ಬೆಂಗಳೂರು, (ಸೆ.26): ಯಾರು ಬೇಕಾದರೂ ಕೃಷಿ ಭೂಮಿಯನ್ನು ಖರೀದಿಸಬಹುದಾದಂತ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ, ತೀವ್ರ ವಿರೋಧದ ನಡುವೆಯೂ ವಿಧಾಸಭೆಯಯಲ್ಲಿ ಅಂಗೀಕರಿಸಲಾಗಿದೆ.

"

ಇಂದು (ಶನಿವಾರ) ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ ಸುಧಾರಣಾ ತಿದ್ದುಪಡಿ ವಿಧೇಯವನ್ನು ಆಡಳಿತಾರೂಢ ಬಿಜೆಪಿ ಸರ್ಕಾರ ಮಂಡಿಸಿತು. ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿದವು. ವಿವಾದಾತ್ಮಕ ವಿಧೇಯಕ ಕುರಿತಂತೆ ತೀವ್ರವಾದಂತ ಸುಧೀರ್ಘ ಚರ್ಚೆ ಕೂಡ ನಡೆಯಿತು. ಇಂತಹ ವಿಧೇಯಕ ವಿರೋಧಿಸಿ, ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಕೂಡ ಮಾಡಿದರು.

ಮೋದಿ ಮಾತು ಮೀರದ ಸಿಎಂ: ರೈತರ ಜೊತೆ ಸಭೆ ವಿಫಲ, ಕರ್ನಾಟಕ ಬಂದ್ ಖಚಿತ

ಈ ಚರ್ಚೆಯ ನಡುವೆ ವಿಧಾನಸಭೆಯಲ್ಲಿ ಮಸೂದೆ ಕುರಿತಂತ ಚರ್ಚೆಗೆ ಉತ್ತರಿಸಿದ ಕಂದಾಯ ಸಚಿವ ಆರ್ ಅಶೋಕ್, ಈ ಕಾಯಿದೆ ಕೃಷಿಯತ್ತ ಒಲವು ಇರುವ ಜನರಿಗೆ ಬಹಳ ಅನುಕೂಲವಾಗಲಿದೆ. ಬೀಳು ಬಿಟ್ಟ ಜಮೀನು ಉಪಯೋಗ ಮಾಡಲು ಪ್ರಯೋಜನವಾಗಲಿದೆ. ನಾಡಿನ ಅಭಿವೃದ್ಧಿಯ ಹಿನ್ನಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂಬುದಾಗಿ ತಿಳಿಸಿದರು.

"

ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವಿಧೇಯಕವನ್ನು ತರಾತುರಿಯಲ್ಲಿ ಸರ್ಕಾರ ಜಾರಿಗೆ ತರಲು ಹೊರಟಿದೆ ಎಂಬುದಾಗಿ ಕಾಂಗ್ರೆಸ್ ಆರೋಪಿಸಿತು. ಹೀಗೆ ತೀವ್ರ ವಿರೋಧ, ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೂ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕರವಾಯ್ತು.