Asianet Suvarna News Asianet Suvarna News

ಪೀಠ ತ್ಯಾಗ ಮಾಡಲು ಮುರುಘಾ ಶ್ರೀ ನಕಾರ: ಲಿಂಗಾಯತ ಮುಖಂಡರ ಸಭೆ

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಚುತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರು ಪೀಠ ತ್ಯಜಿಸಲು ನಿರಾಕರಿಸುತ್ತಿದ್ದಾರೆ. ಇದರ ಬೆನ್ನಲ್ಲಿಯೇ ಇಂದು ಲಿಂಗಾಯತ ಮುಖಂಡರ ಸಭೆ ನಡೆಯಲಿದೆ.

meeting of Lingayat leaders as Murugha shree Denial sacrifice peetha san
Author
First Published Sep 29, 2022, 11:32 AM IST

ಚಿತ್ರದುರ್ಗ (ಸೆ. 29): ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿಯಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠ ತ್ಯಜಿಸಲು ನಿರಾಕರಿಸಿದ್ದಾರೆ. ಇದರ ನಡುವೆ ಇಂದು ಲಿಂಗಾಯತ ಮುಖಂಡರ ಸಭೆ ನಡೆಯಲಿದೆ.ಮುರುಘಾಮಠದ ಪರಂಪರೆ ಉಳಿಸಿ ಹೆಸರಲ್ಲಿ ಚಿತ್ರದುರ್ಗದಲ್ಲಿ ಇಂದು ಲಿಂಗಾಯತ, ವೀರಶೈವ ಮುಖಂಡರ ಸಭೆ ನಡೆಯಲಿದೆ. ಮಾಜಿ ಸಚಿವ ಹೆಚ್.ಏಕಾಂತಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.  ಚಿತ್ರದುರ್ಗ ಹೊರ ವಲಯ ಸೀಬಾರದ ಬಳಿ ಇರುವ ಮಾಜಿ ಮುಖ್ಯಮಂತ್ರಿ ಎಸ್ .ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ಸಭೆ ನಿಗದಿಯಾಗಿದೆ. ಮಧ್ಯಾಹ್ನ ಹನ್ನೆರೆಡು ಗಂಟೆಗೆ ಸಭೆ ಆರಂಭವಾಗಲಿದ್ದು, ಪ್ರಮುಖ ನಿರ್ಧಾರ ಮಾಡುವ ಸಾಧ್ಯತೆ ಇದೆ. ಸಭೆಯಲ್ಲಿ ಗಲಾಟೆಗಳು ಆಗುವ ಸಾಧ್ಯತೆ ಹಿನ್ನಲೆಯಲ್ಲಿ ಸಭೆಗೆ ಪೊಲೀಸ್‌ ರಕ್ಷಣೆ ಬೇಕು ಎಂದು ಅಯೋಜಕರು ಕೋರಿದ್ದಾರೆ.
 

Follow Us:
Download App:
  • android
  • ios