ಬೆಂಗಳೂರು, (ಮೇ.03) : ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್‌ಡೌನ್ ನಾಳೆಯಿಂದ (ಮೇ.4) ಆರಂಭವಾಗಲಿದ್ದು, ಮೇ 17 ರ ವರೆಗೆ ಜಾರಿಯಲ್ಲಿರುತ್ತದೆ.

ಲಾಕ್ ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದ್ದು, ರೆಡ್ ಝೋನ್ ಗಳಲ್ಲಿ ಕಠಿಣ ನಿರ್ಬಂಧ ಮುಂದುವರೆಯಲಿದೆ. ಕೇಂದ್ರದ ನಿಯಮಗಳ ಅನುಸಾರ ಆರೆಂಜ್ ಮತ್ತು ಗ್ರೀನ್ ವಲಯದಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ.

606ಕ್ಕೆ ಏರಿದ ಕರ್ನಾಟಕದ ಸೋಂಕಿತರ ಸಂಖ್ಯೆ, ಯಾವ ಜಿಲ್ಲೆಯಿಂದ ಎಷ್ಟು?

ಇನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನಾಗಿ ಈ ಹಿಂದೆ ರೂಪಿಸಿದ್ದ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಕೊಂಚ ಬದಲಾವಣೆ ಮಾಡಿದೆ. ಇಂದು (ಭಾನುವಾರ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಕೆಂಪು, ಕಿತ್ತಳೆ ಮತ್ತು ಆರೆಂಜ್ ಝೋನ್ ನ ಪಟ್ಟಿ ಈ ಕೆಳಗಿನಂತಿದೆ.

* ಕೆಂಪು ವಲಯದ ಜಿಲ್ಲೆಗಳು: 1. ಬೆಂಗಳೂರು ನಗರ, 2. ಮೈಸೂರು, 3. ಬೆಂಗಳೂರು ಗ್ರಾಮಾಂತರ

* ಕಿತ್ತಳೆ ವಲಯದ ಜಿಲ್ಲೆಗಳು: ಬೆಳಗಾವಿ, ವಿಜಯಪುರ, ಕಲಬುರಗಿ,ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು

* ಹಸಿರು ವಲಯದ ಜಿಲ್ಲೆಗಳ ಪಟ್ಟಿ: ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು,ಚಿತ್ರದುರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ, ಯಾದಗಿರಿ