ಮಂಡ್ಯ ಬೈಕ್ ಮೆಕ್ಯಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ! 25 ಕೋಟಿ ಜಾಕ್‌ ಪಾಟ್ ಖುಷಿ ಹಂಚಿಕೊಂಡ ಕುಟುಂಬ

ಮೊನ್ನೆ ಕೇರಳಕ್ಕೆ ಹೋಗಿದ್ದಾಗ ಎರಡು ಲಾಟರಿ ತಂದಿದ್ದರು. ಒಂದನ್ನು ಯಾರಿಗಾದ್ರೂ ಕೊಟ್ಟುಬಿಡುತ್ತೇನೆ ಎಂದಿದ್ರು. ಆದ್ರೆ ಅದೇ ಗೆದ್ದೇ ಬಿಟ್ಟರೆ ಹೇಗೆ ಅಂತಾ ಹೇಳಿದ್ದಕ್ಕೆ ಆ ಲಾಟರಿ ಹಾಗೆ ಇಟ್ಟುಕೊಂಡ್ರು. ಈಗ ನೋಡಿದ್ರೆ ಅದೇ ಲಾಟರಿಗೆ 25 ಕೋಟಿ ರೂ. ಬಹುಮಾನ ಬಂದಿದೆ ಖುಷಿ ಹಂಚಿಕೊಂಡ ಕುಟುಂಬ

Mandya Mechanic Wins 25 Crore Kerala Lottery rav

ಮಂಡ್ಯ (ಅ.10): ಅದೃಷ್ಟವೆಂಬುದು ಯಾರಿಗೆ ಯಾವಾಗ ಕೈಹಿಡಿಯುತ್ತದೆ ಎಂಬುದು ಊಹಿಸಲಾಸಾಧ್ಯ. ಇಂದು ಕಡುಬಡತನದಲ್ಲಿ ಬದುಕುತ್ತಿರುವವರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯದಿಪತಿ ಆಗಿಬಿಡಬಹುದು. ಹೌದು ಅದೃಷ್ಟವೇ ಅಂತದ್ದು, ಅದಕ್ಕೆ ತಾಜಾ ನಿದರ್ಶನ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಅಲ್ತಾಫ್. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಈತ  ಕೇರಳ ರಾಜ್ಯದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಗೆದ್ದಿದ್ದಾರೆ!

ಇತ್ತೀಚೆಗೆ ಪರಿಚಯಸ್ಥರ ಮೂಲಕ 500 ರೂ ಮೌಲ್ಯದ ಕೇರಳ ಲಾಟರಿ ಖರೀದಿಸಿದ್ದ ಅಲ್ತಾಫ್ ಪಾಷಾ. ಅಲ್ತಾಫ್ ಖರೀದಿಸಿದ್ದ ಲಾಟರಿ ಲಕ್ ಹೊಡೆದಿದೆ. ಬಹುಮಾನ ಬಂದಿರೋ ವಿಚಾರ ತಿಳಿಯುತ್ತಿದ್ದಂತೆ ಲಾಟರಿ ಪಡೆಯುವ ಪ್ರಕ್ರಿಯೆಗೆ ಕೇರಳಕ್ಕೆ ಹೊರಟಿದ್ದಾರೆ. ಇತ್ತ ಅಲ್ತಾಫ್ ಕುಟುಂಬ 25 ಕೋಟಿ ರೂ. ಲಾಟರಿ ಬಂದ ಖುಷಿಯಲ್ಲಿರುವ ಕುಟುಂಬಸ್ಥರು. 

ಕೇರಳದ 25 ಕೋಟಿ ರೂ. ಓಣಂ ಲಾಟರಿ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್; ಕೈಗೆ ಸಿಗೋ ಹಣವೆಷ್ಟು?

25 ಕೋಟಿ ರೂ. ಲಾಟರಿ ಬಂದಿರುವ ಖುಷಿ ಹಂಚಿಕೊಂಡ ಕುಟುಂಬ:

25 ಕೋಟಿ ರೂ. ಲಾಟರಿ ಬಂದಿರುವ ವಿಚಾರವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಖುಷಿ ಹಂಚಿಕೊಂಡಿರುವ ಕುಟುಂಬ, ಅಲ್ತಾಫ್ ಪತ್ನಿ ಸೀಮಾ ಭಾನು ಮತ್ತು ಮಗಳು ತನಲ್ ಬಹಳ ಖುಷಿಪಟ್ಟಿದ್ದಾರೆ, ಮೊದಲಿಗೆ ನಾವು ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ತಿಳಿದಾಗ ಅಷ್ಟೆಲ್ಲ ಹೇಗೆ ಬಂದೀತು ಎಂದು ನಾವು ನಂಬಿರಲಿಲ್ಲ. ಆದರೆ ಇಂದು ಬೆಳಗ್ಗೆ ನಮಗೆ ನಂಬಿಕೆ ಬಂದಿದ್ದು. ಪತಿ ಕಳೆದ 15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದರು. ಲಾಟರಿ ತೆಗೆದುಕೊಳ್ಳುವುದಕ್ಕೆಂದೇ ಕೇರಳಕ್ಕೆ ಹೋಗುತ್ತಿದ್ದರು. ಆದರೆ ಒಂದು ಸಲವೂ ಲಾಟರಿಯಲ್ಲಿ ಗೆದ್ದಿರಲಿಲ್ಲ. ಈಗಲೂ ಅಷ್ಟೆ ನಮಗೆ ಬಂದಿಲ್ಲ ಅಂತಾನೇ ಅಂದುಕೊಂಡಿದ್ದೆವು. ಆದರೆ ಬಂದಿರುವುದು ನಿಜ ಎಂದು ಬೆಳಗ್ಗೆ ತಿಳಿದಾಗ ಖುಷಿಯಾಗಿದೆ ಎಂದ ಪತ್ನಿ ಸೀಮಾ ಭಾನು.

ಮೊನ್ನೆ ಕೇರಳಕ್ಕೆ ಹೋಗಿದ್ದಾಗ ಎರಡು ಲಾಟರಿ ತಂದಿದ್ದರು. ಒಂದನ್ನು ಯಾರಿಗಾದ್ರೂ ಕೊಟ್ಟುಬಿಡುತ್ತೇನೆ ಎಂದಿದ್ರು. ಆದ್ರೆ ಅದೇ ಗೆದ್ದೇ ಬಿಟ್ಟರೆ ಹೇಗೆ ಅಂತಾ ಹೇಳಿದ್ದಕ್ಕೆ ಆ ಲಾಟರಿ ಹಾಗೆ ಇಟ್ಟುಕೊಂಡ್ರು. ಈಗ ನೋಡಿದ್ರೆ ಅದೇ ಲಾಟರಿಗೆ 25 ಕೋಟಿ ರೂ. ಬಹುಮಾನ ಬಂದಿದೆ. ನಿಜ ಎಂದರೆ ನಮಗೆ ಇಷ್ಟು ವರ್ಷ ಲಾಟರಿ ತೆಗೆದುಕೊಳ್ಳುವ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಆಗಿದೆ. ಲಾಟರಿ ತೆಗೆದುಕೊಳ್ಳುವುದು ಬೇಡ, ಹಣ ಖರ್ಚು ಬಹುಮಾನ ಎಲ್ಲಾ ಬರೋದೆಲ್ಲ ಎಂದು ಹೇಳುತ್ತಿದ್ದೆವು. ಆದರೂ ಲಾಟರಿ ಖರೀದಿಸುವುದು ಬಿಟ್ಟಿರಲಿಲ್ಲ. ಇದೀಗ ಅವರ ನಿರಂತರ ಖರೀದಿ ಮತ್ತು ಮುಂದೊಂದು ಬಹುಮಾನ ಬಂದೇ ಬರುತ್ತದೆ ಎಂಬ ನಂಬಿಕೆ ಇಂದು ನಿಜವಾಗಿದೆ. ಲಾಟರಿ ಗೆದ್ದಿರುವುದಕ್ಕೆ ಖುಷಿಯಾಗಿದೆ.

ಚಾಯ್‌ವಾಲಾಗೆ ಸಿಕ್ಕಿತು 3.55 ಲಕ್ಷ ರೂ ಜಾಕ್‌‌ಪಾಟ್, ಬದುಕೇ ಅಂತ್ಯಗೊಳಿಸಿದ ನಕಲಿ ಲೋನ್ ಬೆದರಿಕೆ!

ಮಗಳು ತನಲ್ ಖುಷಿ:

ಪಪ್ಪ ಖರೀದಿಸಿ ತಂದಿದ್ದ ಲಾಟರಿ ಯಾರಿಗಾದರೂ ಮಾರುತ್ತೇನೆ ಅಂದಿದ್ರು. ಆದ್ರೆ  ನಾನು ಬೇಡ ಪಪ್ಪ, ನನ್ನ ಹೆಸರು ಟಿ ಇಂದ ಶುರುವಾಗುತ್ತೆ ಲಾಟರಿ ಟಿ ಇಂದ ಇದೆ ಮಾರಾಟ ಮಾಡಬೇಡ ಅಂದಿದ್ದೆ. ಆದ್ರೆ ಈಗ ನೋಡಿದ್ರೆ ಯಾವುದನ್ನು ಮಾರಾಟ ಮಾಡಬೇಕು ಅಂದುಕೊಂಡಿದ್ರೋ ಅದೇ ಲಾಟರಿಗೆ ಜಾಕ್‌ಪಾಟ್ ಬಂದಿದೆ. ಮನೆಯಲ್ಲಿ ಬಡತನ ಇದೆ. ಮನೆ ನಿರ್ವಹಣೆಗೆ ಸ್ವಲ್ಪ ಸಾಲ ಇದೆ. ಬಂದಿರೋ ಬಹುಮಾನದಿಂದ ಸಾಲ ತೀರಿಸಬೇಕು, ಸ್ವಂತದ್ದೊಂದು ಮನೆ ಮಾಡಬೇಕು ಎಂದು ಮಗಳು ತನಲ್ ಸಂತಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios