Asianet Suvarna News Asianet Suvarna News

ರಾಜ್ಯಕ್ಕೆ ಮೂರು ಹೊಸ ರೈಲು ಮಾರ್ಗ: ಯಾವೆಲ್ಲಾ ಮಾರ್ಗದಲ್ಲಿ?

ರಾಜ್ಯಕ್ಕೆ ಮೂರು ಹೊಸ ರೈಲು ಮಾರ್ಗ: ಯಾವೆಲ್ಲಾ ಮಾರ್ಗದಲ್ಲಿ? ಬೆಳಗಾವಿ- ಧಾರವಾಡ, ಮೈಸೂರು- ಕುಶಾಲನಗರ, ಶಿಕಾರಿಪುರ- ರಾಣೆಬೆನ್ನೂರು ಮಾರ್ಗ ಮಂಜೂರು

Karnataka To Get Three More Rails Says Minister Suresh Angadi
Author
Bangalore, First Published Feb 9, 2020, 7:35 AM IST

ಬೆಂಗಳೂರು[ಫೆ.09]: ಇತ್ತೀಚೆಗೆ ಮಂಡನೆಯಾದ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯಕ್ಕೆ ಬೆಳಗಾವಿ- ಧಾರವಾಡ, ಮೈಸೂರು- ಕುಶಾಲನಗರ, ಶಿಕಾರಿಪುರ- ರಾಣೆಬೆನ್ನೂರಿಗೆ ಹೊಸ ರೈಲ್ವೆ ಮಾರ್ಗ ಮಂಜೂರಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಉತ್ತರ ಪ್ರದೇಶದ 100 ಕಿ. ಮೀ. ಉದ್ದದ ಚುನಾರ್- ಚೋಪನ್ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಅಂಗಡಿ ಬೆಂಗಳೂರಿನ ಡಿಆರ್‌ಎಂ ಕಚೇರಿಯಿಂದಲೇ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲು ಮಾರ್ಗ ಉದ್ಘಾಟಿಸಿದರು. ಬಳಿಕ ಮಾತನಾಡಿ, ಹಳೆಯ ಯೋಜನೆಗಳ ಪೂರ್ಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕನ್ಯಾ ಕುಮಾರಿಯಿಂದ ಕಾಶ್ಮೀರ, ಕಚ್‌ನಿಂದ ಅರುಣಾಚಲ ಪ್ರದೇಶವರೆಗೆ ರೈಲು ಸಂಪರ್ಕ ಕಲ್ಪಿಸುವುದು ಉದ್ದೇಶ ಎಂದರು.

ರಾಜ್ಯಕ್ಕೆ ಹೊಸ 6 ರೈಲು, 3085 ಕೋಟಿ ರೂ. ಅನುದಾನ!

ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ ರದ್ದತಿ ಅಧಿಕೃತ

ಬೆಂಗಳೂರು: ರೈಲು ಬೋಗಿಗಳ ಉತ್ಪಾದನೆ ಹೆಚ್ಚಿದ್ದು, ಬೇಡಿಕೆ ಕಡಿಮೆ ಇರುವುದರಿಂದ ಕೋಲಾರ ದಲ್ಲಿ ರೈಲು ಬೋಗಿ ಕಾರ್ಖಾನೆ ಸ್ಥಾಪನೆ ಬದಲು ರೈಲ್ವೆ ಕಾರ‌್ಯಾಗಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಅಧಿಕೃತವಾಗಿ ತಿಳಿಸಿದ್ದಾ

ಬೆಂಗಳೂರು ವಿಭಾಗೀಯ ರೈಲ್ವೆ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈಲು ಬೋಗಿ ಉತ್ಪಾದನಾ ಕಾರ್ಖಾನೆ ಆರಂಭಿಸಲು ಯಾವುದೇ ಸಮಸ್ಯೆಯಿಲ್ಲ. ಆದರೆ, ದೇಶದಲ್ಲಿರುವ ರೈಲು ಬೋಗಿ ಉತ್ಪಾದನಾ ಕಾರ್ಖಾನೆಗಳಲ್ಲಿ ಪ್ರಸ್ತುತ ಬೇಡಿಕೆಗೂ ಅಧಿಕ ಬೋಗಿಗಳನ್ನು ಉತ್ಪಾದಿಸಲಾಗುತ್ತಿದೆ. ಹೀಗಿರುವಾಗ ಬೇಡಿಕೆ ಇಲ್ಲದೆ ಮತ್ತೊಂದು ರೈಲು ಬೋಗಿ ಉತ್ಪಾದನಾ ಕಾರ್ಖಾನೆ ಆರಂಭಿಸುವ ಅಗತ್ಯವಿಲ್ಲ. ಆದ ಕಾರಣ ಕೋಲಾರದಲ್ಲಿ ರೈಲು ಬೋಗಿ ಉತ್ಪಾದನಾ ಕಾರ್ಖಾನೆ ಬದಲು ರೈಲ್ವೆ ಕಾರ್ಯಾಗಾರ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ರೈಲ್ವೆ ಕಾರ್ಯಾಗಾರ ಆರಂಭಿಸುವುದರಿಂದ ಬೋಗಿಗಳ ದುರಸ್ತಿಗೆ ಅನುಕೂಲವಾಗುತ್ತದೆ. ಬೇರೆ ದೇಶಗಳಿಂದ ರೈಲು ಕೋಚ್‌ಗಳಿಗೆ ಬೇಡಿಕೆ ಬಂದರೆ ಬೋಗಿ ಉತ್ಪಾದನಾ ಕಾರ್ಖಾನೆ ಆರಂಭಿಸಲಾಗುವುದು ಎಂದು ಸುರೇಶ್ ಅಂಗಡಿ ಹೇಳಿದರು.

ಖರ್ಗೆಗೆ ಉತ್ತರ ಕೊಡಲ್ಲ: ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಒಂದು ಕೋಟಿ ರುಪಾಯಿ ಅನುದಾನ ನೀಡಿರುವ ಬಗ್ಗೆ ಮಾಜಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ‘ಈ ಹಣ ಸರ್ವೆಗೂ ಸಾಲುವುದಿಲ್ಲ’ ಎಂದು ಹೇಳಿದ್ದಕ್ಕೆ ಸಚಿವ ಸುರೇಶ್ ಅಂಗಡಿ ಪ್ರತಿಕ್ರಿಯಿಸಲು ನಿರಾಕರಿಸಿದರು.

ರೈಲು ಪ್ರಯಾಣಿಕರಿಗೆ ಕೇಂದ್ರದಿಂದ ಸಂತಸದ ಸುದ್ದಿ

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯರು. ರೈಲ್ವೆ ಮಂತ್ರಿ ಯಾಗಿದ್ದವರು. ಅವರ ಹೇಳಿಕೆಗೆ ಈಗ ಉತ್ತರ ಕೊಡಲು ಹೋಗಲ್ಲ. ಯೋಜನೆ ಮುಗಿದ ಬಳಿಕ ಮಾತನಾಡುತ್ತೇನೆ ಎಂದು ಸೂಚ್ಯವಾಗಿ ಹೇಳಿದರು

Follow Us:
Download App:
  • android
  • ios