ಕೇರ್‌ ಆಫ್ ಫುಟ್‌ಪಾತ್ ಸಿನಿಮಾದ ಮೂಲಕ ಬಾಲನಟನಾಗಿ ಗುರುತಿಸಿಕೊಂಡಿದ್ದ ನಟ ಕಿಶನ್ ಇದೀಗ ಮಹತ್ವದ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳುತ್ತಿದ್ದಾರೆ. 

ಬೆಂಗಳೂರು (ಜ.17):  ಬಾಲ್ಯದಲ್ಲೇ ‘ಕೇರ್‌ ಆಫ್‌ ಫುಟ್‌ಪಾತ್‌’ ಚಲನಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನಟ ಕಿಶನ್‌ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಮಕ್ಕಳ ಹಕ್ಕುಗಳಿಗೆ ಸಂಬಂಧಪಟ್ಟಂತೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಅಧ್ಯಕ್ಷರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯವನ್ನು ನಟ ಕಿಶನ್‌ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಆಂಥೋನಿ ಸೆಬಾಸ್ಟಿಯನ್‌ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸುಮಾರು 200 ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ಹಾಡುವ ಮೂಲಕ ದೇಶದ ಗಮನವನ್ನು ಸೆಳೆದಿರುವ ಯತಾರ್ಥನನ್ನು ಆಯೋಗವು ಸನ್ಮಾನಿಸಿ ಗೌರವಿಸಿತು.

ಬಿರಿಯಾನಿ ವ್ಯಾಪಾರ ಮಾಡಿದ್ರೆ ಸಾಕಾ, ಅಡುಗೆ ಮಾಡೋದು ಬೇಡ್ವಾ?; ಕಿಶನ್ ವಿಡಿಯೋ ವೈರಲ್ ..

ದಕ್ಷಿಣ ಭಾರತದ ಯುನಿಸೆಫ್‌ ಪ್ರತಿನಿಧಿಯಾದ ಸೋನಿ ಕುಟ್ಟಿಜಾಜ್‌ರ್‍, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಎಂ.ಎಲ್‌. ಪರಶುರಾಮ, ಡಿ. ಶಂಕ್ರಪ್ಪ, ಎಚ್‌.ಸಿ. ರಾಘವೇಂದ್ರ, ಅಶೋಕ ಯರಗಟ್ಟಿ, ಭಾರತಿ ಹಾಗೂ ಆಯೋಗದ ಕಾರ್ಯದರ್ಶಿ ಇಂದಿರಾ, ಸಹಾಯಕ ನಿರ್ದೇಶಕಿ ಕವಿತಾ ಇದ್ದರು.