ಮುಂಬೈ, (ನ.24): ರೈತರಿಗೆ ಒಂದು ಕ್ವಿಂಟಲ್‌ ಭತ್ತಕ್ಕೆ ಹೆಚ್ಚುವರಿಯಾಗಿ 700 ರೂ. ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಇಂದು (ಮಂಗಳವಾರ) ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ 1 ಕ್ವಿಂಟಲ್‌ ಭತ್ತಕ್ಕೆ ಹೆಚ್ಚುವರಿಯಾಗಿ 700 ರೂ. ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದ್ರೆ, ಇತ್ತ ಕರ್ನಾಟಕ ಸರ್ಕಾರ ಇನ್ನೂ ಭತ್ತ ಖರೀದಿ ಕೇಂದ್ರ ತೆರೆಯಲು ಮೀನಾಮೇಷ ಎಣಿಸುತ್ತಿದೆ. ಇನ್ನೂ ಭತಕ್ಕೆ ಪ್ರೋತ್ಸಾಹ ಧನ ನೀಡುತ್ತಾ ಎನ್ನುವುದು ಪ್ರಶ್ನೆಯಾಗಿದೆ.

BJP ಸಭೆಯಲ್ಲಿ ಕಾಂಗ್ರೆಸ್ ನಾಯಕ, ಚಂಡಮಾರುತ ಭೀತಿಯಲ್ಲಿ ಕರ್ನಾಟಕ; ನ.24ರ ಟಾಪ್ 10 ಸುದ್ದಿ!

ಈಗಾಗಲೇ ಭತ್ತ ಕಟಾವು ಪ್ರಕ್ರಿಯೆ ಶುರುವಾಗಿದ್ದು, ಸದ್ಯ  75 ಕೆ.ಜಿ ಚೀಲಕ್ಕೆ 900 ರೂ ಇದೆ. ಈ ಧರ ಇದ್ರೆ ಬೆಳೆಗೆ ಖರ್ಚು ಮಾಡಿದ ಬಂಡವಾಳವೂ ರೈತನ ಕೈಸೇರಲ್ಲ. ಈಗಾಗಲೇ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ರೈತರು ಪ್ರೋತ್ಸಾಹ ಧನ ನೀಡುವಂತೆ ಪ್ರತಿಭಟನೆಗಳು ಮಾಡುತ್ತಿವೆ.

ಆದರೂ ರಾಜ್ಯ ಸರ್ಕಾರ ಕಿವಿ ಇಲ್ಲದಂತೆ ತೆಪ್ಪಗೆ ಕುಳಿತಿದೆ. ಬರೀ ಜಾತಿಗೊಂದು ಪ್ರಾಧಿಕಾರಗಳನ್ನ ಮಾಡಿಕೊಳ್ಳುತ್ತ ವೋಟ್ ಬ್ಯಾಂಕ್‌ಗಾಗಿ ಬಡಿದಾಡುತ್ತಿದೆ. ಇನ್ನಾದರೂ  ಪಕ್ಕದ ರಾಜ್ಯದ ನೋಡಿಯಾದರೂ ಯಡಿಯೂರಪ್ಪ ಸರ್ಕಾರ ಕಲಿಯಬೇಕಿದೆ.ಬರೀ ಭರವಸೆ ಕೊಡುವುದಲ್ಲ. ಕೂಡಲೇ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು. ಈ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.