Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ಕೇವಲ ಬುದ್ಧಿವಂತಿಕೆ ಪ್ರದರ್ಶನ : ಕೋಡಿಹಳ್ಳಿ ಕಿಡಿ

ಟಾಪ್‌ ಕೋಟ್‌ ರೈತರ ಬಗ್ಗೆ ಇಚ್ಛಾಶಕ್ತಿ ಇದ್ದರೆ, ಗೌರವ ಇದ್ದರೆ 1961ರ ಭೂ ಸುಧಾರಣಾ ಕಾಯ್ದೆ ಉಳಿಸಬೇಕು. ನೂರು ವರ್ಷಗಳ ನಂತರ ಬರುವ ನಮ್ಮ ಪೀಳಿಗೆಗೆ ಆರೋಗ್ಯಕರ ಕೃಷಿ ಭೂಮಿ ಬಿಟ್ಟು ಹೋಗಬೇಕಿದೆ. ಭದ್ರವಾದ ನೀತಿ ನಮ್ಮ ಹಿರಿಯರು ರೂಪಿಸಿದ್ದರು. ರೈತರ ಬಗ್ಗೆ ಮೊಸಳೆ ಕಣ್ಣೀರು ಬೇಡ, ಬದಲಿಗೆ ಅನುಕೂಲ ಮಾಡಿಕೊಡಬೇಕು

Kodihalli chandrashekhar slams agaist cm siddaramaiah at davanagere rav
Author
First Published Aug 31, 2024, 3:33 PM IST | Last Updated Aug 31, 2024, 3:33 PM IST

ದಾವಣಗೆರೆ (ಆ.31) :  ಮುಖ್ಯಮಂತ್ರಿ ಸಿದ್ದರಾಮಯ್ಯ 1961ರ ಭೂಸುಧಾರಣಾ ಕಾಯ್ದೆ ಮುಂದುವರಿಸಬೇಕು ಹಾಗೂ ರೈತರಿಗೆ ಕೃಷಿ ಭೂಮಿ ಉಳಿಸಬೇಕು. ಆದರೆ, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಕೃಷಿ ತಿದ್ದುಪಡಿ ಕಾಯ್ದೆಗಳ ಕಿತ್ತು ಬಿಸಾಕುವುದಾಗಿ ಹೇಳಿದ್ದ ಅವರು, ಈಗ ಈ ಕೇವಲ ಬುದ್ಧಿವಂತಿಕೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಇಂದು ವಿಧಾನಸೌಧ ಕಳ್ಳರ ಸಂತೆಯಂತಾಗಿದೆ. ಜನ ಎಚ್ಚೆತ್ತುಕೊಳ್ಳಬೇಕು. ಎರಡೂ ಪಕ್ಷದವರನ್ನು ಹೊರಹಾಕಬೇಕು. ಇಲ್ಲವಾದರೆ ಕರ್ನಾಟಕವನ್ನೇ ಲೂಟಿ ಮಾಡುತ್ತಾರೆ ಎಂದು ಹರಿಹಾಯ್ದರು.

ಮೋದಿ ಪ್ರಧಾನಿಯಾದ ನಂತರ ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಂತಿದೆ: ಹೆಚ್‌ಡಿ ದೇವೇಗೌಡ

ಕೇಂದ್ರ ಸರ್ಕಾರ ತಿದ್ದುಪಡಿಸಿಗೊಳಿಸಿ ಜಾರಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಚಳವಳಿ ನಡೆಸಿದ ಪರಿಣಾಮ ಕೇಂದ್ರ ಕಾಯ್ದೆ ಹಿಂಪಡೆದಿತ್ತು. ಆದರೆ, ಅಂದಿನ ಬಿಜೆಪಿ ಸರ್ಕಾರ 2020ರಲ್ಲಿ ಕಾಯ್ದೆ ಜಾರಿ ಮಾಡಿತ್ತು. ಅಂದು ವಿರೋಧಿಸಿದ್ದ ಸಿದ್ದರಾಮಯ್ಯ ನಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಕಾಯ್ದೆ ಕಿತ್ತು ಬಿಸಾಕುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಕಾಯ್ದೆ ತೆಗೆದಿಲ್ಲ. ಈ ಕಾಯ್ದೆ ತೆಗೆಯಲು ಪರಿಷತ್ತಿನಲ್ಲಿ ನಮಗೆ ಬೆಂಬಲ ಇಲ್ಲ ಎಂಬ ಬುದ್ಧಿವಂತಿಕೆಯ ಪ್ರದರ್ಶನ ಮಾಡುತ್ತಿದ್ದಾರೆ. ಇದು ಸಲ್ಲದು. ಇಂದು ರಾಜ್ಯದ ಪರಿಸ್ಥಿತಿ ವಿಷಮ ಸ್ಥಿತಿಯಲ್ಲಿದೆ. ರೈತರು ಎಚ್ಚೆತ್ತುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಳಕಳಿ ಇದ್ದರೆ ರೈತರಿಗೆ ಅನುಕೂಲಮಾಡಬೇಕು ಎಂದರು.

ಪತ್ರಕರ್ತರು ಸರ್ಕಾರದ ಕಣ್ತೆರೆಸಬೇಕು, ಬದಲಾವಣೆಗೆ ಕಾರಣರಾಗಬೇಕು': ಡಿಕೆ ಶಿವಕುಮಾರ್


ಟಾಪ್‌ ಕೋಟ್‌ ರೈತರ ಬಗ್ಗೆ ಇಚ್ಛಾಶಕ್ತಿ ಇದ್ದರೆ, ಗೌರವ ಇದ್ದರೆ 1961ರ ಭೂ ಸುಧಾರಣಾ ಕಾಯ್ದೆ ಉಳಿಸಬೇಕು. ನೂರು ವರ್ಷಗಳ ನಂತರ ಬರುವ ನಮ್ಮ ಪೀಳಿಗೆಗೆ ಆರೋಗ್ಯಕರ ಕೃಷಿ ಭೂಮಿ ಬಿಟ್ಟು ಹೋಗಬೇಕಿದೆ. ಭದ್ರವಾದ ನೀತಿ ನಮ್ಮ ಹಿರಿಯರು ರೂಪಿಸಿದ್ದರು. ರೈತರ ಬಗ್ಗೆ ಮೊಸಳೆ ಕಣ್ಣೀರು ಬೇಡ, ಬದಲಿಗೆ ಅನುಕೂಲ ಮಾಡಿಕೊಡಬೇಕು

- ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯಾಧ್ಯಕ್ಷ

Latest Videos
Follow Us:
Download App:
  • android
  • ios