ಬೆಂಗಳೂರು(ನ.05): ಸ್ವಾಯತ್ತ ಸಂಸ್ಥೆಯಾದ ಸಿಬಿಐ ರಾಜಕೀಯಕ್ಕೆ ತಲೆ ಬಾಗಬಾರದು. ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಎಷ್ಟು ಹಿಂಸೆ ಅನುಭವಿಸಿದ್ದರು. ಅವರಿಗೆ ಎಷ್ಟು ಕಿರುಕುಳ ಕೊಟ್ಟಿದ್ದರು ಎಂಬುದರ ಬಗ್ಗೆ ಗೊತ್ತಿದೆ ರಾಜಕಾರಣದಲ್ಲಿ ಚಕ್ರ ತಿರುಗುತ್ತಿರುತ್ತದೆ. ಸಿಬಿಐ ರಾಜಕೀಯ ವೆಪನ್ ಆಗಬಾರದು. ಕೆಲವು ಬಿಜೆಪಿ ನಾಯಕರು ಖುಷಿ ಪಡುತ್ತಿರಬಹುದು. ಆದರೆ, ದೇಶದ ಕಾನೂನಿ‌ನ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮವರು ಯಾರೂ ತಪ್ಪು ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

"

ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯೆ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ವಶಕ್ಕೆ ಪಡೆದಿದೆ. ಈ ವಿಚಾರದ ಬಗ್ಗೆ ಇಂದು(ಗುರುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅವರನ್ನ ಸಿಬಿಐ ವಶಕ್ಕೆ ಪಡೆದ ಬಗ್ಗೆ ನಾನು ಗಮನಿಸುತ್ತಿದ್ದೇನೆ. ಈ ಹಿಂದೆ ವಿನಯ್ ಕುಲಕರ್ಣಿ ಬಳಿ ಎಲ್ಲವನ್ನೂ ವಿಚಾರಿಸಿದ್ದೇನೆ. ಈಗಾಗಲೇ ಅವರ ಕೇಸ್ ತನಿಖೆ ಮಾಡಲಾಗಿದೆ. ಪೊಲೀಸರು ರಿಪೋರ್ಟ್ ಮಾಡಿದ್ದಾರೆ. ಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಪ್ರಭಾವಿ ಎಂದು ಮಟ್ಟ ಹಾಕೋಕೆ ಹೊರಟಿದ್ದಾರೆ. ಇದೆಲ್ಲ ಸಾಧ್ಯವಾಗೋದಿಲ್ಲ ಎಂದು ಬಿಜೆಪಿಗರಿಗೆ ಟಾಂಗ್‌ ಕೊಟ್ಟಿದ್ದಾರೆ. 

ಕಾಂಗ್ರೆಸ್ ಮಾಜಿ ಸಚಿವ ಬಿಜೆಪಿ ಸೇರ್ತಾರಾ?

ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರ ಜೊತೆಗಿದ್ದವರನ್ನ ವಿಚಾರಣೆ ನಡೆಸಿದ್ದಾರೆ.  ನನ್ನ ಮೇಲೆ ಯಡಿಯೂಪ್ಪ ಕೇಸ್ ಹಾಕಿದ್ದಾರೆ. ಸಿಬಿಐನವರು ಕಾನೂನು ಬದ್ಧವಾಗಿಯೇ ಹೋಗುತ್ತಿದ್ದಾರೆ. ಕಾನೂನು ಬಿಟ್ಟು ಅವರು ಏನನ್ನೂ‌ ಮಾಡಲ್ಲ. ನಮ್ಮ ಲೀಡರ್ಸ್‌ಗಳನ್ನ ಮುಗಿಸೋಕೆ ಇದನ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. 

ಡಿ.ಜೆ ಹಳ್ಳಿ ಗಲಭೆ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಬೆಂಗಳೂರು ಸಿಟಿ ಹ್ಯಾಂಡಲ್ ಮಾಡೋಕೆ ಪೊಲೀಸರಗೆ ಆಗುತ್ತಿಲ್ಲ. ಅದಕ್ಕೆ ನಮ್ಮವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಪ್ರೆಜರ್ ಮಾಡೋಕೆ ಬಿಜೆಪಿ ಮಾಡ್ತಿರೋದು, ಇದು ಉದಾಹರಣೆ ಅಷ್ಟೇ ಎಂದಿದ್ದಾರೆ. 

ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನದ ಪ್ರಕರಣ ಕೂಡಾ ಗಮನಿಸುತ್ತಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ಏನಾಗುತ್ತಿದೆ ಅಂತ ನೋಡುತ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.