Asianet Suvarna News Asianet Suvarna News

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌: ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ, ಜೋಶಿ

ರಾಜ್ಯಪಾಲರ ಈ ಕ್ರಮ ಯಾವುದೇ ವ್ಯಕ್ತಿಯ ಸಾರ್ವಜನಿಕ ಬದುಕಿನಲ್ಲಿ ಶುದ್ಧತೆ ಕಾಪಾಡಲು ಬಹುದೊಡ್ಡ ಹೆಜ್ಜೆ. ಯಾರೇ ಇದ್ದರೂ ಸಹಿತ ಉನ್ನತ ಸ್ಥಾನದಲ್ಲಿದ್ದಾಗ, ಆರೋಪ ಬಂದಾಗ ತನಿಖೆ ಆಗಬೇಕು. ಸಮಗ್ರ ತನಿಖೆಗೆ ಎಲ್ಲ ರೀತಿಯ ಕ್ರಮವಾಗಬೇಕು. ಭ್ರಷ್ಟಾಚಾರ ಮಾಡಬೇಕಾದರೆ ಭಯ ಇರಬೇಕು ಎಂಬ ಹಿನ್ನೆಲೆಯಲ್ಲಿ ಅಳೆದು ತೂಗಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

Let cm siddaramaiah accept moral responsibility and resign says union minister pralhad joshi grg
Author
First Published Aug 18, 2024, 12:11 PM IST | Last Updated Aug 18, 2024, 12:11 PM IST

ಹುಬ್ಬಳ್ಳಿ(ಆ.18):  ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡು, ಕಾನೂನು ತಜ್ಞರ ಸಲಹೆ ಪಡೆದು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಈ ಕ್ರಮ ಯಾವುದೇ ವ್ಯಕ್ತಿಯ ಸಾರ್ವಜನಿಕ ಬದುಕಿನಲ್ಲಿ ಶುದ್ಧತೆ ಕಾಪಾಡಲು ಬಹುದೊಡ್ಡ ಹೆಜ್ಜೆ. ಯಾರೇ ಇದ್ದರೂ ಸಹಿತ ಉನ್ನತ ಸ್ಥಾನದಲ್ಲಿದ್ದಾಗ, ಆರೋಪ ಬಂದಾಗ ತನಿಖೆ ಆಗಬೇಕು. ಸಮಗ್ರ ತನಿಖೆಗೆ ಎಲ್ಲ ರೀತಿಯ ಕ್ರಮವಾಗಬೇಕು. ಭ್ರಷ್ಟಾಚಾರ ಮಾಡಬೇಕಾದರೆ ಭಯ ಇರಬೇಕು ಎಂಬ ಹಿನ್ನೆಲೆಯಲ್ಲಿ ಅಳೆದು ತೂಗಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಅನುಮತಿ ಕೊಡುವ ಮುನ್ನ ಕಾನೂನು ತಜ್ಞರ ಸಲಹೆ ಪಡೆದಿರುತ್ತಾರೆ ಎಂದರು. ಸಿದ್ದರಾಮಯ್ಯ ತನಿಖೆಗೆ ಸಹಕಾರ ಕೊಡುತ್ತಾರೆ ಎಂಬ ಭರವಸೆ ಇದೆ. ಅವರು ತಪ್ಪು ಮಾಡಿಲ್ಲ ಎಂದಾ ದರೆ ಏನೂ ತೊಂದರೆ ಆಗಲ್ಲ. ಭಯಪ ಡುವ ಅಗತ್ಯವೇ ಇಲ್ಲ. ಸಿದ್ದರಾಮಯ್ಯ ತನಿಖೆಗೆ ಅಡೆತಡೆ ಮಾಡಬಾರದು. ಅವರು ಕಾನೂನು ಹೋರಾಟ ಮಾಡಲಿ, ಅದಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ ಕಾನೂನಿನ ನೆಪ ಇಟ್ಟುಕೊಂಡು ತನಿಖೆಗೆ ಅಡ್ಡಿ ಮಾಡಬಾರದು. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಇದೇ ರೀತಿ ಆಗಿತ್ತು. ಆಗಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾ ಗಿದ್ದರು. ಅವರನ್ನು ನಾವೇನು ಕಾಂಗ್ರೆಸ್ ಏಜೆಂಟ್ ಅಂತ ಹೇಳಿರಲಿಲ್ಲ. ಆಗ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು ಎಂದು ನೆನಪಿಸಿದರು.

ನನ್ನ ಕಾಳಜಿ ಅರ್ಥಮಾಡಿಕೊಳ್ಳದೆ ಸಿದ್ದರಾಮಯ್ಯ ಗಂಡಾಂತರ ಎಳೆದುಕೊಂಡರು: ಪ್ರತಾಪ ಸಿಂಹ

ಕಾಂಗ್ರೆಸ್ ಸರ್ಕಾರವೇ 5 ವರ್ಷ ಇರಬೇಕು. ನಾವು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವು ದಿಲ್ಲ. ಸಿದ್ದರಾಮಯ್ಯನವರೇ ಐದು ವರ್ಷ ಇದ್ದರೂ ನಮ್ಮ ಅಭ್ಯಂತರ ಇಲ್ಲ. ಆದರೆ ಈಗ ಪ್ರಾಸಿಕ್ಯೂಶನ್ನಿಗೆ ಅನುಮತಿ ಸಿಕ್ಕಿದೆ.ತನಿಖೆ ಎದುರಿಸಲಿ. 

ಆಂತರಿಕ ಬೇಗುದಿ ಇಲ್ಲ

ಬಿಜೆಪಿಯಲ್ಲಿ ಯಾವುದೇ ಆಂತರಿಕ ಬೇಗುದಿ ಯಿಲ್ಲ. ಎಲ್ಲವೂ ಸರಿಯಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಅಸಮಾ ಧಾನ ಇದೆ ಎಂದು ಯಾರೂ, ಎಲ್ಲೂ ಹೇಳಿಕೊಂ ಡಿಲ್ಲ. ಪಾದಯಾತ್ರೆ ಕುರಿತು ಅವರೇ ಹೇಳಿಕೊಂ ಡಿದ್ದಾರೆ. ಹೈಕಮಾಂಡ್ ಅನುಮತಿ ನಂತರ ಪಾದಯಾತ್ರೆ ಮಾಡುವುದಾಗಿ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios