ಬೆಂಗಳೂರು (ಫೆ.13) : ರಾಜ್ಯ ಸಶಸ್ತ್ರ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಬೊಜ್ಜು ಕರಗಿಸಿಕೊಂಡು ಟ್ರಿಮ್ ಆಗಲು ಬರುವ ಏಪ್ರಿಲ್ 30ರವರೆಗೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಗಡುವು ನೀಡಿದ್ದಾರೆ. 

ರಾಜ್ಯದ KSRP, ಐಆರ್‌ಬಿ ಪಡೆಗಳು ಹಾಗೂ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ಆರೋಗ್ಉ ಕಾಪಾಡಿಕೊಳ್ಳಬೇಕು. 

ಈ ಸಲುವಾಗಿ ದಿನ 5 ಕಿ.ಮೀ ಓಟ ಅಥವಾ ನಡುಗೆ ಹಾಗೂ ದೈಹಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದರಿಂದ ಅಧಿಕ ತೂಕ ಇರುವ ಅಧಿಕಾರಿ ಮತ್ತು ಸಿಬ್ಬಂದಿ ಏ.30ರ ಒಳಗೆ  ತೂಕ ಇಳಿಸಿಕೊಳ್ಳಬೇಕೆಂದು ಎಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ. 

2 ವರ್ಷಕ್ಕೊಮ್ಮೆ ಪೊಲೀಸರ ವರ್ಗ ನಿಯಮ ಮತ್ತೆ ಜಾರಿ? ...

40 ವರ್ಷದೊಳಗಿನವರು 10 ಕೆಜಿ, 40 ರಿಂದ 50 ವರ್ಷದೊಳಗಿನವರು  5 ಕೆಜಿ  ಇಳಿಸಿಕೊಳ್ಳಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.