Asianet Suvarna News Asianet Suvarna News

ಗ್ಯಾಸ್ ಬೆಲೆ ಹೆಚ್ಚಳ ಹಿನ್ನೆಲೆ: ಅಡುಗೆ ಮನೆಯಲ್ಲಿ ಡಿಕೆಶಿ..!

*  ಸಿಲಿಂಡರ್ ಬೆಲೆ ಸದ್ಯದಲ್ಲೇ 1000 ರೂ.ಗೆ ತಲುಪಬಹುದು
*  ಸೌದೆ ಒಲೆಗೆ ಮೊರೆ ಹೋಗುತ್ತಿರುವ ಜನತೆ
*  ಸಿಲಿಂಡರ್ ಬೆಲೆ ಇಳಿಸಲು ಕೇಂದ್ರ ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಆಗ್ರಹ 
 

KPCC President DK Shivakumar Talks Over Increasing Gas Price grg
Author
Bengaluru, First Published Sep 11, 2021, 1:05 PM IST

ಬೆಂಗಳೂರು(ಸೆ.11):  ಅಡುಗೆ ಮನೆಯಲ್ಲಿ ಟೀ ಕುಡಿತಾ, ಗ್ಯಾಸ್ ಬೆಲೆ ಏರಿಕೆ ವಿರುದ್ಧ ಜನಜಾಗೃತಿ ಮೂಡಿಸುವಂತ ಕಾರ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. 

ತಮ್ಮ ಅಡುಗೆ ಮನೆಯಲ್ಲಿ ಕಾಣಿಸಿಕೊಂಡ ಡಿ.ಕೆ ಶಿವಕುಮಾರ್ ಅವರು, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಎಲ್‌ಪಿಜಿ ಗ್ಯಾಸ್ ಬೆಲೆ ಇಳಿಕೆಯಾಗಬೇಕಾ? ಬೇಡವಾ ಅಂತ ರಾಜ್ಯದ ಜನತೆ ಡಿಕೆಶಿ ಪ್ರಶ್ನೆಯನ್ನ ಕೇಳಿದ್ದಾರೆ. ಎಲ್‌ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯವೇ 900 ರಿಂದ 1000 ರೂಪಾಯಿಗೆ ತಲುಪಬಹುದು ಅಂತ ಹೇಳಿದ್ದಾರೆ. 

 

ಗ್ಯಾಸ್‌ ಬೆಲೆ ಏಳೇ ವರ್ಷದಲ್ಲಿ ಡಬಲ್‌: ಸಬ್ಸಿಡಿ ನೀಡದೆ ದರ ಹೆಚ್ಚಳ!

ಇಂತಹ ಪರಿಸ್ಥಿತಿಯಲ್ಲಿ ಬಡ ಕುಟುಂಬದವರ ಮುಂದೆ ಇರುವ ಆಯ್ಕೆ ಎರಡೇ. ಒಂದು ಮಕ್ಕಳ ಶಾಲೆಗೆ ಫೀಸ್ ಕಟ್ಟಬೇಕು ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ?. ಇಂತಹ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯವೇ?. ಇದನ್ನ ರಾಜ್ಯದ ಜನರೇ ತೀರ್ಮಾನಿಸಬೇಕು. ಗ್ಯಾಸ್ ಸಿಲಿಂಡರ್ ಹಣ ಭರಿಸಲಾಗದೇ ಸಾಕಷ್ಟು ಕುಟುಂಬದವರು ಸೌದೆ ಒಲೆಗೆ ಮೊರೆ ಹೋಗುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕನಿಷ್ಠ 150 ರೂಪಾಯಿಯನ್ನಾದರೂ ಸರ್ಕಾರ ಇಳಿಕೆ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. 
 

Follow Us:
Download App:
  • android
  • ios