ಎಂಜಿನಿಯರಿಂಗ್‌ ಕಾಲೇಜುಗಳಿಗೆ 395 ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ 1,301 ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಲಾಗಿತ್ತು. ಅವರ ಸೇವೆ 2023ರ ಮಾರ್ಚ್‌ನಲ್ಲಿ ಪೂರ್ಣಗೊಂಡಿದೆ. ಆದರೂ, ಹೆಚ್ಚುವರಿಯಾಗಿ ಅವರನ್ನು ಸೇವೆಯಲ್ಲಿ ಕೆಲ ತಿಂಗಳು ಮುಂದುವರಿಸಲಾಗಿದೆ: ಸಚಿವ ಡಾ.ಎಂ.ಸಿ.ಸುಧಾಕರ್‌ 

ವಿಧಾನಪರಿಷತ್‌(ಜು.21): ಆರ್ಥಿಕ ಇಲಾಖೆ ಅನುದಾನ ಒದಗಿಸಿದ ಕೂಡಲೇ ಸರ್ಕಾರಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅರೆಕಾಲಿಕ ಉಪನ್ಯಾಸಕರಿಗೆ ಬಾಕಿ ಇರುವ ವೇತನ ಪಾವತಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು. 

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿಯ ಕಾರ್ಯಭಾರ ತಗ್ಗಿಸುವ ಉದ್ದೇಶದಿಂದ 2022-23ನೇ ಸಾಲಿನಲ್ಲಿ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಲಾಗಿತ್ತು. ಅದರಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ 395 ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ 1,301 ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಲಾಗಿತ್ತು. ಅವರ ಸೇವೆ 2023ರ ಮಾರ್ಚ್‌ನಲ್ಲಿ ಪೂರ್ಣಗೊಂಡಿದೆ. ಆದರೂ, ಹೆಚ್ಚುವರಿಯಾಗಿ ಅವರನ್ನು ಸೇವೆಯಲ್ಲಿ ಕೆಲ ತಿಂಗಳು ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕುಮಾರಸ್ವಾಮಿಯಿಂದ ಸಿದ್ದರಾಮಯ್ಯ ಕಲಿಯುವ ಅವಶ್ಯಕತೆ ಇಲ್ಲ: ಎಚ್‌ಡಿಕೆ ವಿರುದ್ಧ ಹರಿಹಾಯ್ದ ಸುಧಾಕರ್‌

ಹೀಗೆ ಹೆಚ್ಚುವರಿಯಾಗಿ ಕೆಲಸ ಮಾಡಿದವರಿಗೆ ವೇತನ ಪಾವತಿ ಸಾಧ್ಯವಾಗಿಲ್ಲ. ಅನುದಾನ ದೊರೆತ ಕೂಡಲೆ ಏಪ್ರಿಲ್‌ 2023ರ ನಂತರ ಕರ್ತವ್ಯ ನಿರ್ವಹಿಸಿದ ಅರೆಕಾಲಿಕ ಉಪನ್ಯಾಸಕರಿಗೆ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.