆ. ಇದು ಒಟ್ಟು 104 ತಾಲೂಕಿಗೆ ಇದು ಅನ್ವಯ ಆಗುತ್ತದೆ. ಜಲ್ ಜೀವನ್ ಮಿಷನ್ ಮೂಲಕ ಪ್ರತಿ ಕುಟುಂಬಕ್ಕೆ ನಲ್ಲಿ ನೀರು ಕೊಡುವ ಬಗ್ಗೆ ಎರಡು ದಿನ ಕಾರ್ಯಗಾರ ಇವತ್ತು ಮತ್ತೆ ನಾಳೆ ನಡೆಯುತ್ತದೆ.

ದೇಶದೆಲ್ಲೆಡೆ ಯಶ್ ಹುಟ್ಟಹಬ್ಬದ ಸದ್ದು, ಸಿದ್ದುಗೆ FIR ಗುದ್ದು; ಜ.8ರ ಟಾಪ್ 10 ಸುದ್ದಿ!.

23 ಲಕ್ಷ ಮನೆಗಳಿಗೆ ಈ ವರ್ಷ ಕನೆಕ್ಷನ್ ಕೊಡಲು ತೀರ್ಮಾನ ಮಾಡಿದೆ.  685 ಗ್ರಾಮಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಾರಂಭ ಆಗಿದೆ.  2012 ರಲ್ಲಿ ನಿರ್ಮಲ ಭಾರತ್ ಅಭಿಯಾನದಲ್ಲಿ 4 ಸಾವಿರ ಇದ್ದ ಅನುದಾನವನ್ನು 12 ಸಾವಿರಕ್ಕೆ ಏರಿಕೆ ಮಾಡಲಾಗಿದೆ.  ಎಸ್ ಸಿ ಎಸ್ ಟಿ ಗೆ 15 ಸಾವಿರ ಏರಿಕೆ ಎಲ್ಲಾ ಗ್ರಾ.ಪ ಕಟ್ಟಡಗಳಿಗೆ ಸೋಲಾರ್ ಲೈಟ್ ಹಾಕಲು ತೀರ್ಮಾನ  6273 ಗ್ರಾ.ಪ ಯಲ್ಲಿ 5 ಏಜನ್ಸಿ ಗಳ ಮೂಲಕ ಸೋಲಾರ್ ಲೈಟ್ ಹಾಕಲು ತೀರ್ಮಾನ  ಇದಕ್ಕೆ ಒಂದು ವರ್ಷ ಗಡುವು ನೀಡಲಾಗುತ್ತದೆ.

ಪ್ರಧಾನ ಗ್ರಾಮ ಸಡಾಕ್ ಯೋಜನೆ ಮೂಲಕ 2169 ಕೋಟಿ ಮೊತ್ತದಲ್ಲಿ ಕಾಮಗಾರಿ ಆರಂಭ  ಎರಡು ಹಂತಕ್ಕೆ 1271 ಕೋಟಿ ಅನುದಾನ ಬಂದಿದೆ. 5427 ಕೀ.ಮೀಗೆ 3671 ಕೋ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ತೀರ್ಮಾ ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ ಎಂದು  ತಿಳಿಸಿದರು.

 ನದಿ ಮೂಲಗಳು ಎಲ್ಲಿಲ್ಲೆ ಇದೆ ಅಲ್ಲಿ ಹೆಚ್ಚಿನ ಒತ್ತು ಕೊಡುತ್ತೇವೆ  23 ಲಕ್ಷ ಮನೆಗಳಿಗೆ ಈ ವರ್ಷ ಕನೆಕ್ಷನ್ ಕೊಡಲು ತೀರ್ಮಾನ ಮಾಡಿದೆ  ವಾಟರ್ ಸೋರ್ಸ್ ಎಲ್ಲೆಲ್ಲಿ ಫೇಲ್ ಆಗುತ್ತದೆ. ಅದಕ್ಕೆ ನಾವು ಕೈ ಹಾಕುವುದಿಲ್ಲ ಶುದ್ದ ಕುಡಿಯುವ ನೀರಿನ ಘಟಕ ಹಾಕುವ ವಿಚಾರ 16ಸಾವಿರ ಶುದ್ದ ಕುಡಿಯುವ ನೀರು ಘಟಕ ಕೆಲಸ ಮಾಡುತ್ತದೆ ಅನ್ನೋ ವರದಿ ಇದೆ 

ಎಲ್ಲೆಲ್ಲೆ ಅಕ್ರಮ ನಡೆದಿದೆ  ಯಾವ್ಯಾವ ಎಜನ್ಸಿಗಳ ಮೂಲಕ ನಡೆದಿದೆ  ಈ ಬಗ್ಗೆ ಸದನ ಸಮಿತಿ ರಚನೆ ಮಾಡಿ ತನಿಖೆ ನಡೆಸುತ್ತೇವೆ  ಒಂದು ಕೋಟಿ ಪ್ರತಿ ಗ್ರಾಮ ಪಂಚಾಯತಿ ಗೆ  ಈ ಬಾರಿ ಬರುತ್ತದೆ. ಯಾವುದೇ ಗ್ರಾ.ಪ ಗೆ ಅನುದಾನ ಕಡಿಮೆ ಮಾಡುವ ವ್ಯವಸ್ಥೆ ಮಾಡಿಲ್ಲ ತೆರಿಗೆ ವ್ಯಾಪ್ತಿಗೆ ಸುಮಾರು ಕಟ್ಟಡ ಗಳು ಹೊರಗಡೆ ಇದೆ.

ಪಂಚತಂತ್ರ ಸಾಪ್ಟ್ ವೇರ್ ಮೂಲಕ ನೋಂದಾಣಿಯಾಗಿರುವ ಕಟ್ಟಡಗಳು  ತೆರಿಗೆ ವ್ಯಾಪ್ತಿಯಲ್ಲಿ ಇರುತ್ತದೆ ಉಳಿದನ್ನು ಇರೋದಿಲ್ಲ. ಬಿಟ್ಟು ಹೋಗಿರುವ ತೆರಿಗೆ ಕಟ್ಟಡಗಳ ಬಗ್ಗೆ ಸಮೀಕ್ಷೆ ಮಾಡ್ತಾ ಇದೆ. ತೆರಿಗೆ ಪಾವತಿ ಮಾಡದ್ರಲ್ಲಿ ಕೆಲ ಪ್ರಭಾವಿಗಳು ಕೂಡ ಇದ್ದಾರೆ . ಅದರಲ್ಲಿ ಅಧಿಕಾರಿಗಳು ಕೂಡ ಇದ್ದಾರೆ . ಸ್ವಾಮಿಯತ್ತತೆ ಮೂಲಕ ತೆರಿಗೆ ವ್ಯಾಪ್ತಿಗೆ ಬರದ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಆರು ತಿಂಗಳಲ್ಲಿ ಒಳ ಬರುವಂತೆ ಮಾಡುತ್ತೇವೆ ಎಂದರು. 

ಗ್ರಾ.ಪಂ ಸದಸ್ಯರಿಗೆ ತರಬೇತಿ
ಗ್ರಾ.ಪ ಚುನಾವಣೆಯಲ್ಲಿ ಗೆದ್ದ 96 ಸಾವಿರ ಸದಸ್ಯರಿಗೆ ತರಬೇತಿ ನೀಡಲಾಗುತ್ತದೆ. 285  ತರಬೇತಿ ಕೇಂದ್ರಗಳ ಮೂಲಕ ತಾಲೂಕು ಹಂತದಲ್ಲಿ 10 ತಂಡಗಳಲ್ಲಿ ತರಬೇತಿ ನೀಡಲಾಗುತ್ತದೆ.  ಇದಕ್ಕಾಗಿ 900 ಸಂಪನ್ಮೂಲ ವ್ಯಕ್ತಿ ಗಳ ನಿಯೋಜಿಸಲಾಗಿದೆ. ಐದು ದಿನಗಳ ಕಾಲ ತರಬೇತಿ ನಡೆಯುತ್ತಿದ್ದು, ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಇರಲಿದೆ.

2019-20
ಭಾರತ ಸರ್ಕಾರವು ಪಿ.ಎಂ.ಜಿ.ಎಸ್.ವೈ- III ಯೋಜನೆಯನ್ನು 2019-20 ನೇ ಸಾಲಿನಲ್ಲಿ ಘೋಷಣೆಯನ್ನು ಮಾಡಿ, ಅದರಂತೆ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ 5612.00 ಕಿ.ಮೀ ಉದ್ದದ ರಸ್ತೆಗಳ ಹಂಚಿಕೆ ಮಾಡಿರುತ್ತದೆ.
• ದಿನಾಂಕ 02.03.2020ರಂದು ಪಿ.ಎಂ.ಜಿ.ಎಸ್.ವೈ- III ಯೋಜನೆಯ ಬ್ಯಾಚ್-1ರಡಿ 3226.21ಕಿ.ಮೀ ಉದ್ದದ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುತ್ತದೆ.

• ದಿನಾಂಕ 20.04.2020 ರಂದು ಸಚಿವ ಸಂಪುಟವು ಪ್ರಧಾನ ಮಂತ್ರಿಗ್ರಾಮ ಸಡಕ್ ಯೋಜನೆ-||| ಬ್ಯಾಚ್-1 ರ 3226.21 ಕಿ.ಮೀ.ಗಳ ಉದ್ದದ ರಸ್ತೆ ಹಾಗೂ 26 ಸೇತುವೆಗಳ ಅಭಿವೃದ್ದಿ ಕಾಮಗಾರಿಗಳನ್ನು ರೂ.2169.72 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳುವ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು ಸದರಿ ಕಾಮಗಾರಿಗಳಿಗೆ   ಇ-ಪ್ರಕ್ಯೂರಮೆಂಟ್ ಮುಖಾಂತರ ಟೆಂಡರ್ ಕರೆದಿದ್ದು ಗುತ್ತಿಗೆ ವಹಿಸಲಾಗಿ ಪ್ರಸ್ತುತ ಸದರಿ ಕಾಮಗಾರಿಗಳು ವಿವಿದ ಹಂತದ ಪ್ರಗತಿಯಲ್ಲಿದೆ.

2020-21
• ದಿನಾಂಕ 09.11.2020 ರಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಬ್ಯಾಚ್-1ರಡಿ, 321.93ಕಿ.ಮೀ ಉದ್ದದ 50 ರಸ್ತೆ ಕಾಮಗಾರಿಗಳಿಗೆ ರೂ.214.69 ಕೋಟಿಗಳ ಅಂದಾಜು ಮೊತ್ತಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
• ದಿನಾಂಕ 01.01.2021ರಂದುಪ್ರಧಾನ ಮಂತ್ರಿಗ್ರಾಮ ಸಡಕ್ಯೋಜನೆ-||| ಬ್ಯಾಚ್-2ರಡಿ, 1879.81ಕಿ.ಮೀ ಉದ್ದದ 302ರಸ್ತೆ ಹಾಗೂ 75 ಉದ್ದ ಸೇತುವೆ ಕಾಮಗಾರಿಗಳು ಒಳಗೊಂಡಂತೆ ರೂ.1256.76ಕೋಟಿಗಳ ಅಂದಾಜು ಮೊತ್ತಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
• 2020-21ನೇ ಸಾಲಿನಲ್ಲಿ ಅನುಮೋದನೆಯಾದ ಒಟ್ಟಾರೆ ಅಂದಾಜು ರೂ.1471.45 ಕೋಟಿಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆಯಲ್ಲಿದೆ.
• 2019-20 ಮತ್ತು 2020-2021 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಪಿ.ಎಂ.ಜಿ.ಎಸ್.ವೈ-III ಯೋಜನೆಯನ್ನು 2 ಹಂತಗಳಲ್ಲಿ ಮಂಜೂರಾತಿ ನೀಡಿದ್ದು ರಾಜ್ಯದ ಒಟ್ಟು 5427.95 ಕಿ.ಮೀ ಉದ್ದದ ರಸ್ತೆಯನ್ನು -3641.17 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದು ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೀಡಿರುವ ಕೊಡುಗೆ.

ಪಿ.ಎಂ.ಜಿ.ಎಸ್.ವೈ ಯೋಜನೆಗೆ ಅನುದಾನ ಬಿಡುಗಡೆ:
ಈ ಯೋಜನೆಗೆ ಕೇಂದ್ರದ ಪಾಲು ಶೇ.60 ಮತ್ತುರಾಜ್ಯದ ಪಾಲು ಶೇ.40 ರಷ್ಟಿದ್ದು, ಈಗಾಗಲೇ ಕೇಂದ್ರದ ಪಾಲು ರೂ.534.24 ಕೋಟಿ ಹಾಗೂ ರಾಜ್ಯದ ಪಾಲು ರೂ.375.32 ಕೋಟಿ ಸೇರಿದಂತೆ ಒಟ್ಟು ರೂ.909.56 ಕೋಟಿಗಳನ್ನು ಕರ್ನಾಟಕ ಗ್ರಾಮೀಣ ರಸೆ ಅಭಿವೃದ್ಧಿ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ.

ಬಾಕಿ ಪ್ರಸ್ತಾವನೆಗಳ ಅನುಮೋದನೆ ಪಡೆಯಲು ಕ್ರಮ ಬಾಕಿ ಉಳಿದ 184.05 ಕಿ.ಮೀ. ಉದ್ದದ ರಸ್ತೆಗಳ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ. ಯೋಜನೆಯ ಫಲಶೃತಿ ಯೋಜನೆಯ ಅನುಷ್ಠಾನದಿಂದ, ಗ್ರಾಮೀಣ ಭಾಗದಆರ್ಥಿಕ ಮತ್ತು ಸಾಮಾಜಿಕ ಸೇವೆಗಳಿಗೆ ಒತ್ತು ನೀಡಿದೆ. 

• ಕೃಷಿ ಮತ್ತು ಗ್ರಾಮೀಣ ಮಾರುಕಟ್ಟೆಗಳು (GRAMS), ಪ್ರೌಢ ಮಾಧ್ಯಮಿಕ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಸಂಪರ್ಕಿಸುವ ಪ್ರಮುಖ ಗ್ರಾಮೀಣ ಸಂಪರ್ಕ/ಲಿಂಕ್ ರಸ್ತೆಗಳನ್ನು ಅಭಿವೃದ್ದಿ ಪಡಿಸಿರುವುದರಿಂದ ಗ್ರಾಮೀಣ ಭಾಗದ ಸಾಮಾಜಿಕ ಪರಿಸ್ಥಿತಿಯನ್ನು ಗಣನೀಯವಾಗಿ ಉತ್ತಮಪಡಿಸಿದೆ. 
• ಕೃಷಿ ಆದಾಯ ಮತ್ತು ಉತ್ಪಾದಕ ಉದ್ಯೋಗಾವಕಾಶಗಳಲ್ಲಿ ನಿರಂತರ ಹೆಚ್ಚಳವನ್ನು ಉಂಟುಮಾಡುತ್ತಿದೆ. ಉನ್ನತ ಗುಣಮಟ್ಟದ ರಸ್ತೆ ನಿರ್ಮಾಣ ಮತ್ತು ನಿರ್ಮಾಣದ ನಂತರ ನಿರ್ವಹಣೆಯು ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ.