ಸತತ 8 ಸಲ ವಿಧಾನಪರಿಷತ್‌ಗೆ ಆಯ್ಕೆ; ಸಭಾಪತಿ ಬಸವರಾಜ ಹೊರಟ್ಟಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆ!

ಸತತ ಎಂಟು ಬಾರಿ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ದಾಖಲೆ ಇದೀಗ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. ಈ ಮೂಲಕ ಭಾರತೀಯ ರಾಜಕೀಯ ಇತಿಹಾಸದಲ್ಲಿ ಕನ್ನಡಿಗ ಹೊರಟ್ಟಿ ಅವರ ಸಾಧನೆಗೆ ಮತ್ತೊಂದು ಗೌರವ ಸಿಕ್ಕಂತಾಗಿದೆ.

Limca Book of Records LC Chairman Basavaraj horatti Horatti won 8 times from same constituency rav

ಹುಬ್ಬಳ್ಳಿ (ಜ.25): ಸತತ ಎಂಟು ಬಾರಿ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ದಾಖಲೆ ಇದೀಗ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. ಈ ಮೂಲಕ ಭಾರತೀಯ ರಾಜಕೀಯ ಇತಿಹಾಸದಲ್ಲಿ ಕನ್ನಡಿಗ ಹೊರಟ್ಟಿ ಅವರ ಸಾಧನೆಗೆ ಮತ್ತೊಂದು ಗೌರವ ಸಿಕ್ಕಂತಾಗಿದೆ.

ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದ ಸೇವೆಯಲ್ಲಿರುವ ಹೊರಟ್ಟಿ ಅವರು ಒಂದೇ ಕ್ಷೇತ್ರ(ಶಿಕ್ಷಕರ ಕ್ಷೇತ್ರ)ದಿಂದ 1980ರಿಂದ ಸತತ ಎಂಟು ಬಾರಿ ಮೇಲ್ಮನೆಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. 

ಝಮೀರ್ ಅಹಮದ್ ಎಲ್ಲಿದ್ದಾರಪ್ಪಾ.? ಸ್ವಲ್ಪ ಮುಖ ತೋರಿಸಿ ಎಂದ್ರು ಸಭಾಪತಿ!

43 ವರ್ಷದಿಂದ ವಿಧಾನಪರಿಷತ್‌ ಸದಸ್ಯರಾಗಿರುವ ಅವರು ಸದ್ಯ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರಟ್ಟಿ ಅವರು 1980ರಿಂದ ಸ್ಪರ್ಧಿಸಿದ ಚುನಾವಣೆಗಳಲ್ಲಿ ಜಯಗಳಿಸಿದ ಅಂಕಿ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಯನ್ನು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನ 2024ರ ಆವೃತ್ತಿಯಲ್ಲಿ ಪ್ರಕಟಿಸಲಾಗಿದೆ. 

ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಭಾರತೀಯರ ವಿಶ್ವದಾಖಲೆಯನ್ನು ದಾಖಲು ಮಾಡುವ ಕೆಲಸ ಮಾಡಲಾಗುತ್ತದೆ. ಈ ಮೂಲಕ ಭಾರತೀಯರ ಸಾಧನೆಯನ್ನು ವಿಶ್ವದ ಮುಂದಿಡುವ ಕೆಲಸ ಆಗುತ್ತದೆ.

ಐತಿಹಾಸಿಕ ದಾಖಲೆ: ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಪ್ರವೇಶಿಸಿ ಬುಧವಾರಕ್ಕೆ 43 ವರ್ಷ 201 ದಿನಗಳಾಗಿವೆ. ಇದೊಂದು ಐತಿಹಾಸಿಕ ದಾಖಲೆ. ಇಷ್ಟೊಂದು ಸುದೀರ್ಘ ಚುನಾವಣಾ ರಾಜಕಾರಣವನ್ನು ಬೇರೆ ಯಾರು ಮಾಡಿಲ್ಲ. 

ಈಗಾಗಲೇ(2022ರಲ್ಲಿ) ಲಂಡನ್ನಿನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೊರಟ್ಟಿ ಹೆಸರಿನಲ್ಲಿ ಈ ಸುದೀರ್ಘ ಗೆಲುವಿನ ದಾಖಲೆ ದಾಖಲಾಗಿದೆ.ಭಾರತೀಯ ಚುನಾವಣಾ ಆಯೋಗದಲ್ಲೂ ಇವರ ಸುದೀರ್ಘ ಸೇವಾ ಅವಧಿ ದಾಖಲೆಗಳು ಸಾಂಖ್ಯಿಕ ಇಲಾಖೆಯಲ್ಲಿ ದಾಖಲೀಕರಣಗೊಂಡು ಗೆಜೆಟ್‌ನಲ್ಲೂ ಪ್ರಕಟಗೊಂಡಿದೆ.  

ಎಚ್‌ಡಿ ಕುಮಾರಸ್ವಾಮಿ ದಿಲ್ಲಿಗೆ ಹೋದ್ರೆ, ರಾಜ್ಯಕ್ಕೆ ನಿಖಿಲ್? ನಡೆದಿದೆ ಭರ್ಜರಿ ತಾಲೀಮು!

ಇದೀಗ ಲಿಮ್ಕಾ ಬುಕ್‌ಗೂ ಇವರ ಸುದೀರ್ಘ ಗೆಲುವಿನ ದಾಖಲೆ ಸೇರ್ಪಡೆಯಾಗಿರುವುದು ಶಿಕ್ಷಕರು ಹಾಗೂ ಅವರ ಅಭಿಮಾನಿ ಬಳಗದಲ್ಲಿ ಸಂತಸವನ್ನುಂಟು ಮಾಡಿದೆ.

ಹೊರಟ್ಟಿಯವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಸಭಾಪತಿಯಾಗಿ ಮೇಲ್ಮನೆಯನ್ನು ಮುನ್ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios