Dharmasthala Sowjanya Case: ಧರ್ಮಸ್ಥಳ ಅಣ್ಣಪ್ಪ ಇಲ್ಲವಾದರೆ ಮಂಜುನಾಥ ನ್ಯಾಯ ಕೊಡಿಸಬೇಕು: ಮಹೇಶ್ ಶೆಟ್ಟಿ
ಸೌಜನ್ಯ ಪ್ರಕರಣದಲ್ಲಿ ಈವರೆಗೆ ನಡೆದ ತನಿಖೆಗಳೆಲ್ಲವೂ ಬೋಗಸ್ ಧರ್ಮಸ್ಥಳದವರು ಇಂತವರು ಅಂತ ಹೇಳಿದ್ರೆ ಅವರೇ ಆರೋಪಿ. ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ (ಜೂ.16): ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಗೆ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ, ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ಈವರೆಗೆ ನಡೆದ ತನಿಖೆಗಳೆಲ್ಲವೂ ಬೋಗಸ್ ಧರ್ಮಸ್ಥಳ ಅಣ್ಣಪ್ಪ ಇಲ್ಲವಾದರೆ ಮಂಜುನಾಥನೇ ಈ ಕೇಸಿನಲ್ಲಿ ನ್ಯಾಯ ಕೊಡಿಸಬೇಕು. ತನಿಖೆಗಳೆಲ್ಲ ಬೋಗಸ್, ಹತ್ತು ವರ್ಷ ಯಾರೋ ಹೇಳಿದ್ರು ಅಂತ ಆರೋಪಿಯನ್ನು ಜೈಲಿಗೆ ಹಾಕಿದ್ರು, 10 ವರ್ಷ ಅವನು ಜೈಲಲ್ಲಿದ್ದ, ಅವನ ಯೌವ್ವನ ಗತಿ ಏನಾಯಿತು? ಅವನಿಗೆ ಇನ್ನು ಯಾರು ದಿಕ್ಕು ಅಂತ ಕೇಳೋದು? ಧರ್ಮಸ್ಥಳದವರು ಇಂತವರು ಅಂತ ಹೇಳಿದ್ರೆ ಅವರೇ ಆರೋಪಿ. ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮತ್ರ ದುಡ್ಡಿಲ್ಲ , ನಮ್ಮತ್ರ ರಾಜಕೀಯ ಶಕ್ತಿಗಳಿಲ್ಲ. ಆದರೆ ನಮ್ಮ ಮನಸ್ಸಲ್ಲಿ ಆ ಬಡಪಾಯಿ ಹುಡುಗ ಹೊರಗಡೆ ಬರಲಿ ಅಂತ ಇತ್ತು. ನಾನು ಕೈಯಾರೆ 3.5 ಲಕ್ಷ ಖರ್ಚು ಮಾಡಿ ಆತನನ್ನ ಬಿಡಿಸಿಕೊಂಡು ಬಂದಿದ್ದೆ. ಯಾಕೆಂದರೆ ಆತ ತಪ್ಪು ಮಾಡಿಲ್ಲವೆಂದು ನನಗೆ ತಿಳಿದಿತ್ತು. ಹಾಗಾದರೆ ತಪ್ಪು ಮಾಡಿದವರು ಯಾರು?
BALLARI: ಟ್ಯೂಷನ್ ಹೇಳೋ ನೆಪದಲ್ಲಿ ಕರೆಸಿ ಮಕ್ಕಳ ಜೊತೆಗೆ ಅನುಚಿತ ವರ್ತನೆ, ಕಾಮುಕ ಶಿಕ್ಷಕ ಅಮಾನತು
ಸಂತೋಷ್ ಆರೋಪಿಯಲ್ಲ ಎಂದರೆ ನಮಗೆ ಸಂತೋಷದ ಸುದ್ದಿ. ಹಾಗಾದರೆ ಆರೋಪಿಗಳು ಯಾರು? ನಮ್ಮ ಮೇಲೆ ಹಾಕಿದ ಕೇಸುಗಳು ಇನ್ನು ಬಾಕಿಯಿದೆ, ಎಲ್ಲಿ ನ್ಯಾಯ ಸಿಗುತ್ತೆ ನಮಗೆ, ಇನ್ನೂ ದಾಖಲೆ ಮಾಡಲು ಸಾಧ್ಯವಿಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ಕೋರ್ಟ್ ಶುಕ್ರವಾರ ತೀರ್ಪು ನೀಡಿದ್ದು, ಆರೋಪಿ ಸಂತೋಷ್ ರಾವ್‌ರನ್ನು ಖುಲಾಸೆ ಮಾಡಿದೆ. ಅವರ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಾಧಾರಗಳಲ್ಲಿ ಕೊರತೆ ಇದೆ ಎನ್ನುವ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತ ಮಾಡಿರುವುದಾಗಿ ನ್ಯಾಯಮೂರ್ತಿ ಸಿಬಿ ಸಂತೋಷ್ ತಿಳಿಸಿದ್ದಾರೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ವಿದ್ಯಾರ್ಥಿನಿ ಆಗಿದ್ದ ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳ ಬಳಿಕ ತೀರ್ಪು ನೀಡಿದೆ.
ಸೌಜನ್ಯ ರೇಪ್ & ಮರ್ಡರ್: ಸಂತೋಷ್ ರಾವ್ ನಿರ್ದೋಷಿ, ಸಿಬಿಐ ಕೋರ್ಟ್ ತೀರ್ಪು
ಘಟನೆ ಹಿನ್ನೆಲೆ: ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ.
ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ನಿಗೂಢ ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಂತಾಗಿದೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲು ಮಾಡಿತ್ತು.