ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ರಾಜ್ಯದ 8 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಟ್ಟು 36.92 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಚರ ಹಾಗೂ ಸ್ಥಿರಾಸ್ತಿ ಪತ್ತೆಯಾಗಿದ್ದು, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

 ಬೆಂಗಳೂರು (ಏ.8): ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.

ಕೊಡಗು, ಬೆಳಗಾವಿ, ಬೀದರ್‌, ಮೈಸೂರು, ಶಿವಮೊಗ್ಗ, ಮಂಗಳೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 36.92 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 8 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?

\\B1. ಜಿ.ಕೆ.ರೇವಣ್‌ ಕುಮಾರ್‌ ( ಸಹಾಯ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಲೋಕೋಪಯೋಗಿ ಇಲಾಖೆ, ಉಪ ವಿಭಾಗ, ಮೈಸೂರು):\\B 3 ಕಡೆ ದಾಳಿ, 4 ಸೈಟ್‌, 1 ಮನೆ, 2 ಎಕರೆ ಕೃಷಿ ಜಮೀನು, 2.96 ಕೋಟಿ ರು.ನ ಚಿನ್ನಾಭರಣ, 42.22 ಲಕ್ಷ ರು. ಮೌಲ್ಯದ ವಾಹನ ಸೇರಿ ಒಟ್ಟು 4.27 ಕೋಟಿ ರು. ಮೌಲ್ಯದ ಆಸ್ತಿ.

. ಅಜಯ್‌ ಸಿಂಗ್‌ (ಸಹಾಯಕ ಕಾರ್ಯಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿ ಕಚೇರಿ, ಬೆಳಗಾವಿ): 7 ಕಡೆ ದಾಳಿ, 7 ಸೈಟ್‌, 3 ಮನೆ, 12 ಎಕರೆ ಕೃಷಿ ಜಮೀನು, 6.22 ಲಕ್ಷ ರು. ನಗದು, 54.32 ಲಕ್ಷ ರು. ಮೌಲ್ಯದ ಚಿನ್ನಾಭರಣ, 19 ಲಕ್ಷ ರು.ನ ವಾಹನ, 2.35 ಕೋಟಿ ರು. ಬ್ಯಾಂಕ್‌ ಠೇವಣಿ ಸೇರಿದಂತೆ ಒಟ್ಟು 5.81 ಕೋಟಿ ರು. ಮೌಲ್ಯದ ಆಸ್ತಿ.

. ಬಿ.ಎನ್‌.ಬಾಬು (ಸಹಾಯಕ ಔಷಧ ನಿಯಂತ್ರಕ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು):\\B 6 ಕಡೆ ದಾಳಿ, 4 ಸೈಟ್‌, 5 ಮನೆ, 1.20 ಎಕರೆ ಕೃಷಿ ಜಮೀನು, 25.96 ಲಕ್ಷ ರು. ನಗದು, 1.66 ಕೋಟಿ ರು. ಬ್ಯಾಂಕ್‌ ಠೇವಣಿ ಸೇರಿ ಒಟ್ಟು 4.40 ಕೋಟಿ ರು. ಮೌಲ್ಯದ ಆಸ್ತಿ.

.ಎಚ್‌.ಜಿ.ಸುಶೀಲಮ್ಮ (ಸಹಾಯಕ ಲೆಕ್ಕಾಧಿಕಾರಿ, ನಿರ್ಮಿತಿ ಕೇಂದ್ರ, ಚಿತ್ರದುರ್ಗ ಜಿಲ್ಲೆ ):\\B 2 ಕಡೆ ದಾಳಿ, 13 ಸೈಟ್‌, 6 ಮನೆ, 1 ಕಾಂಪ್ಲೆಕ್ಸ್‌, 34.2 ಎಕರೆ ಕೃಷಿ ಜಮೀನು, 85.90 ಲಕ್ಷ ರು. ಮೌಲ್ಯದ ಇತರೆ ವಸ್ತು ಸೇರಿ ಒಟ್ಟು 8.32 ಕೋಟಿ ರು. ಮೌಲ್ಯದ ಆಸ್ತಿ.

. ಕೆ.ಆರ್‌.ಶೋಭಾ (ಜಿಲ್ಲಾ ಅಧಿಕಾರಿ, ಅರಸು ಹಿಂ. ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ):\\B 6 ಕಡೆ ದಾಳಿ, 2 ಸೈಟ್‌, 1 ಮನೆ, 4.8 ಎಕರೆ ಕೃಷಿ ಜಮೀನು, 57.40 ಲಕ್ಷ ರು.ನ ಚಿನ್ನಾಭರಣ, 1.23 ಕೋಟಿ ರು.ನ ವಾಹನ, ಸೇರಿ ಒಟ್ಟು 3.88 ಕೋಟಿ ರು. ಮೌಲ್ಯದ ಆಸ್ತಿ.

6.ಶಿವಣ್ಣ (ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ, ಬಳ್ಳಾರಿ):\\B 5 ಕಡೆ ದಾಳಿ, 14 ಸೈಟ್‌, 3 ಮನೆ, 44 ಎಕರೆ ಕೃಷಿ ಜಮೀನು, 28 ಲಕ್ಷ ರು. ನಗದು ಸೇರಿ ಒಟ್ಟು 2.82 ಕೋಟಿ ರು. ಮೌಲ್ಯದ ಆಸ್ತಿ.

7. ಕೆ.ಎಲ್‌.ಸುರೇಶ್‌ (ಹಣಕಾಸು ನಿಯಂತ್ರಕ(ನಿವೃತ್ತ), ಕರ್ನಾಟಕ ಪಶು ವಿಜ್ಞಾನ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಬೀದರ್‌):\\B 2 ಕಡೆ ದಾಳಿ, 2 ಸೈಟ್‌, 2 ಮನೆ, 3.34 ಎಕರೆ ಕೃಷಿ ಜಮೀನು ಸೇರಿ ಒಟ್ಟು 4.38 ಕೋಟಿ ರು. ಮೌಲ್ಯದ ಆಸ್ತಿ.

8. ಐ.ಕೆ.ಪುಟ್ಟಸ್ವಾಮಿ (ಸಹಾಯಕ ಕಾರ್ಯಪಾಲಕ ಅಭಿಯಂತರ, ಹಾರಂಗಿ ಉಪ ವಿಭಾಗ, ಕಾವೇರಿ ನೀರಾವರಿ ನಿಗಮ, ಹಾರಂಗಿ ಪುನರ್ವಸತಿ ವಿಭಾಗ ಕಚೇರಿ, ಕುಶಾಲನಗರ):\\B 4 ಕಡೆ ದಾಳಿ, 6 ಸೈಟ್‌, 1 ಮನೆ, 51.30 ಲಕ್ಷ ರು.ನ ಚಿನ್ನಾಭರಣ ಸೇರಿ ಒಟ್ಟು 2.99 ಕೋಟಿ ರು. ಮೌಲ್ಯದ ಆಸ್ತಿ.

ಪತ್ತೆಯಾದ ಅಕ್ರಮ ಆಸ್ತಿ ವಿವರ

* 21.71 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆ

* 15.21 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆ