ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ ಒಂದೇ ಹಂತದಲ್ಲಿ ಭೂ ಸ್ವಾಧೀನ: ಸಿದ್ದರಾಮಯ್ಯ
ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು 519.60 ಮೀ.ನಿಂದ 524.26 ಮೀ.ವರೆಗೆ ಎತ್ತರಿಸಬೇಕಿದ್ದು, ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಯೋಜನೆಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುವರ್ಣ ವಿಧಾನಸಭೆ(ಡಿ.17): ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಮುಳುಗಡೆಯಾಗುವ ಜಮೀನುಗಳನ್ನು ಒಂದೇ ಹಂತದಲ್ಲಿ ಸ್ವಾಧೀನ ಮಾಡಿಕೊಳ್ಳುವುದು ಹಾಗೂ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ ಭೂಸ್ವಾಧೀನ, ಪುನರ್ವಸತಿ ಹಾಗೂ ಮರುನಿರ್ಮಾಣ ಕುರಿತಂತೆ ಸುವರ್ಣ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು 519.60 ಮೀ.ನಿಂದ 524.26 ಮೀ.ವರೆಗೆ ಎತ್ತರಿಸಬೇಕಿದ್ದು, ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಯೋಜನೆಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.
ಸದನದ ಒಳಗೆ- ಹೊರಗೆ ಕಾಂಗ್ರೆಸ್- ಬಿಜೆಪಿ ವಾಗ್ಯುದ್ಧ: 150 ಕೋಟಿ ಜಟಾಪಟಿ
1.33 ಲಕ್ಷ ಎಕ್ರೆ ಸ್ವಾಧೀನ: ಯೋಜನೆಗಾಗಿ ಮುಳುಗಡೆಯಾಗಲಿರುವ ಜಮೀನು, ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು 1.33 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈವರೆಗೆ 28,967 ಎಕರೆ ಸ್ವಾಧೀನಪಡಿಸಲಾಗಿದ್ದು, ಇನ್ನೂ 1,04,963 ಎಕರೆ ಸ್ವಾಧೀನಪಡಿಸಲು ಬಾಕಿಯಿದೆ. ಅದರೊಂದಿಗೆ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಲಿರುವ 188 ಗ್ರಾಮಗಳ 73 ಸಾವಿರ ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಹಿಂದಿನ ಸರ್ಕಾರ ರೈತರ ಭೂಮಿಯನ್ನು ಎರಡು ಹಂತದಲ್ಲಿ ಭೂಸ್ವಾಧೀನ ಮಾಡುವ ಕುರಿತು ನಿರ್ಧಾರ ಕೈಗೊಂಡಿತ್ತು. ಅದನ್ನು ಬದಲಿಸಿ ಪ್ರಥಮ ಪ್ರಾಶಸ್ತ್ಯದಲ್ಲಿ ಒಂದೇ ಹಂತದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವಂತೆ ತಿಳಿಸಿದರು.
ಜಮೀನು ಕಳೆದುಕೊಳ್ಳುವ ರೈತರಿಗೆ ಜಮೀನಿನ ಮಾರುಕಟ್ಟೆ ದರ, ಆಸ್ತಿ ಮಾರ್ಗದರ್ಶಿ ಮೌಲ್ಯ, ಭೂಸ್ವಾಧೀನ ಕಾಯ್ದೆಯನ್ನು ಗಮನದಲ್ಲಿರಿಸಿ ನ್ಯಾಯಯುತ ಪರಿಹಾರ ಒದಗಿಸಬೇಕು. ಅಲ್ಲದೆ, ರೈತರಿಗಾಗಿಯೇ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ ಜಮೀನಿಗೆ ಪರಿಹಾರ ನೀಡುವ ಕುರಿತಂತೆ ರೈತರು ಸಹಮತದ ದರ ನಿಗದಿಪಡಿಸಲು ಎಲ್ಲರೂ ಮುಂದೆ ಬರಬೇಕು. ರೈತರಿಗೂ ಅನ್ಯಾಯವಾಗದಂತೆ, ಸರ್ಕಾರಕ್ಕೂ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಆಮೆಗತಿಯಲ್ಲಿದ್ದರೆ ಯುಕೆಪಿಎಸ್ 150 ವರ್ಷವಾದ್ರು ಮುಗಿಯಲ್ಲ: ಬಿಜೆಪಿ ಎಂಎಲ್‌ಸಿ ಪೂಜಾರ
ಬಾಗಲಕೋಟೆ: ಕಳೆದ ಆರು ದಶಕಗಳಿಂದ ಆರಂಭವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಮುಕ್ತಾಯ ಆಗುತ್ತಿಲ್ಲ. ಈಗ ನಡೆದಿರುವ ರೀತಿಯಲ್ಲಿ ಯೋಜನೆ ಸಾಗಿದರೆ ಇನ್ನೂ 150 ವರ್ಷಗಳಾದರೂ ಯುಕೆಪಿ ಮುಕ್ತಾಯ ಆಗುವುದಿಲ್ಲ. ಹೀಗಾಗಿ ನಮ್ಮ ಪರಿಸ್ಥಿತಿ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯಭಾರ ಇಲ್ಲ ಎನ್ನುವಂತಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ಪಿ.ಎಚ್.ಪೂಜಾರ ಆಕ್ರೋಶ ಹೊರಹಾಕಿದ್ದಾರೆ. ಪರಿಷತ್‌ನಲ್ಲಿ ಪಿ.ಎಚ್.ಪೂಜಾರ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಉತ್ತರಕ್ಕೆ ಪ್ರತಿಯಾಗಿ ಪೂಜಾರ ಅವರು ಈ ರೀತಿ ತಮ್ಮ ಬೇಸರ ಹೊರಹಾಕಿದ್ದರು.
ಹತ್ತಾರು ಸಮಸ್ಯೆಗಳಿಂದ ನರಳುತ್ತಿರುವ ಉ.ಕ: 2014ರಲ್ಲೇ ಲಿಂ. ತೋಂಟದ ಸಿದ್ದಲಿಂಗ ಶ್ರೀಗಳು ಬರೆದ ಪತ್ರ ವೈರಲ್!
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ಕೊಡಲು ಹಿಂದಿನ ಬಿಜೆಪಿ ಸರ್ಕಾರ ಕೊನೆಯ ಬಜೆಟ್‌ನಲ್ಲಿ 5 ಸಾವಿರ ಕೋಟಿ ಅನುದಾನ ಇಟ್ಟಿತ್ತು. ನೂತನ ಸರ್ಕಾರ ತನ್ನ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಈ ಬಗ್ಗೆ ಸರ್ಕಾರದ ತೀರ್ಮಾನದ ಬಗ್ಗೆ ಪೂಜಾರ ಗಮನ ಸೆಳೆದಿದ್ದರು.
ಇದಕ್ಕೆ ಸಚಿವ ಡಿಕೆಶಿ ಅವರು ನೀಡಿದ ಉತ್ತರದಲ್ಲಿ 2022-23ನೇ ಸಾಲಿನ ಬಜೆಟ್ ಬಗ್ಗೆ ಪ್ರಸ್ತಾಪಿಸಿದ್ದು, .5 ಸಾವಿರ ಕೋಟಿಗಳಲ್ಲಿ ಸರ್ಕಾರ ಕೊಟ್ಟಿದ್ದು .2 ಸಾವಿರ ಕೋಟಿ. ವಾರ್ಷಿಕ ಅಂತ್ಯದಲ್ಲಿ .1577.56 ಕೋಟಿ ವೆಚ್ಚ ಮಾಡಿದೆ. ಹಾಗೆಯೇ 2023ರ ಜನವರಿಯಲ್ಲಿ ಮುಳುಗಡೆ ಆಗುವ ಖುಷ್ಕಿ ಜಮೀನಿಗೆ ಎಕರೆಗೆ 20 ಲಕ್ಷ ಹಾಗೂ ನೀರಾವರಿಗೆ .25 ಲಕ್ಷ ಪರಿಹಾರ ಧನ ನಿಗದಿ ಪಡಿಸಿದ್ದು, ನಮ್ಮ ಸರ್ಕಾರ ಸಹ ಆದÜ್ಯತೆ ಮೇರಿಗೆ ಈಗ ಸ್ವಾಧೀನದ ವಿವಿಧ ಹಂತಗಳಲ್ಲಿ ಇರುವ 30677 ಎಕರೆ ಜಮೀನು ಸ್ವಾಧೀನಕ್ಕೆ ಆಧ್ಯತೆ ಮೇರಿಗೆ ಪರಿಹಾರ ಕೊಡಲಾಗುವುದು ಎಂದು ಉತ್ತರಿಸಿದ್ದರು.