Asianet Suvarna News Asianet Suvarna News

ವಿಧಾನ ಪರಿಷತ್ತಿನ ಗದ್ದಲ ಗಲಾಟೆ ಯಾರೂ ನಿರೀಕ್ಷಿಸಿರಲಿಲ್ಲ: ಮಾಧುಸ್ವಾಮಿ

ವಿಧಾನ ಪರಿಷತ್ತಿನಲ್ಲಿ ಗದ್ದಲ ವಿಚಾರ ಕಲ್ಬುರ್ಗಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ | ಅನಿರೀಕ್ಷಿತ ರೀತಿನಲ್ಲಿ ನಡೆದ ಗಲಾಟೆ ಗದ್ದಲ

Madhuswamy reaction about Vidhan parishath incident dpl
Author
Bangalore, First Published Jan 5, 2021, 3:26 PM IST

ಕಲಬುರಗಿ(ಜ.05): ಈ ರೀತಿಯ ಗದ್ದಲ ಗಲಾಟೆ ಯಾರೂ ನಿರೀಕ್ಷಿಸಿರಲಿಲ್ಲ. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ದಿನ ಕಳೆದಿತ್ತು. ಹೀಗಾಗಿ ಅವರಾಗಿಯೇ ಕುರ್ಚಿ ಬಿಟ್ಟು ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಗದ್ದಲ ವಿಚಾರ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ, ಪರಿಷತ್ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿ ಆದೇಶಿಸಿರುವ ತನಿಖೆ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ. ಪರಿಷತ್ ಸದಸ್ಯರ ನಡವಳಿಕೆಗಳ ಬಗ್ಗೆ ತನಿಖೆಗೆ ಸಭಾಪತಿ ಆದೇಶ ನೀಡಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಆಪ್ತನನ್ನ ಜೆಡಿಎಸ್‌ಗೆ ಕರೆತರಲು ಕುಮಾರಸ್ವಾಮಿ ಯತ್ನ..!

ಈ ರೀತಿಯ ಗದ್ದಲ ಗಲಾಟೆ ಯಾರೂ ನಿರೀಕ್ಷಿಸಿರಲಿಲ್ಲ. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ದಿನ ಕಳೆದಿತ್ತು. ಹೀಗಾಗಿ ಅವರಾಗಿಯೇ ಕುರ್ಚಿ ಬಿಟ್ಟು ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು. ಬೆಲ್ ನಂತರವೂ ಸಭಾಪತಿ ಬಾರದಿರುವ ಕಾರಣ ಉಪಸಭಾಪತಿಯವರನ್ನು ಕೂರಿಸಲಾಯಿತು. ಇದಾದನಂತರ ಅನಿರೀಕ್ಷಿತ ರೀತಿನಲ್ಲಿ ಗಲಾಟೆ ಗದ್ದಲ ನಡೆಯಿತು ಎಂದು ಹೇಳಿದ್ದಾರೆ.

ವೀಲಿನದ ಹೆಸರಲ್ಲಿ ಜೆಡಿಎಸ್ ಇಬ್ಬಾಗ ಮಾಡಲು ಬಿಜೆಪಿ ತಂತ್ರ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೇ ವಿಧಾನ ಪರುಷತ್ತಿನಲ್ಲಿ ನಮಗೆ ಬೆಂಬಲಿಸಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯ ವಿವಿಧ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಯಾವುದೇ ಶಾಸಕರಿಗೂ ಮೊದಲಿನಂತೆ ಬಜೆಟ್ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ನೈಟ್‌ ಕರ್ಫ್ಯೂನಿಂದ ಯಾವುದೇ ಪ್ರಯೋಜವಿಲ್ಲ: ಸರ್ಕಾರದ ನಿರ್ಧಾರ ವಿರುದ್ಧ ವಿಶ್ವನಾಥ್‌ ಆಕ್ರೋಶ

ಎಲ್ಲಾ ಕೆಲಸವು ಸರಿಯಾಗಿ ಆಗಿದೆ ಎಂದು ಆತ್ಮವಿಶ್ವಾಸದಿಂದ ಯಾರು ಹೇಳುವ ಸ್ಥಿತಿಯಲ್ಲಿ ಇಲ್ಲ. ಯತ್ನಾಳ ಅಸಮಾಧಾನದ ಬಗ್ಗೆ ಅವರನ್ನೇ ಕೇಳಿ ಎಂದ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

Follow Us:
Download App:
  • android
  • ios