ದ.ಕ ಜಿಲ್ಲೆಗೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಒಪ್ಪಿಗೆ!
ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೆ ಮಹತ್ವದ ಬೆಳವಣಿಗೆ ನಡೆದಿದ್ದು, ಕೊನೆಗೂ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಕೊನೆಗೂ ಒಪ್ಪಿಗೆ ನೀಡಿದ್ದಾರೆ.
ಪುತ್ತೂರು (ಮಾ.14): ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೆ ಮಹತ್ವದ ಬೆಳವಣಿಗೆ ನಡೆದಿದ್ದು, ಕೊನೆಗೂ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಒಪ್ಪಿಗೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಿಂದ ಆರಂಭಗೊಂಡಿದ್ದ ಬಿಜೆಪಿ-ಪುತ್ತಿಲರ ನಡುವಿನ ಸಂಘರ್ಷ ಕೊನೆಗೂ ಸಂಧಾನ ಯಶಸ್ವಿಯಾಗಿದೆ. ಇದೀಗ ಬಿಜೆಪಿ ಮರುಸೇರ್ಪಡೆಯಾಗಲು ಪುತ್ತಿಲ ಒಪ್ಪಿಗೆ ನೀಡಿದ್ದಾರೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಪುತ್ತಿಲರ ಜೊತೆಗಿನ ಸಂಧಾನ ಯಶಸ್ವಿಯಾಗಿದೆ.
ಜಿಎಂ ಸಿದ್ದೇಶ್ವರ್ ಪತ್ನಿಗೆ ಬಿಜೆಪಿ ಟಿಕೆಟ್; ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ!
ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತಿರಿದ್ದರು.
ಅರುಣ್ ಪುತ್ತಿಲ ಜೊತೆ ಬಿಜೆಪಿ ಕಚೇರಿಯಲ್ಲಿ ಹಲವು ಗಂಟೆಗಳ ಕಾಲ ನಡೆದ ಮಾತುಕತೆ. ಕೊನೆಗೂ ಷರತ್ತು ರಹಿತವಾಗಿ ಬಿಜೆಪಿ ಬರಲು ಅರುಣ್ ಪುತ್ತಿಲ ಒಪ್ಪಿಗೆ ನೀಡಿದ್ದಾರೆ. ಪಾರ್ಟಿಗೆ ಬಂದ ಬಳಿಕ ಸ್ಥಾನಮಾನ ನೀಡಲು ಬಿಜೆಪಿ ನಾಯಕರ ಒಪ್ಪಿಗೆ ನೀಡಿದ್ದಾರೆನ್ನಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚನೆಯಂತೆ ನಡೆದ ಸಂಧಾನ ಮಾತುಕತೆ. ವಿಜಯೇಂದ್ರ ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ. ಮಂಗಳೂರಿನಲ್ಲೇ ಕಾರ್ಯಕ್ರಮ ನಡೆಸಿ ಪುತ್ತಿಲ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ.
ಪುತ್ತಿಲ ಪರಿವಾರಕ್ಕೆ ಸೆಡ್ಡು; ಮತ್ತೆ ಭಾರಿ ಅಂತರದಿಂದ ಗೆಲ್ಲುತ್ತೇನೆಂದ ಸಂಸದ ನಳಿನ್ ಕುಮಾರ್ ಕಟೀಲ್!
ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ದ ಅಸಮಾಧಾನ ಹೊಂದಿದ್ದ ಪುತ್ತಿಲ. ಸದ್ಯ ನಳಿನ್ ಕಟೀಲ್ ಬದಲಿಗೆ ಕ್ಯಾ.ಬ್ರಿಜೇಶ್ ಚೌಟಾಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ನಳಿನ್ ಕಟೀಲ್ ಗೆ ಟಿಕೆಟ್ ಸಿಗದಂತೆ ಯತ್ನಿಸಿದ್ದರು. ಬಿಜೆಪಿ ಸೇರುವ ಪ್ರಯತ್ನ ವಿಫಲವಾದಾಗ ಲೋಕಸಭೆಗೆ ಬಂಡಾಯ ಘೋಷಿಸಿದ್ದರು. ಆದರೆ ಇದೀಗ ಬ್ರಿಜೇಶ್ ಚೌಟಾಗೆ ಟಿಕೆಟ್ ಘೋಷಿಸಿರೋ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಇತ್ತ ಪುತ್ತಿಲ ಬಿಜೆಪಿಗೆ ಮರುಸೇರ್ಪಡೆಯಾಗುವ ಬಗ್ಗೆ ಮಾತುಕತೆ ನಡೆದಿತ್ತು. ಕೊನೆಗೂ ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ.