ಧೈರ್ಯವಿದ್ದರೆ ತಜ್ಞರಿಂದ ನನ್ನ ಸೀಡಿ ಪರೀಕ್ಷೆ ಮಾಡಿಸಿ: ಸಿಎಂ ಎಚ್‌ಡಿಕೆ ಚಾಲೆಂಜ್!

ಧೈರ್ಯವಿದ್ದರೆ ತಜ್ಞರಿಂದ ನನ್ನ ಸೀಡಿ ಪರೀಕ್ಷೆ ಮಾಡಿಸಿ: ಸಿಎಂ ಎಚ್‌ಡಿಕೆ ಚಾಲೆಂಜ್!| ಕಟ್ ಅಂಡ್ ಪೇಸ್ಟ್ ಸೀಡಿ ಎಂದ ಮುಖ್ಯಮಂತ್ರಿ ಬಿಎಸ್‌ವೈಗೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲು

Mangaluru Riot If You have Courage Examine The CD By Experts HD Kumaraswamy Challenges CM Yediyurappa

ಬೆಂಗಳೂರು[ಜ.12]: ಮಂಗಳೂರು ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಬಿಡುಗಡೆ ಮಾಡಿರುವ ವಿಡಿಯೋದ ಸತ್ಯಾಸತ್ಯ ತಿಳಿದುಕೊಳ್ಳಲು ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯಾ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಗಲಭೆ ಸಂಬಂಧ ತಾವು ಬಿಡುಗಡೆ ಮಾಡಿದ ಸಿ.ಡಿ. ಬಗ್ಗೆ ಟೀಕೆ ಮಾಡಿದ ಬಿಜೆಪಿಯ ಹಲವು ನಾಯಕರಿಗೆ ಸರಣಿ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಕುಮಾರಸ್ವಾಮಿ, ಸಿ.ಡಿ. ಬಿಡುಗಡೆ ವೇಳೆಯೇ ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಮತ್ತೇ ನನ್ನು ಬಿಜೆಪಿ ನಾಯಕರಿಂದ ನಿರೀಕ್ಷಿಸಲು ಸಾಧ್ಯ ಎಂದು ಹೇಳಿ ದ್ದೆ. ಅದನ್ನು ಸಾಬೀತು ಪಡಿಸಿದ್ದಾರೆ ಎಂದು ಕಿಡಿಕಾರಿದ್ದಾ

ಸಿ.ಡಿ. ಕಟ್ ಅಂಡ್ ಪೇಸ್ಟ್ ಎಂದಿರುವ ಯಡಿಯೂರಪ್ಪ ಅವರು ಸಿ.ಡಿ.ಯ ಸತ್ಯಾಸತ್ಯ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಾನು ಬಿಡುಗಡೆ ಮಾಡಿರುವ ಸಿ.ಡಿ.ಯನ್ನು ನೀವು ಸೃಷ್ಟಿಸಿಕೊಂಡಂತೆ ಕಟ್ ಅಂಡ್ ಪೇಸ್ಟ್ ಬಿಜೆಪಿ ಸರ್ಕಾರ ಎಂದುಕೊಂಡಿರಾ ಎಂದು ಪ್ರಶ್ನಿಸಿದ್ದಾ

ಬೊಮ್ಮಾಯಿ ಉತ್ತರಿಸಲಿ:

ಮಂಗಳೂರು ಗಲಭೆ ಸಂದರ್ಭ ದಲ್ಲಿ ಪೊಲೀಸರ ನಡವಳಿಕೆ ಬಗೆ ತಾವಾಡಿದ ಮಾತಿಗೆ ಗೃಹ ಸಚಿವ ಬೊಮ್ಮಾಯಿ ಅವರು ಪೊಲೀಸರು ಗಲಭೆ ಮಾಡುವು ದಿಲ್ಲ, ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಕಾಲದಲ್ಲಿಯೂ ಅದೇ ಪೊಲೀಸರೇ ಇದ್ದರು ಎಂದಿದ್ದಾರೆ. ಆದರೆ ಬೊಮ್ಮಾಯಿ ಅವರೇ ಅದು ನನ್ನ ಕಾಲ. ಶಾಂತಿ-ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲವಾಗಿದ್ದು, ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ. ನನ್ನ ಕಾಲದಲ್ಲಿಯೂ ಇದೇ ಪೊಲೀಸರಿದ್ದರು. ಆದರೆ, ನನ್ನ ಕಾಲ ದಲ್ಲಿ ಗಲಭೆಗಳು ಯಾಕೆ ಆಗಲಿಲ್ಲ? ಗೋಲಿಬಾರ್‌ಗಳು ಯಾಕೆ ಆಗಲಿಲ್ಲ? ಇದಕ್ಕೆ ನೀವು ಉತ್ತರಿಸುವಿರಾ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಸಿ.ಡಿ. ಬಿಜೆಪಿ ಸ್ವತ್ತು:

ಸಿ.ಡಿ. ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತು ಎಂದಿರುವ ಸದಾನಂದ ಗೌಡ ಅವರಿಗೆ ಪ್ರತ್ಯುತ್ತರಿಸಿರುವ ಕುಮಾರಸ್ವಾಮಿ, ಬಿಜೆಪಿಯಲ್ಲಿ ಸದ್ದು ಮಾಡಿದ ಸಿ.ಡಿ.ಗಳ ಸಂಖ್ಯೆ ಒಂದೆರಡೇ? ಎಲ್ಲ ಸಿ.ಡಿ.ಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೆ. ಸಿ.ಡಿ.ಗಳು ಬಿಜೆಪಿಯ ಸ್ವತ್ತು. ಸಿ.ಡಿ. ಬಗ್ಗೆ ಮಾತನಾಡುವಾಗ ಸದಾನಂದಗೌಡ ಎಚ್ಚರವಾಗಿರಲಿ ಎಂದಿದ್ದಾರೆ. ಮಂಗಳೂರು ಶಾಂತಿಯಿಂದ ಇದೆ. ಮರಳಿ ಗಲಭೆ ಎಬ್ಬಿಸಿ ಅಲ್ಲಿ ಅಸ್ತಿತ್ವವೇ ಇಲ್ಲದ ತಮ್ಮ ಪಕ್ಷಕ್ಕೆ ನೆಲೆ ಕಲ್ಪಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಮಾತಿಗೂ ಪ್ರತಿಕ್ರಿಯೆ ನೀಡಿರುವ ಎಚ್.ಡಿ. ಕುಮಾರಸ್ವಾಮಿ, ಮೆಕ್ಕಾಕ್ಕೆ ಹೋದಾಗ ಮುಸಲ್ಮಾನರು ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಪೊಲೀಸರ ಮೇಲೆ ಕಲ್ಲು ತೂರಲು ಅವರೇನು ಸೈತಾನರೇ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಹಾಗಾದರೆ ಪೊಲೀಸರೂ ಕಲ್ಲು ತೂರಾಟ ಮಾಡಿದ್ದಾರೆ. ಹೋರಾಟಗಾರರೇನು ಸೈತಾನರೇ ಎಂದು ಉತ್ತರಿಸುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios