ದೇಶದಲ್ಲಿ ರೈತರ ಆತ್ಮಹತ್ಯೆ ಯಾವ ಸರ್ಕಾರಕ್ಕೂ ಒಳ್ಳೆಯ ಹೆಸರು ತರಲ್ಲ. ಮಹಾರಾಷ್ಟ್ರ ಮೊದಲ ಸ್ಥಾನಲ್ಲಿದೆ. ಆದರೆ, ನಮ್ಮ ರಾಜ್ಯವೇನೂ ಇದಕ್ಕೆ ದೂರವಿಲ್ಲ. 

ಬೆಂಗಳೂರು (ಜು.13): ದೇಶದಲ್ಲಿ ರೈತರ ಆತ್ಮಹತ್ಯೆ ಯಾವ ಸರ್ಕಾರಕ್ಕೂ ಒಳ್ಳೆಯ ಹೆಸರು ತರಲ್ಲ. ಮಹಾರಾಷ್ಟ್ರ ಬಳಿಕ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಕರ್ನಾಟಕದಲ್ಲಿ ಎಂಬುದು ಕುಖ್ಯಾತಿಯಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ರೈತರ ಅಭಿವೃದ್ಧಿಗೆ ಒಳ್ಲೆಯ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅಳಂದ ಶಾಸಕ ಬಿ.ಆರ್ ಪಾಟೀಲ್ ಹೇಳಿದರು.

ಕರ್ನಾಟಕದ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಭೂ ಸುಧಾರಣೆ ಕಾಯಿದೆ ತಂದು ಭೂಮಿ ಹಂಚಿಕೆ ಮಾಡಿದಂತೆ ಭೂಮಿ ಹೊಂದಿರುವ ಮಾಲೀಕನ‌ ಜಮೀನಿನಲ್ಲಿ ಮರ ಹಾಕಿಸುವುದು ಕಡ್ಡಾಯ ಮಾಡಿ. ಆಗಮಾತ್ರ ನಮ್ಮ ರಾಜ್ಯದಲ್ಲಿ ಅರಣ್ಯವನ್ನು ಉಳಿಸಬಹುದಾಗಿದೆ. ಇಲ್ಲದಿದ್ದರೆ ಭೂಮಿ ಮೇಲೆ ಅರಣ್ಯ ಇರಲ್ಲ. ಪ್ರಕೃತಿ ಅಸಮತೋಲನ ಸರಿಪಡಿಸುವ ಕೆಲಸ ಮಾಡಬೇಕಾಗಿದೆ. ಇನ್ನು ರೈತರ ಆತ್ಮಹತ್ಯೆ ಯಾವ ಸರ್ಕಾರಕ್ಕೂ ಒಳ್ಳೆಯ ಹೆಸರು ತರಲ್ಲ. ಮಹಾರಾಷ್ಟ್ರ ಬಳಿಕ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಕರ್ನಾಟಕದಲ್ಲಿ. ಅಂದರೆ, ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು. 

ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ: ಟಿವಿ ಶೋಗಳಲ್ಲಿ ಮಕ್ಕಳಿಗೆ ಚಾನ್ಸ್‌ ಕೊಡಿಸೋದಾಗಿ ಪಂಗನಾಮ

ಫಸಲ್‌ ಭೀಮಾ ಯೋಜನೆ ರೈತರಿಗೆ ಮಾರಕ: ದೇಶದಲ್ಲಿ ಜಾರಿಯಲ್ಲಿರುವ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ರದ್ದು ಮಾಡಿ. ಇದು ಸಂಪೂರ್ಣವಾಗಿ ಖಾಸಗಿ ಕಂಪನಿಗಳಿಗೆ ಲಾಭ ತರುವ ಯೋಜನೆಯಾಗಿದೆ. ರಾಜ್ಯದ ಎಲ್ಲ ರೈತರು ಕೋಟಿ, ಕೋಟಿ ರೂಪಾಯಿ ಕಟ್ಟಿದರೂ ರೈತರಿಗೆ ಕೇವಲ ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಕೊಡುತ್ತಿದ್ದಾರೆ. ಇದರಿಂದ ಖಾಸಗಿ ಕಂಪನಿಗಳಿಗೆ ಭಾರಿ ಪ್ರಮಾಣದಲ್ಲಿ ಲಾಭ ಆಗುತ್ತಿದೆ. ಇದರ ಬದಲಾಗಿ ರೈತರಿಗೆ ಸರ್ಕಾರದಿಂದಲೇ ಇನ್ಸೂರೆನ್ಸ್ (ಬೆಳೆ ವಿಮೆ ಸೌಲಭ್ಯ) ಕಟ್ಟಿಕೊಡಿ. ಕೃಷಿಗೆ ಆದ್ಯತೆ ಕೊಡಿ. ಕೃಷಿ ಕ್ಷೇತ್ರವು ಅತಿಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ವಲಯವಾಗಿದೆ. ನಿರುದ್ಯೋಗ ಕಡಿಮೆ ಮಾಡಲು ಕೃಷಿಗೆ ಆದ್ಯತೆ ಕೊಡಿ ಎಂದು ಶಾಸಕ ಬಿ.ಆರ್ ಪಾಟೀಲ್ ಸರ್ಕಾರಕ್ಕೆ ಮನವಿ ಮಾಡಿದರು.

ಚುನಾವಣೆ ಹೇಗೆ ಮಾಡಿದ್ರಿ ಅಂತ ನಂಗೊತ್ತು ಎಂದ ಕುಮಾರಸ್ವಾಮಿ: ಇನ್ನು ಚುನಾವಣೆ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದ ಶಾಸಕ ಬಿಆರ್ ಪಾಟೀಲ್ ಮಾತಿನ ಮಧ್ಯವೇ, ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಮಾತು ಆರಂಭಿಸಿ, ಶಾಸಕರಾದ ಮೇಲೆ ಶಾಸಕಗಿರಿ ಉಳಿಸಿಕೊಳ್ಳಲು ಮುಂದಾಗ್ತಾರೆ. ದೇವಸ್ಥಾನ ಕಟ್ಟಬೇಕು ಅಂತಾರೆ. ಈಗ 25 ಲಕ್ಷ ‌ಎಲ್ಲ ತೆಗೆದುಕೊಳ್ಳಲ್ಲ. ನಾವೇ ಚುನಾವಣೆ ಮಾಡುವಾಗ ಅಭ್ಯರ್ಥಿಗಳಿಗೆ ಎಷ್ಟು ಖರ್ಚು ಮಾಡ್ತಿಯಾ ಅಂತ ಕೇಳುತ್ತೇವೆ. ನಾವು 5 ಸಾವಿರ 10 ಸಾವಿರ ಕೊಟ್ಟರೆ ಹೋಗಿ ಚುನಾವಣೆ ಮಾಡ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಈ ಬಾರಿ ಚುನಾವಣೆ ಹೇಗೆ ನಡೀತು ಅಂತ ಗೊತ್ತಿದೆ. ಚುನಾವಣೆಗೆ ಮೊದಲೇ ಕುಕ್ಕರ್ ಎಲ್ಲಾ ಹಂಚಿದ್ರು. ಇಲ್ಲೇ ಟಿಬಿ ಜಯಚಂದ್ರ ಇದಾರೆ. ನಗ್ತಾ ಇದ್ದಾರೆ. ಅವರು ಮೊದಲು ಚುನಾವಣೆ ಹೇಗೆ ನಡೆಸಿದರು, ಈ ಬಾರಿ ಚುನಾವಣೆ ಹೇಗೆ ಮಾಡಿದ್ದಾರೆ. ಜೊತೆಗೆ ಚುನಾವಣೆ ಕೊನೆಯಲ್ಲಿ ಏನೇನು ಮಾಡಬೇಕಾಯ್ತು ಅಂತ ಗೊತ್ತಿದೆ ಎಂದರು.

ಸವಣೂರಿನ 2 ಸಾವಿರ ವರ್ಷದ ಹುಣಸೆ ಮರ, ಮರುನಾಟಿ ಮಾಡಿದ ಕೃಷಿ ವಿಜ್ಞಾನಿಗಳು

ರೈತರ ಬಗ್ಗೆ ಚರ್ಚೆ ಬೇಡ, ದುಡ್ಡು ಮಾಡೋದ್ಹೇಗೆ ಚರ್ಚಿಸಿ: ಈ ಹಿಂದೆ ಶಾಸಕರು, ಸಚಿವರು ಹೇಗೂ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ತಿದ್ದರು. ಈಗ ಅವರೇ ರಾಜಕೀಯಕ್ಕೆ ಎಂಟ್ರಿಯಾಗುತ್ತಿದ್ದಾರೆ. ರಾಜ್ಯದ ಜನರು ಎಲ್ಲ ಪ್ರಮುಖ ಮೂರು ಪಕ್ಷಗಳಿಂದ ಹಣ ಪಡೆಯುತ್ತಾರೆ. ಯಾರಿಗೆ ಓಟ್ ಹಾಕಿದ್ದಾರೆ ಅನ್ನೋದು ಡಬ್ಬಾ ಒಡೆದಾಗಲೇ ತಿಳಿಯೋದು. ಪಾಪ ಬಿ.ಆರ್ ಪಾಟೀಲ್ ಕಲಬುರಗಿಯಿಂದ ಇಲ್ಲಿ ಬಂದು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಇದು ಯಾರಿಗೆ ಬೇಕಾಗಿದೆ ಸಭಾಧ್ಯಕ್ಷರೇ. ದುಡ್ಡು ಮಾಡೋದು ಹೇಗೆ ಅನ್ನೋದ್ರ ಬಗ್ಗೆ ‌ಎಲ್ಲರ ಗಮನ ಇದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.