ಲೋಕಸಭಾ ಚುನಾವಣೆಗೆ ಪಾಕಿಸ್ತಾನದಿಂದ ಕಾಂಗ್ರೆಸ್ ಹಣ? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಈ ಬಾರಿ ಬಹುದೊಡ್ಡ ಗೆಲುವಿನೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ (ಮಾ.16): 'ಲೋಕಸಭಾ ಚುನಾವಣೆಗೆ ಪಾಕಿಸ್ತಾನದಿಂದ ಕಾಂಗ್ರೆಸ್‌ಗೆ ಹಣ ಬಂದಿರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪಾಕಿಸ್ತಾನದಿಂದ ಬಿಜೆಪಿಗೆ ಹಣ ಬಂದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಅವರು ಆರೋಪಿಸಿರುವ ಹಾಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ದುಡ್ಡು ಕಾಂಗ್ರೆಸ್‌ಗೆ ಬಂದಿರಬೇಕು. ಬಿಜೆಪಿಗೆ ಇಂತಹ ಹಣದ ಅವಶ್ಯಕತ ಇಲ್ಲ ಎಂದರು.
ನೀತಿ ಸಂಹಿತೆ ಜಾರಿ ಬೆನ್ನಲ್ಲೇ ನಡುರಸ್ತೆಯಲ್ಲಿ ಸರ್ಕಾರಿ ವಾಹನ ಬಿಟ್ಟು ಆಟೋದಲ್ಲಿ ಮನೆಗೆ ಹೊರಟ ಬೆಳಗಾವಿ ಮೇಯರ್!
ಎಲೆಕ್ಟ್ರೋಲ್ ಬಾಂಡ್ ಮಾಹಿತಿ ಬಹಿರಂಗದಿಂದ ಬಿಜೆಪಿಗೆ ಏನೂ ತೊಂದರೆ ಇಲ್ಲ. ಬಾಂಡ್ ಮಾಹಿತಿ ಬಹಿರಂಗ ಚುನಾವಣೆಯಲ್ಲಿ ತೊಡಕಾಗುವುದಿಲ್ಲ. ಲೋಕಸಭಾ ಚುನಾವಣೆ ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿದೆ.ಬಿಜೆಪಿ ಮತ್ತು ಎನ್‌ಡಿಎ ಚುನಾವಣೆಗೆ ಸನ್ನದ್ಧಗೊಂಡಿದೆ. ಹೆಚ್ಚು ಮತದಾನ ಆಗುವ ನಿಟ್ಟಿನಲ್ಲಿ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಚುನಾವಣಾ ಪೂರ್ವದಲ್ಲಿಯೇ ನಮ್ಮ ತಯಾರಿ ಶುರುವಾಗಿತ್ತು. ನಮ್ಮ ನೇತೃತ್ವದಲ್ಲಿ ಅಂದರೆ ಕಳೆದ ಹತ್ತು ವರ್ಷದಲ್ಲಿ ನಮ್ಮ ಸರ್ಕಾರದ ನಿಯತ್ತು ಅತ್ಯುತ್ತಮವಾಗಿದೆ. ಹೀಗಾಗಿ ಈ ಬಾರಿಯೂ ಬಿಜೆಪಿಯೊಂದೇ 370 ಕ್ಕೂ ಹೆಚ್ಚು ಸೀಟು ಗಳಿಸುತ್ತೆ. ಎನ್ ಡಿ ಎ ಒಕ್ಕೂಟ ಸೇರಿ ಒಟ್ಟು 400 ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೆ. ಆ ಮೂಲಕ ಸುಭದ್ರ ಸರ್ಕಾರವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಲೋಕಸಭಾ ಟಿಕೆಟ್ ಸಿಗದ್ದಕ್ಕೆ ಈಶ್ವರಪ್ಪ ಬಂಡಾಯ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಈ ಬಾರಿ ಬಹುದೊಡ್ಡ ಗೆಲುವಿನೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸುಳ್ಳು ಸುಳ್ಳು ಮಾತನಾಡಿ ಆರೋಪ ಮಾಡಿದ್ದರು.ಇದಕ್ಕೆ ಈ ಬಾರಿ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.