ಸಿದ್ದರಾಮಯ್ಯ ಸ್ವಜಾತಿಯವರನ್ನೇ ಬೆಳೆಯಲು ಬಿಡಲಿಲ್ಲ: ಎಚ್‌ಡಿ ದೇವೇಗೌಡ ವಾಗ್ದಾಳಿ

ಸಿದ್ದರಾಮಯ್ಯ ಸ್ವಜಾತಿಯರನ್ನೇ ಬೆಳೆಯಲು ಬಿಡಲಿಲ್ಲ. ಸಿದ್ದರಾಮಯ್ಯ ವಿಚಾರಕ್ಕೆ ಹೆಗಡೆ ಮತ್ತು ನನಗೂ ಹೋರಾಟ ಆಯಿತು ಎಂದು ಸಿಎಂ ಸಿದ್ದರಾಮಯ್ಯರ ವಿರುದ್ಧ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಕಿಡಿಕಾರಿದರು.

Lok sabha election 2024 HD Devegowda outraged against CM Siddaramaiah at chikkamagaluru rav

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
 
ಚಿಕ್ಕಮಗಳೂರು (ಮಾ.15): ಸಿದ್ದರಾಮಯ್ಯ ಸ್ವಜಾತಿಯರನ್ನೇ ಬೆಳೆಯಲು ಬಿಡಲಿಲ್ಲ. ಸಿದ್ದರಾಮಯ್ಯ ವಿಚಾರಕ್ಕೆ ಹೆಗಡೆ ಮತ್ತು ನನಗೂ ಹೋರಾಟ ಆಯಿತು ಎಂದು ಸಿಎಂ ಸಿದ್ದರಾಮಯ್ಯರ ವಿರುದ್ಧ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಕಿಡಿಕಾರಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ದೇವೇಗೌಡ, ಸಿದ್ದರಾಮಯ್ಯ ಯಾರನ್ನ ಮಂತ್ರಿ ಮಾಡಿದ್ದಾನೆ, ನನ್ನ ಅಭಿಮಾನಿ ಕೆ.ಎಂ.ಕೃಷ್ಣಮೂರ್ತಿಯನ್ನೂ ಮಂತ್ರಿ ಮಾಡಲಿಲ್ಲ. ಸ್ವಜಾತಿಯರನ್ನೇ ಬೆಳೆಯಲು ಬಿಡಲಿಲ್ಲ. ನನ್ನ ಒಡನಾಡಿಗಳನ್ನು ಮಂತ್ರಿ ಮಾಡಲಿಲ್ಲ ಇವತ್ತು ಹೇಳುತ್ತೇನೆ ನಾಳೆನೂ ಹೇಳುತ್ತೇನೆ ಸಿದ್ದರಾಮಯ್ಯ ಬದುಕಿದ್ದಾನೆ ಕೇಳಿ ನೋಡಿ ಎಂದರು.

ಕೋಟಾ ಶ್ರೀನಿವಾಸ ಆಯ್ಕೆಯಿಂದ ನಾಲ್ಕು ಕ್ಷೇತ್ರ ಮೇಲೆ ಪ್ರಭಾವ; ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ?

ಸಿದ್ದರಾಮಯ್ಯ ಬಗ್ಗೆ ಹೆಗಡೆಯವರು ಹಿಂದೆಯೇ ಹೇಳಿದ್ದರು. ಸಿದ್ದರಾಮಯ್ಯ ಮೋಸ ಮಾಡುತ್ತಾರೆ. ಅವನಿಗೆ ಮಂತ್ರಿ ಮಾಡಬೇಡ ಅಂದಿದ್ದರು. ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮಾಡು ಎಂದು ಹೆಗಡೆ ಹೇಳಿದ್ದರು. ಹೆಗಡೆಯವರ ಮನೆಯ ಒಳಗೆ ಕೂರಿಸಿಕೊಂಡು ನನಗೆ ಹೇಳಿದ್ದರು. ಹಿಂದುಳಿದ ವರ್ಗದವರನ್ನೇ ಮಾಡುವುದಾದರೆ ತಿಪ್ಪೇಸ್ವಾಮಿ ಮಾಡು, ಸಿದ್ದರಾಮಯ್ಯನ ಮಾಡಬೇಡ ಅಂದಿದ್ದರು. ನಾನು ಸುಳ್ಳನ್ನು ಹೇಳಿ ಪಾಪದ ಕೆಲಸ ಮಾಡುವುದಿಲ್ಲ. ನನಗೆ ಮಂಡಿ ನೋವಿದೆ ಆದರೆ ಜ್ಞಾಪಕ ಶಕ್ತಿ ಹಾಗೆ ಉಳಿದಿದೆ ಎಂದು ಹೇಳಿದರು.

ಮೋದಿ ದೇಶದ ಸರ್ವೋಚ್ಚ ನಾಯಕ: 

ಮೋದಿ ದೇಶದ ಸರ್ವೋಚ್ಚ ನಾಯಕ ಅವರ ಸಮಾನವಾಗಿ ಯಾವ ನಾಯಕರು ದೇಶದಲ್ಲಿ ಇಲ್ಲ ಎನ್‌ಡಿಎ ಕೂಟದಲ್ಲಿ ಮೋದಿ ಸಮಕ್ಕೆ ಯಾರೂ ಇಲ್ಲ. ಒಂದೊಂದು ಚಾನೆಲ್ನಲ್ಲಿ ಒಂದೊಂದು ಸಮೀಕ್ಷೆ ಬರುತ್ತಿದೆ. ಇದಕ್ಕೆಲ್ಲ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆಂದರು. ಪತ್ರಿಕೆಯಲ್ಲಿ ನೋಡಿದೆ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. ಹಿಂದೆಯೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿದ್ದರು. 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ  ಹಾಸನ ಕ್ಷೇತ್ರದ ಜನರು ನನ್ನ ಗೆಲ್ಲಿಸಿದ್ದಾರೆ ಅವರ ಋಣ ತೀರಿಸಬೇಕೆಂದರು.

ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಚೇತನ್: 

ಸಿಎಂ ಸಿದ್ದರಾಮಯ್ಯ ಅಪ್ತ ಶಾಸಕ ಜಿ.ಹೆಚ್. ಶ್ರೀನಿವಾಸ್ ಅಳಿಯ ಚೇತನ್ ಜೆಡಿಎಸ್ಗೆ ಸೇರ್ಪಡೆಗೊಂಡಿದ್ದಾರೆ. ನಮ್ಮ ಕುಟುಂಬ ಜೆಡಿಎಸ್, ಕಾಂಗ್ರೆಸ್‌ನೊಟ್ಟಿಗೆ ಗುರುತಿಸಿಕೊಂಡಿತ್ತು. ನಮ್ಮ ದೊಡ್ಡಪ್ಪ ದಿವಂಗತ ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ, ನಮ್ಮ ಅಪ್ಪ ಕೆ.ಎಂ. ಕೆಂಪರಾಜು  ಸಿದ್ದರಾಮಯ್ಯ ಒಟ್ಟಿಗಿದ್ದರು. ದೊಡ್ಡಪ್ಪ , ನಮ್ಮಪ್ಪ ನಿಧನವಾದ  ನಂತರ ನಮಗೆ ರಾಜಕೀಯ ನೆಲೆ ಇಲ್ಲದಂತಾಗಿತ್ತು ಎಂದು ಹೇಳಿದರು. ಜೆಡಿಎಸ್ ಸೇರ್ಪಡೆಗೊಂಡ ಬಳಿಕ ಮಾತನಾಡಿ, ನಮ್ಮನ್ನು ಗುರುತಿಸಿದ ಪ್ರಜ್ವಲ್ ರೇವಣ್ಣ ರಾಜಕೀಯ ಸ್ಥಾನಮಾನ ಕೊಡುವ ಭರವಸೆ ಕೊಟ್ಟಿದ್ದಾರೆ. ರಾಜಕೀಯ ಹಿತೈಷಿಗಳು, ಕಡೂರಿನ ಜನರ ಸಲಹೆಯಂತೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿಕೊಂಡು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿದ್ದೇನೆ. ನಾನು ಶಾಸಕ ಶ್ರೀನಿವಾಸ ಅವರ ಅಳಿಯ ಎನ್ನುವುದಕ್ಕಿಂತ ಕಡೂರು ಕ್ಷೇತ್ರದ ಮಗ ಎಂದರು.

ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ದೇವೇಗೌಡ : 

ಕಡೂರು ಪಟ್ಟಣಕ್ಕೆ ಬಂದಿದ್ದ ಹಾಸನ ಲೋಕಸಭಾ ಕ್ಷೇತ್ರದ ಗೆಲುವಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಣತಂತ್ರ ಹೆಣೆಯಲು ಆರಂಭಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ಪುತ್ರ ಹೆಚ್.ಡಿ.ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ವೈ.ಎಸ್.ವಿ.ದತ್ತರೊಂದಿಗೆ  ಭೇಟಿ ನೀಡಿ ಚರ್ಚೆ ನಡೆಸಿದ ಎಚ್ ಡಿ ದೇವೇಗೌಡ ಚುನಾವಣಾ ತಂತ್ರಗಾರಿಕೆ ಆರಂಭಿಸಿದರು.

ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!

 ಜೆಡಿಎಸ್ ಮತ್ತು  ಬಿಜೆಪಿ ಮೈತ್ರಿ ಬೆನ್ನಲೇ ಗೆಲುವಿಗೆ ಶ್ರಮಿಸುವಂತೆ ಮಾಜಿ ಪ್ರಧಾನಿ ಮನವಿ ಮಾಡಿದ್ದಾರೆ. ಕಡೂರಿಗೆ ಆಗಮಿಸಿದ ದೇವೇಗೌಡರು ಮೊದಲು ಜೆಡಿಎಸ್ ಕಾರ್ಯಕರ್ತರು ಸಭೆ ನಡೆಸಿ ಸಂಸದ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ನಡೆಸಿದರು. ತದನಂತರ ಕಡೂರಿನ ಬಿಜೆಪಿ ಪಕ್ಷದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ತೆರಳಿದರು. ಅಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು  ಕೇಸರಿ ಶಾಲ್ ಧರಿಸಿ ದೊಡ್ಡಗೌಡರನ್ನು ಸ್ವಾಗತಿಸಿದರು. ದೇವೇಗೌಡರು. ನೂರಾರು ಬಿಜೆಪಿ ಕಾರ್ಯಕರ್ತರ ಜೊತೆ ಚುನಾವಣಾ ತಯಾರಿ ಬಗ್ಗೆ ಸಭೆ ನಡೆಸಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಹಾಸನ ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೆ ಕಡೂರು ಕ್ಷೇತ್ರ ಬರುವುದರಿಂದ ದೇವೇಗೌಡ ಭೇಟಿ ಮಹತ್ವ ಪಡೆದಕೊಂಡಿದೆ.

Latest Videos
Follow Us:
Download App:
  • android
  • ios