ಮಹಾರಾಷ್ಟ್ರ ಕನ್ನಡ ಶಾಲೆ ಮಕ್ಕಳಿಗೂ ಯೋಜನೆ ವಿಸ್ತರಣೆಗೆ ಚಿಂತನೆ: ಸಚಿವ ಮಧು ಬಂಗಾರಪ್ಪ
ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರ ಕನ್ನಡ ಮಾಧ್ಯಮಗಳ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ, ರಾಜ್ಯದಲ್ಲಿ ಮಕ್ಕಳಿಗೆ ಕೊಡುವ ಯೋಜನೆಗಳನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಳಗಾವಿ (ಡಿ.18): ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರ ಕನ್ನಡ ಮಾಧ್ಯಮಗಳ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ, ರಾಜ್ಯದಲ್ಲಿ ಮಕ್ಕಳಿಗೆ ಕೊಡುವ ಯೋಜನೆಗಳನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ಇದನ್ನು ಮಾಡಿದರೆ ಒಳ್ಳೆಯದು. ನಾವು ಒಬ್ಬರಿಗೆ ಕೊಡೋದು ಎಷ್ಟು ಸರಿ ಎನ್ನುವುದು ಯೋಚಿಸಿ ನೋಡಬೇಕು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
ಮಕ್ಕಳಿಗೆ ಶೂಗಳನ್ನು ಕೊಡುವುದು ಒಳ್ಳೆಯದು. ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ ಎಂದಾದರೆ, ನಾವು ಆ ಮಕ್ಕಳಿಗೆ ಶೂ ಹಾಗೂ ವಿವಿಧ ಯೋಜನೆಗಳನ್ನು ವಿತರಣೆ ಮಾಡುತ್ತೇವೆ ಎಂದರು. ವಿಜಯೇಂದ್ರ ಅವರಿಗೆ ಸಿಬಿಐ ಜೊತೆಗೆ ಅಡ್ಜಸ್ಟ್ಮೆಂಟ್ಗೆ ಸರಿಯಾಗಿತ್ತು. ಹೀಗಾಗಿ ಅದೇ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಿಬಿಐ ತನಿಖಾ ಸಂಸ್ಥೆಗೆ ಇರಬೇಕಾಗಿದ್ದ ಮೂಲ ಉದ್ದೇಶವನ್ನೇ ಕಳೆದುಕೊಂಡಿದೆ. ಇದರಿಂದ ವಿಜಯೇಂದ್ರ ಅವರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಕಾಂಗ್ರೆಸ್ ಇದ್ದಾಗ ಸಿಬಿಐ ತನಿಖೆಗೆ ಬೇಡ ಎಂದು ಇವರೇ ಹೇಳುತ್ತಿದ್ದರು ಎಂದು ವಕ್ಫ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದಿದ್ದ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು.
ಆನ್‌ಲೈನ್ ಬೆಟ್ಟಿಂಗ್ ಗೇಮ್ ನಿರ್ಬಂಧಕ್ಕೆ ಕಾನೂನು: ಸಚಿವ ಪರಮೇಶ್ವರ್
ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿಗೆ ನೀಡಿದರೂ, ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ನನ್ನ ಉದ್ದೇಶವಾಗಿದೆ. ಬಿಜೆಪಿಯವರು ಅವರ ಹಣೆಬರಹಕ್ಕೆ ಸ್ವಂತ ಶಕ್ತಿಯ ಮೇಲೆ ಸರ್ಕಾರ ನಡೆಸಿಲ್ಲ. ಬಿಜೆಪಿಯವರದ್ದು ಎಲ್ಲ ಫ್ಲಾಪ್ ಶೋ ಎಂದು ಕಿಡಿಕಾರಿದರು. ನಮ್ಮ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಸಿದ್ಧವಿದೆ. ಎಲ್ಲರೂ ನಿನ್ನೆಯಿಂದ ಮಾತನಾಡುತ್ತಿದ್ದಾರೆ. ಇವತ್ತು, ನಾಳೆಯೂ ಇದೇ ಚರ್ಚೆ ಮುಂದುವರೆಯುತ್ತದೆ. ವಿಧಾನಸಭೆಯಂತೆಯೇ ಪರಿಷತ್ನಲ್ಲೂ ಈ ಕುರಿತು ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು.
ಸಚಿವರಿಂದ ಕಾರ್ಯಕ್ಷಮತೆ ವರದಿ ಕೇಳಿದ ಹೈಕಮಾಂಡ್: ಬೆಳಗಾವಿ ಅಧಿವೇಶನದ ಬಳಿಕ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಮಾತುಗಳ ನಡುವೆಯೇ ಹೈಕಮಾಂಡ್ ಎಲ್ಲ ಸಚಿವರಿಗೂ ತಮ್ಮ ಇಲಾಖೆಗಳ ಕಾರ್ಯಕ್ಷಮತೆ ವರದಿ ಕೇಳಿರುವ ಬಗ್ಗೆ ಕೆಲ ಸಚಿವರೇ ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈಗಾಗಲೇ ತಾವು ವರದಿ ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಮಾಹಿತಿ ನೀಡಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಇಲಾಖೆ ಕಾರ್ಯಕ್ರಮದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸುಧಾಕರ್, ಪಕ್ಷದ ಹೈಕಮಾಂಡ್ ಎಲ್ಲಾ ಸಚಿವರ ಕಾರ್ಯಕ್ಷಮತೆ ನೋಡುತ್ತಿದೆ. ನಾನು ನನ್ನ ಇಲಾಖೆ ವರದಿ ನೀಡಿದ್ದೇನೆ. ಎಲ್ಲಾ ಮಂತ್ರಿಗಳು ತಮ್ಮ ತಮ್ಮ ವರದಿ ನೀಡುತ್ತಿದ್ದಾರೆ. ಸಚಿವರ ಕಾರ್ಯವೈಖರಿ ವರದಿ ಕೇಳುವುದರಲ್ಲಿ ತಪ್ಪಿಲ್ಲ. ಆ ಅಧಿಕಾರ ಪಕ್ಷಕ್ಕಿದೆ. ವರದಿ ಪಡೆದ ಬಳಿಕ ಯಾರಿಗೆ ಎಚ್ಚರಿಕೆ ಕೊಡಬೇಕು? ಯಾರಿಗೆ ಇನ್ನೂ ಹೆಚ್ಚಿನ ಕೆಲಸ ಕೊಡಬೇಕು, ಕಡಿಮೆ ಮಾಡಬೇಕು ಎನ್ನುವ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದರು.
ಬೆಳಗಾವಿ ವಿಭಜನೆ ಸದ್ಯಕ್ಕಿಲ್ಲ: ಸಚಿವ ಕೃಷ್ಣ ಬೈರೇಗೌಡ
ಪಕ್ಷ ನಮ್ಮನ್ನು ಸಚಿವರನ್ನಾಗಿ ಮಾಡಿರೋದು ಕೇವಲ ಕಾರಲ್ಲಿ ಓಡಾಡಿಕೊಂಡು ಇರುವುದಕ್ಕಲ್ಲ. ಇಲಾಖಾ ಜವಾಬ್ದಾರಿಗಳ ಜೊತೆಗೆ ಪಕ್ಷದ ಪ್ರಣಾಳಿಕೆ ಹಾಗೂ ಜನರಿಗೆ ನಾವು ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಆದ್ಯತೆ ಆಗಿರುತ್ತದೆ. ಸರ್ಕಾರದ ಕಾರ್ಯಚಟುವಟಿಕೆಗಳು ಜನರಿಗೆ ತಲುಪಬೇಕು. ಪಕ್ಷದ ಹೆಸರು, ವರ್ಚಸ್ಸು ವೃದ್ಧಿ ಮಾಡಬೇಕು ಎಂಬ ಜವಾಬ್ದಾರಿ ಶಾಸಕರು, ಮಂತ್ರಿಗಳ ಮೇಲಿದೆ. ನಾವು ಇದನ್ನು ಸರಿಯಾಗಿ ನಿಭಾಯಿಸುತ್ತಿದ್ದೇವೆಯೇ?, ಇಲ್ಲವೇ? ಎನ್ನುವ ವರದಿ ಪಡೆಯುವ ಜವಾಬ್ದಾರಿ ಪಕ್ಷದ ನಾಯಕತ್ವದ್ದಾಗಿದೆ ಎಂದು ಹೇಳಿದರು.