Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಮದ್ಯ ಮಾರಾಟ ಕುಸಿತ, ಅಬಕಾರಿ ಇಲಾಖೆಗೆ ಭಾರೀ ನಷ್ಟ

2019-20ರ ಇದೇ ಅವಧಿಗೆ ಒಟ್ಟು 9,131.60 ಕೋಟಿ ಅಬಕಾರಿ ರಾಜಸ್ವ ಸಂಗ್ರಹ| ಪ್ರಸಕ್ತ ಸಾಲಿನಲ್ಲಿ ಕೊರೋನಾ ಲಾಕ್‌ಡೌನ್‌ನಿಂದಾಗಿ ಶೇ.16.97 ಆದಾಯ ಕುಸಿತ| ಮೇ 4ರಿಂದ ಆಗಸ್ಟ್‌ 31ರವರೆಗೆ 7,581 ಕೋಟಿ ಅಬಕಾರಿ ರಾಜಸ್ವ ಸಂಗ್ರಹ| 

Minister H Nagesh Says Alcohol Sales Decline in Karnatakagrg
Author
Bengaluru, First Published Sep 23, 2020, 8:34 AM IST

ಬೆಂಗಳೂರು(ಸೆ.23): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಡಿದ್ದ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಕುಸಿತ ಕಂಡಿದೆ. ರಾಜ್ಯ ಸರ್ಕಾರಕ್ಕೆ 1,549 ಕೋಟಿ ರು. ಅಬಕಾರಿ ಆದಾಯ ಕಡಿಮೆಯಾಗಿದೆ ಎಂದು ಅಬಕಾರಿ ಸಚಿವ ಎಚ್‌. ನಾಗೇಶ್‌ ಹೇಳಿದ್ದಾರೆ.

ಗದಗ ಶಾಸಕ ಎಚ್‌.ಕೆ. ಪಾಟೀಲ್‌ ಅವರ ಚುಕ್ಕಿ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಲಾಕ್‌ಡೌನ್‌ ಅವಧಿಯಿಂದ ಮೇ 3ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿರಲಿಲ್ಲ. ಬಳಿಕ ಮೇ 4ರಿಂದ ಸಿಎಲ್‌-2 ಹಾಗೂ ಸಿಎಲ್‌-11ಸಿ (ಎಂಎಸ್‌ಐಎಲ್‌) ಮಳಿಗೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಯಿತು. ಮೇ 4ರಿಂದ ಆಗಸ್ಟ್‌ 31ರವರೆಗೆ ಭಾರತೀಯ ಮದ್ಯ 198.88 ಲಕ್ಷ ಕೇಸ್‌, 63 ಲಕ್ಷ ಬಿಯರ್‌ ಕೇಸ್‌ಗಳು ಮಾರಾಟವಾಗಿವೆ. ಈ ಮೂಲಕ ಮೇ 4ರಿಂದ ಆಗಸ್ಟ್‌ 31ರವರೆಗೆ 7,581 ಕೋಟಿ ಅಬಕಾರಿ ರಾಜಸ್ವ ಸಂಗ್ರಹವಾಗಿದೆ ಎಂದ​ರು.

ಮದ್ಯ ಮಾರಾಟಕ್ಕೆ ಬಿತ್ತು ಬ್ರೇಕ್ :ಕಟ್ಟುನಿಟ್ಟಿನ ಆದೇಶ

ಕಳೆದ ವರ್ಷ (2019-20) ಇದೇ ಅವಧಿಗೆ ಒಟ್ಟು 9,131.60 ಕೋಟಿ ಅಬಕಾರಿ ರಾಜಸ್ವ ಸಂಗ್ರಹವಾಗಿತ್ತು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಕೊರೋನಾ ಲಾಕ್‌ಡೌನ್‌ನಿಂದಾಗಿ ಶೇ.16.97 ಆದಾಯ ಕುಸಿದಿದೆ ಎಂದು ಹೇಳಿದರು.
 

Follow Us:
Download App:
  • android
  • ios