ಬೆಳಗಾವಿ(ಫೆ.09): ಸಾಮಾನ್ಯವಾಗಿ ಇತ್ತಿಚಿನ ದಿನಗಳಲ್ಲಿ ಹೆಣ್ಣು ಮಕ್ಕಳಾದರೆ ಸಾಕಲಿಕ್ಕೆ ಆಗಲ್ಲ ಅಂತ ಆ ಪುಟ್ಟ ಕಂದಮ್ಮಗಳನ್ನು ಎಲ್ಲಿ ಬೆಕೆಂದರಲ್ಲಿ ಎಸೆದು ಹೋಗುವ ದೃಶ್ಯಗಳನ್ನೆಲ್ಲಾ, ನಾವೂ ನಿವೆಲ್ಲ ಕಂಡಿದ್ದೆವೆ.

ಆದರೆ ಇಲ್ಲೊಬ್ಬ ತಂದೆ ತನಗೆ ಮುದ್ದಾದ ಹೆಣ್ಣು ಮಗು ಜನಿಸಿದಕ್ಕೆ ಕೋಟಿ ರೂ. ವೆಚ್ಚದಲ್ಲಿ ಸೂರ್ಯ ನಾರಾಯಣ ದೇವಸ್ಥಾನ ಕಟ್ಟಿಸಿ ಮಾದರಿಯಾಗಿದ್ದಾರೆ.

ಹೌದು, ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಸುರೇಶ ರಾಜಾರಾಮ್ ಜೋರಾಪೂರ ಎಂಬುವವರು ಕಳೆದ 22 ವರ್ಷದ ಹಿಂದೆ ವಿವಾಹವಾಗಿದ್ದರು. ಆದರೆ ಸುರೇಶ ರಾಜಾರಾಮ್ ದಂಪತಿಗೆ ಮಕ್ಕಳಾಗಿರಲಿಲ್ಲ. ಆಗ ಸುರೇಶ ತಮ್ಮ ಮನೆಯ ಆರಾದ್ಯ ದೆವರಾದ ಸೂರ್ಯ ನಾರಾಯಣ ದೇವರಲ್ಲಿ ತಮಗೆ ಮಗುವಾದರೆ ಸೂರ್ಯನಾರಾಯಣ ದೇವಸ್ಥಾನ ನಿರ್ಮಾಣ ಮಾಡುವುದಾಗಿ ಹರಕೆ ಹೊತ್ತಿದ್ದರು.

"

ಇದೀಗ ಸುರೇಶ ದಂಪತಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸಿದ್ದು, ಕೋಟಿ ರೂ.ಗೂ ಅಧಿಕ ವೆಚ್ಚದ ದೇವಸ್ತಾನ ನಿರ್ಮಾಣ ಮಾಡಿದ್ದಾರೆ.

ಐತಿಹಾಸಿಕ ಚನ್ನಮ್ಮನ ಕಿತ್ತೂರು ಸಮೀಪದ ಹೊಸ ಚನ್ನಾಪೂರ ಗ್ರಾಮದ (ಕರೆಮ್ಮದೇವಿ ದೇವಸ್ಥಾನದ) ಹತ್ತಿರ ಉತ್ತರ ಕರ್ನಾಟಕದಲ್ಲಿಯೇ ಬೃಹತ್ ಸೂರ್ಯದೇವ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. 

ಓರಿಸ್ಸಾ ರಾಜ್ಯದ ಕೊಣಾರ್ಕದಲ್ಲಿ ಸೂರ್ಯದೇವ ದೇವಸ್ಥಾನವಿದೆ. ಈಗ ಅದನ್ನು ಬಿಟ್ಟರೆ ನಮ್ಮ ರಾಜ್ಯದಲ್ಲಿ ಆ ಆಕಾರದ ದೇವಸ್ಥಾನ ಇರುವುದು ಕಿತ್ತೂರಿನ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿರುವ ಹೊಸ ಚನ್ನಾಪೂರ ಗ್ರಾಮದಲ್ಲಿ ಮಾತ್ರ.

ಒಟ್ಟಿನಲ್ಲಿ ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದ ಸುರೇಶ ಜೋರಾಪೂರ, ಹೆಣ್ಣು ಮಗು ಹುಟ್ಟಿದ ಮೇಲೆ ಹರಕೆ ಹೊತ್ತಂತೆ ಸ್ವಂತ ಖರ್ಚಿನಲ್ಲಿ ದೇವಸ್ಥಾನ ಕಟ್ಟಿಸಿರುವುದು ನಿಜಕ್ಕೂ ಮೆಚ್ಚುವಂತದ್ದು.