Asianet Suvarna News Asianet Suvarna News

ಕೆಂಪೇಗೌಡ ಅತ್ಯಲ್ಪ ವ್ಯಕ್ತಿ, ಜಾತಿ ಲಾಭಿಯಿಂದಲೇ ಪ್ರಸಿದ್ಧರಾಗಿದ್ದಾರೆ: ಟಿಪ್ಪು ಸುಲ್ತಾನ್ ಐತಿಹಾಸಿಕ ವೀರ ಯೋಧ!

ಐತಿಹಾಸಿಕ ಅತ್ಯಲ್ಪ ವ್ಯಕ್ತಿ ನಾಡಪ್ರಭು ಕೆಂಪೇಗೌಡ ಜಾತಿ ಲಾಬಿಯಿಂದ ಪ್ರಸಿದ್ಧರಾಗಿದ್ದಾರೆ. ಆದರೆ, ನೈಜ ವೀರಯೋಧ ಮುಸ್ಲಿಂ ಸಮುದಾಯ ಎಂಬ ಕಾರಣಕ್ಕೆ ಕಡೆಗಣನೆ ಆಗುತ್ತಿದ್ದಾರೆ.

Kempegowda was famous from Caste advantage but Tippu sultan was real Soldier said Ahimsa Chetan sat
Author
First Published Dec 15, 2023, 6:33 PM IST

ಬೆಂಗಳೂರು (ಡಿ.15): ಕರ್ನಾಟಕದ ಇತಿಹಾಸದಲ್ಲಿ ಅತ್ಯಲ್ಪ ವ್ಯಕ್ತಿಯಾಗಿರುವ ಕೆಂಪೇಗೌಡ ಅವರನ್ನು ಊಳಿಗಮಾನ್ಯ ಜಾತಿ ಲಾಭಿಗಳ ಪ್ರಭಾವದಿಂದಾಗಿ ಸ್ಟಾರ್ ಐಕಾನ್ (ಪ್ರಸಿದ್ಧ ವ್ಯಕ್ತಿ) ಎಂಬಂತೆ ಬಿಂಬಿಸಲಾಗಿದೆ. ಆದರೆ, ಒಬ್ಬ ನೈಜ ಐತಿಹಾಸಿಕ ವೀರ ಯೋಧ ಮುಸ್ಲಿಮರಾಗಿ ಹುಟ್ಟಿದ್ದರಿಂದ ಅವರ ಹೆಸರನ್ನು ಮಾನ್ಯತೆ ಮಾಡುತ್ತಿಲ್ಲವೆಂದು ನಟ ಅಹಿಂಸಾ ಚೇತನ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು,

ಇಬ್ಬರು ಯೋಧರ ಕಥೆ:
1. ಕೆಂಪೇಗೌಡ : ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿಯಾಗಿದ್ದಾರೆ.
2. ಟಿಪ್ಪು ಸುಲ್ತಾನ್:  ಒಬ್ಬ  ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ, ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ.
ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂಬ ವಾದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲಿಯೇ, ಒಕ್ಕಲಿಗೆ ಸಮುದಾಯದ ಐಕಾನ್ ನಾಡಪ್ರಭು ಕೆಂಪೇಗೌಡ ಅಸ್ತಿತ್ವಕ್ಕೆ ಕೊಳ್ಳಿ ಇಡುವ ಕೆಲಸವನ್ನು ನಟ ಅಹಿಂಸಾ ಚೇತನ್ ಮಾಡಿದ್ದಾರೆ ಎಂಬಂತೆ ಕಂಡುಬರುತ್ತಿದೆ. 

ಕರ್ನಾಟಕದ ಕೆಎಸ್‌ಆರ್‌ಟಿಸಿಗೆ ಸಿಕ್ತು ಭರ್ಜರಿ ಜಯ, ಕೇರಳದ ತಕರಾರು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಟಾಂಗ್ ಕೊಟ್ಟ ಚೇತನ್: ಮುಂದುವರೆದು '1992 ರಲ್ಲಿ ಬಾಬರಿ ಮಸೀದಿ ವಿವಾದದ ಸಂದರ್ಭದಲ್ಲಿ, ನಮ್ಮ ಸಮಾನತೆಯ ಐಕಾನ್ ಕಾನ್ಶಿರಾಮ್ ಆ ಸ್ಥಳದಲ್ಲಿ ಭವ್ಯವಾದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಹೇಳಿದರು. ಯಾವುದೇ ದೇವಸ್ಥಾನ/ಮಸೀದಿ/ವಿಮಾನ ನಿಲ್ದಾಣಗಳಿಗಿಂತ ಶೌಚಾಲಯಗಳು ಅತ್ಯಗತ್ಯ. ಯತ್ನಾಳ್ ‘ಶೌಚಾಲಯಕ್ಕೆ ಟಿಪ್ಪು ಹೆಸರಿಡಿ’ ಎಂದು ಅವಹೇಳನಕಾರಿಯಾಗಿ ಹೇಳಿದ್ದಾರೆ. ಶೌಚಾಲಯಗಳನ್ನು ಯಾವಾಗಲೂ ಸ್ವಚ್ಛಗೊಳಿಸಬಹುದು; ಯತ್ನಾಳ್ ಮನಸ್ಸಿನಲ್ಲಿರುವ ಕೋಮು ಕೊಳಕುತನವನ್ನು ಎಂದಿಗೂ ಸ್ವಚ್ಛಗೊಳಿಸಲಾಗುವುದಿಲ್ಲ. 

ಕರ್ನಾಟಕದ ಶಾಸಕರಿಗೆ ಕನ್ನಡವೇ ಬರೊಲ್ಲ, ಮರಾಠಿಯಲ್ಲಿ ಮಾತನಾಡಿದ ವಿಠಲ್ ಹಲಗೇಕರ್

ಗಾಂಧಿ ಸ್ತೀವಾದಿಯಲ್ಲ:  1939 ರಲ್ಲಿ, ಗಾಂಧಿ ಬರೆಯುತ್ತಾರೆ: 'ಆಧುನಿಕ ಹುಡುಗಿ ಅರ್ಧ ಡಜನ್ ರೋಮಿಯೋಗಳಿಗೆ ಜೂಲಿಯೆಟ್ ಆಗಲು ಇಷ್ಟಪಡುತ್ತಾಳೆ ... ಆಧುನಿಕ ಹುಡುಗಿ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲ ಆದರೆ ಗಮನ ಸೆಳೆಯಲು ಬಟ್ಟೆಗಳನ್ನು ಧರಿಸುತ್ತಾಳೆ' ಎಂದು ಬರೆಯುತ್ತಾರೆ. 1951 ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಆಸ್ತಿಯ ವಿಷಯದಲ್ಲಿ ಲಿಂಗ ಸಮಾನತೆಯನ್ನು ಒದಗಿಸಲು ಹಿಂದೂ ಕೋಡ್ ಬಿಲ್ ಅನ್ನು ರಚಿಸಿದರು. ಮತ್ತು ಸಂಸತ್ತಿನಲ್ಲಿ ಮಸೂದೆಯನ್ನು ಸೋಲಿಸಿದ ನಂತರ ರಾಜೀನಾಮೆ ನೀಡಿದರು. ಬಾಬಾಸಾಹೇಬರು (ಇಂಟರ್ಸೆಕ್ಷನಲ್) ಸ್ತ್ರೀವಾದಿ ಆಗಿದ್ದರು. ಗಾಂಧಿ ಸ್ತ್ರೀವಾದಿಯಾಗಿರಲಿಲ್ಲ' ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios