ಬೆಂಗಳೂರು(ಸೆ.05): ನನಗೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಅಭಿಮಾನಿಗಳು, ಕಾರ್ಯಕರ್ತರು ಸದ್ಯದ ಮಟ್ಟಿಗೆ ಆಸ್ಪತ್ರೆಗಾಗಲಿ, ಮನೆಗಾಗಲಿ ಆಗಮಿಸುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ. 

ಜ್ವರ ಕಡಿಮೆ ಆಗುವವರೆಗೂ ಇನ್ನೂ ಕೆಲವು ದಿನಗಳ ಕಾಲ ನಾನು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದೇನೆ. ಸದ್ಯಕ್ಕೆ ನನ್ನು ನೋಡಲು ಯಾರೂ ಕೂಡ ಆಸ್ಪತ್ರೆಗೆ ಬರುವುದು ಬೇಡ, ಮನೆಗೂ ಬರುವುದು ಬೇಡ ಎಂದು ಶಿವಕುಮಾರ್‌ ಕೋರಿದ್ದಾರೆ. 

ಗುಣಮುಖರಾಗಿದ್ದ ಡಿಕೆಶಿಗೆ ಮತ್ತೆ ಜ್ವರ, ಆಸ್ಪತ್ರೆಗೆ ದಾಖಲು

ಆ.25ರಂದು ಜ್ವರದ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ದೃಢಪಟ್ಟ ಬಳಿಕ ಗುಣಮುಖರಾಗಿ ಮನೆಗೆ ಮರಳಿದ್ದ ಡಿ.ಕೆ.ಶಿವಕುಮಾರ್‌ ಅವರಿಗೆ ಬುಧವಾರ ಮತ್ತೆ ಜ್ವರ ಕಾಣಿಸಿಕೊಂಡಿತ್ತು.