Asianet Suvarna News Asianet Suvarna News

ಕೇರಳ ಚರ್ಚ್ ಸ್ಫೋಟ ಪ್ರಕರಣ; ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರ ಮೇಲೆ ಹದ್ದಿನಕಣ್ಣು!

ಕೇರಳದ ಚರ್ಚ್‌ನಲ್ಲಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆ ಕರ್ನಾಟಕದ ಗಡಿಭಾಗ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹೈಅಲರ್ಟ್ ಆಗಿದೆ. ಮಂಡ್ಯದ ವಿಶ್ವಪ್ರಸಿದ್ಧ ಕೆಆರ್‌ಎಸ್ ಡ್ಯಾಂ ವೀಕ್ಷಣೆಗೆ ಬರುವ ಪ್ರವಾಸಿಗರ ಮೆಲೆ ಕೈಗಾರಿಕಾ ಭದ್ರತಾ ಪಡೆಗಳಿಂದ ನಿಗಾ. ಬೃಂದಾವನಕ್ಕೆ ಬರುವ ಪ್ರವಾಸಿಗರನ್ನು ತಪಾಸಣೆ ನಡೆಸಿ ಒಳಬಿಡುತ್ತಿರುವ ಸಿಬ್ಬಂದಿ.

Keral church explosive case police papartment high alert at mandya KRS Dam rav
Author
First Published Oct 30, 2023, 10:29 AM IST

ಮಂಡ್ಯ (ಅ.30): ಕೇರಳದ ಚರ್ಚ್‌ನಲ್ಲಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆ ಕರ್ನಾಟಕದ ಗಡಿಭಾಗ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹೈಅಲರ್ಟ್ ಆಗಿದೆ. 

ಮಂಡ್ಯದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್ ಬೃಂದಾವನದಲ್ಲಿ ಹೈಅಲರ್ಟ್ ಆಗಿರುವ ಪೊಲೀಸ್ ಸಿಬ್ಬಂದಿ. ಕೆಆರ್‌ಎಸ್ ಡ್ಯಾಂ ವೀಕ್ಷಣೆಗೆ ಬರುವ ಪ್ರತಿಯೊಬ್ಬ ಪ್ರವಾಸಿಗರನ್ನು ತೀವ್ರ ತಪಾಸಣೆ ನಡೆಸುತ್ತಿರುವ ಭದ್ರತಾ ಪಡೆ ಸಿಬ್ಬಂದಿ. ಪಿಎಸ್‌ಐ ಶ್ಯಾಮಲಾ ನೇತೃತ್ವದಲ್ಲಿ ತಪಾಸಣೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಿಂದ ಪ್ರವಾಸಿಗರ ಚಲನವಲನದ ಮೇಲೆ ತೀವ್ರ ನಿಗಾ ಇಡಲಾಗಿದೆ. ಗೇಟ್ ಬಳಿಯೇ ತಪಾಸಣೆ ನಡೆಸಿ ಒಳಗೆ ಬಿಡುತ್ತಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ. ಮೆಟಲ್ ಡಿಟೆಕ್ಟರ್ ಬಳಸಿ ಪ್ರವಾಸಿಗರು ಬ್ಯಾಗ್, ಬಾಡಿ ತಪಾಸಣೆ ನಡೆಸಿ ಒಳಬಿಡುತ್ತಿರುವ ಸಿಬ್ಬಂದಿ. 

ಕೇರಳ ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆ, ಐವರ ಸ್ಥಿತಿ ಚಿಂತಾಜನಕ!

ಕೆಆರ್‌ಎಸ್ ಡ್ಯಾಂ ನೋಡಲೆಂದೇ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು. ರಾಜ್ಯ ಮಾತ್ರವಲ್ಲದೇ ಹೊರರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ.  ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಒಳಬಿಡುತ್ತಿರುವ ಸಿಬ್ಬಂದಿ.

Follow Us:
Download App:
  • android
  • ios