Asianet Suvarna News Asianet Suvarna News

ಯುಎಇ ಕನ್ನಡಿಗರಿಗೆ ಮರಳಲು ಸಹಾಯಹಸ್ತ!

ಕೆಎನ್‌ಆರ್‌ಐ ಫೋರಂನಿಂದ ಸಹಾಯ| ದೇಶಕ್ಕೆ ವಾಪಸ್‌ ಆಗಲು ಬಯಸುವವರಿಗೆ ನೋಂದಣಿಗೆ ಸೂಚನೆ

KNRI Forum sets up helpline to assist Kannadigas during lockdown
Author
Bangalore, First Published May 2, 2020, 12:48 PM IST
  • Facebook
  • Twitter
  • Whatsapp

ಬೆಂಗಳೂರು(ಮೇ.02): ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ಸ್ವದೇಶಕ್ಕೆ ಮರಳಲು ಬಯಸುವವರಿಗೆ ಕೆಎನ್‌ಆರ್‌ಐ ಫೋರಂ ಸಹಾಯಹಸ್ತ ಚಾಚಿದೆ.

ತವರಿಗೆ ಮರಳಲು ಬಯಸುವವರು ತಮ್ಮ ಹೆಸರನ್ನು ಕೆಎನ್‌ಆರ್‌ಐ ಫೋರಂ ನ ವೆಬ್‌ಸೈಟ್‌ (ಘ್ಕಿWWW.ಓN್ಕಐಖಿಅಉ.ಇOಋಘಿಖ) ನಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಈಗ ರಿಜಿಸ್ಟರ್‌ ಮಾಡಿದರೆ ಶೀಘ್ರದಲ್ಲೇ ಕೇಂದ್ರ, ಕರ್ನಾಟಕ ಸರ್ಕಾರದ ನಿಯಮದಂತೆ ಶಿಫ್ಟ್‌ ಮಾಡಲಾಗುವುದು ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿಹಾಗೂ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಅಂಬಲತೆರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಇನ್ನಿತರೆ ಆರೋಗ್ಯ ಸಮಸ್ಯೆಯುಳ್ಳವರು, ಸಂದರ್ಶನ ವೀಸಾದಲ್ಲಿ ಬಂದು ಸಮಯಕ್ಕೆ ಸರಿಯಾಗಿ ಹಿಂದಿರುಗಲು ಸಾಧ್ಯವಾಗದೆ ಇದ್ದವರು ಹಾಗೂ ವಯಸ್ಸಾದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಕೆಎನ್‌ಆರ್‌ಐ ವೆಬ್‌ಸೈಟ್‌ನಲ್ಲಿ ಹೆಸರು ನೊಂದಾಯಿಸಿದ ಅನಿವಾಸಿ ಕನ್ನಡಿಗರು ಕಡ್ಡಾಯವಾಗಿ ಭಾರತೀಯ ರಾಯಭಾರಿ ಕಚೇರಿ ವೆಬ್‌ಸೈಟ್‌ (ಘ್ಕಿಡಿಡಿಡಿ.್ಚಜಜಿd್ಠಚಿaಜಿ.ಜಟv.ಜ್ಞಿಘಿಖ) ನಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ನಮ್ಮ ಕೆಎನ್‌ಆರ್‌ಐ ಫೋರಂ ಕಡೆಯಿಂದ ಸ್ವದೇಶಕ್ಕೆ ಮರಳುವ ಕನ್ನಡಿಗರ ಮಾಹಿತಿಯನ್ನು ಮಾತ್ರ ನಾವು ಪಡೆಯುತ್ತೇವೆ. ಆದರೆ, ರಾಯಭಾರಿ ಕಚೇರಿ ಮೂಲಕ ಸ್ವದೇಶಕ್ಕೆ ಹೋಗ ಬಯಸುವ ಇಡೀ ಅನಿವಾಸಿ ಭಾರತೀಯರ ಮಾಹಿತಿಯನ್ನು ರಾಯಭಾರಿ ಕಚೇರಿ ಪಡೆಯುತ್ತದೆ. ಕನ್ನಡಿಗರು ಸ್ವದೇಶಕ್ಕೆ ಹೋಗಲು ವಿಮಾನ, ಹಗಡಿನ ಟಿಕೆಟ್‌ ದರದ ಸಂಪೂರ್ಣ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ. ಈವರೆಗೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ಸರ್ಕಾರಗಳು ಪ್ರಕಟಿಸಿಲ್ಲ. ನಾವು ಪಡೆದುಕೊಳ್ಳುವ ಪ್ರಯಾಣಿಕರ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ, ಸಂಬಂಧಪಟ್ಟಇಲಾಖೆಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಯಾಣಿಕರು ಹೆಸರು ನೋಂದಣಿ ಮಾಡಿಕೊಳ್ಳುವಾಗ ಒಂದು ಕುಟುಂಬದಲ್ಲಿ 4 ಮಂದಿ ಇದ್ದಲ್ಲಿ ಅವರು ಪ್ರತ್ಯೇಕವಾಗಿ ಹೆಸರು ನೋಂದಾಯಿಸಬೇಕು. ಪ್ರಸ್ತುತ ಸ್ವದೇಶಕ್ಕೆ ಹಿಂದಿರುಗಿ ಹೋಗಲು ಇರುವ ಸರಿಯಾದ ಕಾರಣಗಳನ್ನು ನೋಂದಣಿ ವೇಳೆ ದಾಖಲಿಸಬೇಕು. ಸ್ವದೇಶಕ್ಕೆ ಹಿಂದಿರುಗುವ ಅನಿವಾಸಿ ಕನ್ನಡಿಗರು ಕೇಂದ್ರ-ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನೀಡುವ ಮಾರ್ಗದರ್ಶನವನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ದುಬೈನಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಕೆಎನ್‌ಆರ್‌ಐ ಕಾರ್ಯಕಾರಿಣಿ ಸಭೆಯಲ್ಲಿ, ಸ್ವದೇಶಕ್ಕೆ ಮರಳುವ ಕನ್ನಡಿಗರು ಮಾಡಬೇಕಾದ ಪೂರ್ವಸಿದ್ಧತೆ ಮತ್ತು ನೊಂದ ಕನ್ನಡಿಗರ ಪಯಣದ ಟಿಕೆಟ್‌ ವೆಚ್ಚಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಸಹಾಯ ಮಾಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಸಭೆಯಲ್ಲಿ ಉಪಾಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಇನ್ನಿತರೆ ಪದಾಧಿಕಾರಿಗಳಾದ ಮೂಹಮಾದಲಿ ಉಚ್ಚಿಲ, ಸಧನ್‌ ದಾಸ್‌, ದೀಪಕ್‌, ಎಂ ಇ ಮೂಳೂರ್‌, ಅಬ್ದುಲ್ ಲತೀಫ್‌ ಮುಲ್ಕಿ, ಡಾಕ್ಟರ್‌ ಕಾಪ್‌ ಮೊಹಮ್ಮದ್‌, ಹರೀಶ್‌ ಕೋಡಿ, ಮೋಹನ್‌, ಶಶಿಧರ್‌ ನಾಗರಾಜಪ್ಪ, ಅಲ್ತಾಫ್‌, ಪುಟ್ಟರಾಜ… ಗೌಡ ಹಾಗು ಅಬುಮುಹಮ್ಮೆದ್‌ ಪಾಲ್ಗೊಂಡಿದ್ದರು.

Follow Us:
Download App:
  • android
  • ios