ಬೆಂಗಳೂರು, (ಜ.30): ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಇದೇ ಫೆಬ್ರವರಿ 1ರಿಂದ ನೂತನ ದರ ಜಾರಿಗೆ ಬರಲಿದೆ.

"

ಹಾಲು ಮತ್ತು ಮೊಸರು ಪ್ರತಿ ಲೀಟರ್‌ಗೆ 2 ರೂ. ಏರಿಕೆ ಮಾಡಲಾಗಿದೆ ಎಂದು ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇಂದು (ಗುರುವಾರ) ಅಧಿಕೃತವಾಗಿ ತಿಳಿಸಿದ್ದಾರೆ. 

ನಂದಿನಿ ಹಾಲು ದರ 3 ರು. ಏರಿಕೆ : ರೈತರಿಗೆ ಬಂಪರ್

ಹಾಲು, ಮೊಸರು ಬೆಲೆ ಏರಿಕೆಯಿಂದಾಗಿ ರೈತರಿಗೆ ಬಂಪರ್ ಆದ್ರೆ, ಗ್ರಾಹಕರಿಗೆ ಬರೆ ಎಳೆದಂತಾಗಿದೆ.

ಇತ್ತೀಚೆಗೆ ಕೆಎಂಎಫ್ ಈ ಬಗ್ಗೆ ಸಭೆ ನಡೆಸಿದ್ದು, ನಂದಿನಿ ಹಾಲು-ಮೊಸರು ದರದಲ್ಲಿ 3 ರೂ. ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತವಾನೆ ಸಲ್ಲಿಸಿತ್ತು. ಆದ್ರೆ, ಸರ್ಕಾರ 2 ರೂ. ಏರಿಕೆಗೆ ಒಪ್ಪಿಗೆ ಸೂಚಿಸಿದೆ.

 ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಹಾಲಿನ ದರ ಹೆಚ್ಚಳ ಮಾಡಿರುವ ಕೆಎಂಎಫ್, ರೈತರಿಗೆ 1 ರೂಪಾಯಿ ಕೊಟ್ಟು ಇನ್ನುಳಿದ 1 ರೂ.ಅನ್ನು ತನ್ನ ಅಕೌಂಟಿಗೆ ಹಾಕಿಕೊಳ್ಳಲಿದೆ.