Asianet Suvarna News Asianet Suvarna News

ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕಿ ಹಿಂದೆ ಬಿದ್ದ ಕೇರಳ ಪೊಲೀಸ್!

ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ  ರೂವಾರಿ ಶ್ರೀಕಿಗಾಗಿ  ಕೇರಳ ಪೊಲೀಸರು ಕರ್ನಾಟಕ ಪೊಲೀಸರ‌ ಕದ ತಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾರೆ.

Kerala cops searching International Hacker Sriki gow
Author
Bengaluru, First Published May 25, 2022, 3:49 PM IST

ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಮೇ.25) :  ನಾಪ್ತೆಯಾಗಿರುವ  ಕುಖ್ಯಾತ ಇಂಟರ್ ನ್ಯಾಷನಲ್ ಹ್ಯಾಕರ್ (hacker) ಶ್ರೀ ಕೃಷ್ಣ ಭಟ್ ಅಲಿಯಾಸ್ ಶ್ರೀಕಿ (Sriki) ಹಿಂದೆ ಕೇರಳ‌  (Kerala) ಪೊಲೀಸರು (Police) ಬಿದ್ದಿದ್ದಾರೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ (Bitcoin scam) ರೂವಾರಿ ಶ್ರೀಕಿಗಾಗಿ (Hacker Shreeki) ಕೇರಳ ಪೊಲೀಸರು ಕರ್ನಾಟಕ ಪೊಲೀಸರ‌ ಕದ ತಟ್ಟಿದ್ದಾರೆ. ನಿನ್ನೆಯಷ್ಟೆ ರಾಜಧಾನಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದ ಕೇರಳ ಪೊಲೀಸ್ (Kerala Police) ತಂಡ ಶ್ರೀಕಿ ಮೇಲಿರುವ ಕೇಸ್ ನ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ.  ಓರ್ವ ಡಿವೈಎಸ್ಪಿ ಹಾಗೂ ನಾಲ್ವರು ಇನ್ಸ್ಪೆಕ್ಟರ್ ನ ಟೀಮ್ ಬೆಂಗಳೂರು ಸಿಸಿಬಿ (Bengaluru CCB) ಕಛೇರಿಗೆ  ಭೇಟಿ ನೀಡಿ ಕೇಸ್ ನ ಮಾಹಿತಿ ಪಡೆದಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಹ್ಯಾಕಿಂಗ್ ನಂತಹ ಸೈಬರ್ ಕ್ರೈಂ (Cyber crime) ಪ್ರಕರಣಗಳು ಹೆಚ್ಚಾಗಿದೆ. ಬ್ಯಾಂಕ್ ಖಾತೆಗಳು , ವೆಬ್ ಸೈಟ್ ಗಳು ಹಾಗೂ ಇ ಮೇಲ್ ಖಾತೆಗಳು ಹ್ಯಾಕ್ ಆಗುತ್ತಿವೆ. ಇದ್ರಿಂದಾಗಿ ಕೇರಳದಲ್ಲಿ ಸಾಕಷ್ಡು ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಶ್ರೀಕಿಯನ್ನ ಅನುಮಾನಿಸುತ್ತಿರುವ ಕೇರಳ ಪೊಲೀಸರು ಶ್ರೀಕಿ ಬಗ್ಗೆ ಕಂಪ್ಲೀಟ್ ಮಾಹಿತಿ ಪಡೆದಿದ್ದಾರೆ. 

Yediyurappa ಒತ್ತಡಕ್ಕೆ ಮಣಿಯದ ಹೈಕಮಾಂಡ್, ಪುತ್ರನಿಗೆ ಟಿಕೆಟ್ ನೀಡದ್ದಕ್ಕೆ ಕಾರಣವೇನು?

ಪ್ರೈಮರಿ ಶಾಲೆಯಲ್ಲಿರುವಾಗಲೇ ಹ್ಯಾಕಿಂಗ್‌ನಲ್ಲಿ ಆಸಕ್ತಿ!
ಈ ಹ್ಯಾಕರ್ ಶ್ರೀಕಿ ಬಾಲ್ಯದಿಂದಲೇ ಟೆಕ್ಕಿ ಆಗಲು ಬಯಸಿದ್ದನಂತೆ. ಶಾಲೆಯ ಮಟ್ಟದಲ್ಲಿ ಬುದ್ಧಿವಂತ ಎಂದೇ ಕರೆಸಿಕೊಂಡಿದ್ದ. ಆದರೆ ಈತನ ಬುದ್ಧಿವಂತಿಕೆ ಖರ್ಚಾಗಿದ್ದೆಲ್ಲಾ ಕಾನೂನು ಬಾಹಿರ ಕೆಲಸಗಳಿಗೇನೆ. ಪ್ರೈಮರಿ ತರಗತಿಯಲ್ಲಿ ಇರುವಾಗಲೇ ಶ್ರೀಕಿ ಹ್ಯಾಕಿಂಗ್ ಬಗ್ಗೆ ಕುತೂಹಲ ಹೊಂದಿದ್ದ ಎನ್ನಲಾಗಿದೆ. ಶ್ರೀಕೃಷ್ಣ 10ನೇ ತರಗತಿಯಲ್ಲಿ ಇರುವಾಗಲೇ ಸಾವಿರಾರು ಬಿಟ್‌ಕಾಯಿನ್ (bitcoin) ಗಳನ್ನು ಹ್ಯಾಕ್ ಮಾಡಿದ್ದ. ಶ್ರೀಕೃಷ್ಣ ಶಾಲೆ ಯಲ್ಲಿ ವ್ಯಾಸಂಗ ಮಾಡುವಾಗಲೇ ಶೇನ್ ಎಂಬ ವಿದ್ಯಾರ್ಥಿ ಸಹ ಪರಿಚಯವಾಗಿದ್ದು ಇಬ್ಬರು ಜೊತೆಯಲ್ಲಿ ಕೋಡ್ ವರ್ಡ್ ಗಳನ್ನು ಕಲಿತಿದ್ದಾರೆ.

ಬೆಂಗಳೂರಿನ ಜೈನ್ ಕಾಲೇಜ್ ನಲ್ಲಿ PCMC ವ್ಯಾಸಂಗ ಮಾಡಿರುತ್ತಾನೆ. ಶ್ರೀಕೃಷ್ಣ 2nd PUC ವ್ಯಾಸಂಗ ಮಾಡುತ್ತಿರುವಾಗಲೇ ಕ್ರಿಪ್ಟೋ ಕರೆನ್ಸಿ (cryptocurrency) ಬಗ್ಗೆ ಕಲಿತಿದ್ದಾನೆ. ಶ್ರೀಕೃಷ್ಣ 17ನೇ ವರ್ಷಕ್ಕೆ ತನ್ನ ಫ್ರೆಂಡ್ ರಿತ್ವಿಕ್ ಜೊತೆ ಹಿಮಾಲಯಕ್ಕೆ ಸಹ ತೆರಳಿದ್ದಾನೆ. ಹಿಮಾಲಯದಲ್ಲಿರುವ ಬದ್ರಿನಾಥ್ ನಲ್ಲಿ ಸುಮಾರು ತಿಂಗಳುಗಳ ಕಾಲ ನೆಲೆಸಿದ್ದಾರೆ. ರಿತ್ವಿಕ್ ತಾಯಿಂದ ಸಿದ್ದಾಪುರ ಹಾಗೂ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಸಹ ದಾಖಲಾಗಿತ್ತು.

ಉದಯಪುರ ಮಾದರಿಯಲ್ಲೇ ಕರ್ನಾಟಕದಲ್ಲೂ Congress ಚಿಂತನ ಮಂಥನ ಸಭೆ

ದೇಶ ವಿದೇಶಗಳನ್ನ ಸುತ್ತಿದ್ದ ಶ್ರೀಕಿ 2015ರಲ್ಲಿ ಭಾರತಕ್ಕೆ ಮರಳಿರುತ್ತಾನೆ. 2017 ರಲ್ಲಿ ಯುಬಿಸಿಟಿಯ (UB City) ಫರ್ಜಿ ಕೆಫೆಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ 7 ನೇ ಆರೋಪಿಯಾಗಿದ್ದ. ನಂತರ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ  ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಆಗಿ ಸದ್ಯಕ್ಕೆ‌ ಪರಾರಿ ಆಗಿದ್ದಾನೆ.  ಬೇಲ್ ಮೇಲೆ ಹೊರಬಂದ ಶ್ರೀಕಿಗೆ 2 ವಾರಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಲು ಕೋರ್ಟ್ ಷರತ್ತು ವಿಧಿಸಿತ್ತು. ಜಾಮೀನು ಸಿಕ್ಕ ನಂತರ  ಇನ್ನೂ ವಿಚಾರಣೆಗೆ ಹಾಜರಾಗದೆ ಶ್ರೀಕಿ ನಾಪತ್ತೆಯಾಗಿದ್ದಾನೆ. ವಿದೇಶ ಮಟ್ಟದಲ್ಲಿ ಸುದ್ದಿಗೆ ಕಾರಣವಾಗಿದ್ದ ಬಿಟ್ ಕಾಯಿನ್ ಹಗರಣ (Bitcoin Scam) ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ ಸಮರಕ್ಕೆ ವೇದಿಕೆಯಾಗಿತ್ತು.

Follow Us:
Download App:
  • android
  • ios