ಹುಬ್ಬಳ್ಳಿ, [ಜ.05]: ದಶಕಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ ಮಹದಾಯಿ ಮತ್ತು ಕಳಸಾ- ಬಂಡೂರಿ ವಿವಾದ ಬಗೆಹರಿಯುತ್ತಿಲ್ಲ. ಮತ್ತೊಂದೆಡೆ  ರೈತರ ಹೋರಾಟ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ರಾಜ್ಯದ ರಾಜಕಾರಣಿಗಳು ಒಗ್ಗಟ್ಟಿನ ಮಂತ್ರ ಪಠಿಸಿದ್ದು, ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಇಂದು [ಭಾನುವಾರ] ಹುಬ್ಬಳ್ಳಿಯ ಸರ್ಕೀಟ್ ಹೌಸ್‌ನಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು.  

ನರಗುಂದ: ಮಹದಾಯಿ ಕುರಿತು ಕೇಂದ್ರದ ನಿರ್ಧಾರಕ್ಕೆ ಸ್ವಾಗತ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಈ ಸಭೆಯಲ್ಲಿ ಕಳಸಾ-ಬಂಡೂರಿ ಯೋಜನೆ ಜಾರಿ ಸಂಬಂಧ, ಮಹದಾಯಿ ನ್ಯಾಯಾಧಿಕರಣ ನೀಡಿರುವ ಆದೇಶದ ಅನುಷ್ಠಾನ, ಕುಡಿಯುವ ನೀರಿನ ಯೋಜನೆ ಜಾರಿಗೆ ಅಧಿಸೂಚನೆ ಹೊರಡಿಸುವ ಕುರಿತು ಚರ್ಚೆ ನಡೆಸಲಾಯಿತು.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಎಸ್.ಆರ್. ಪಾಟೀಲ್, ಸೇರಿದಂತೆ ಮೂರು ಪಕ್ಷಗಳ‌ ಜನಪ್ರತಿನಿಧಿಗಳು ಭಾಗವಹಿಸಿದ್ರು.

ಪ್ರಧಾನಿ ಮೋದಿಯಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಬೃಹತ್ ಪ್ರತಿಭಟನೆ

ಈ ವೇಳೆ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಬಗ್ಗೆ ಒಗ್ಗಟ್ಟಿನ ಮಂತ್ರ ಪಠಿಸಿದರು. ಇನ್ನೂ ಮಹದಾಯಿ ಸರ್ವಪಕ್ಷಗಳ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಈ ಕೆಳಗಿನಂತಿವೆ ನೋಡಿ. 

ಸಭೆಯ ತೀರ್ಮಾನಗಳು
1. ಮಹದಾಯಿ ನ್ಯಾಯಾಧೀಕರಣ ನೀಡಿರುವ ತೀರ್ಪಿನ ಅನುಷ್ಠಾನ.
2. ಕುಡಿಯುವ ನೀರಿನ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಮಾಡುವುದು.
4.  ಗೋವಾ ಸರ್ಕಾರದ ಕ್ಯಾತೆಗಳಿಗೆ ದಾಖಲೆ ಸಹಿತ ಸಭೆಯಲ್ಲಿ ವಿಮರ್ಶೆ.
5. ಕಾನೂನು ಪಂಡಿತರ ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದು.
6. ಮುಂದಿನ ಸಭೆಯಲ್ಲಿ ಎಲ್ಲಾ ಉತ್ತರ ಕರ್ನಾಟಕ ಶಾಸಕರನ್ನ ಸೇರಿಸಿ ಸಭೆ ನಡೆಸುವುದು
7. ಶಾಂತಿಯುತವಾಗಿ ಮಹದಾಯಿ ವಿವಾದವನ್ನ ಬಗೆಹರಿಸಲು ಚರ್ಚೆ.