ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದಿಂದಾಗಿ ಪ್ರಯಾಣಿಕರ ಒತ್ತಡ ಹೆಚ್ಚಿರುವುದರಿಂದ, ಸರ್ಕಾರ ೨೦೦೦ ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸುತ್ತಿದೆ. ಕೆಕೆಆರ್‌ಟಿಸಿಗೆ ೭೦೦, ಕೆಎಸ್‌ಆರ್‌ಟಿಸಿಗೆ ೫೦೦, ಬಿಎಂಟಿಸಿಗೆ ೪೦೦ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆಗೆ ೪೦೦ ಬಸ್‌ಗಳು ಹಂಚಿಕೆಯಾಗಲಿವೆ. ಇದರೊಂದಿಗೆ ಈ ಹಿಂದೆ ಘೋಷಿಸಿದ್ದ ೨೩೮೧ ಡೀಸೆಲ್ ಮತ್ತು ೭೧೬ ವಿದ್ಯುತ್ ಚಾಲಿತ ಬಸ್‌ಗಳೂ ಸೇರ್ಪಡೆಯಾಗಲಿವೆ.
ಬೆಂಗಳೂರು (ಏ.28): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ನಂತರವೇ ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ (ಮಹಿಳೆಯರು ರಾಜ್ಯ ಸರ್ಕಾರದ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ರಾಜ್ಯದಾದ್ಯಂತ ಉಚಿತ ಸಂಚಾರ) ಜಾರಿ ಬಳಿ ಸರ್ಕಾರಿ ಬಸ್‌ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಇನ್ನು ಸೀಟುಗಳು ಸಿಗದೇ ಜನರು ಪರದಾಡುತ್ತಿದ್ದು, ಅಲ್ಲಲ್ಲಿ ಗಲಾಟೆ ಹಾಗೂ ಹೊಡೆದಾಟ ಆಗುವ ವಿಡಿಯೋಗಳು ಕೂಡ ಸಾಮಾನ್ಯವಾಗಿವೆ. ಅಂದರೆ, ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳು ಸಾಲುತ್ತಿಲ್ಲ ಎಂದು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಜನರ ಸಂಕಷ್ಟವನ್ನು ಮನಗಂಡ ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಗುಡ್ ನ್ಯೂಸ್ ನೀಡಿದೆ. ಮಹಿಳೆಯರ ಶಕ್ತಿ ಯೋಜನೆಗೆ ಮತ್ತಷ್ಟು ಬಲವನ್ನು ತುಂಬುವುದಕ್ಕೆ 2 ಸಾವಿರ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಇದಕ್ಕಾಗಿ 2000 ಹೊಸ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಈ ಹೊಸ 2 ಸಾವಿರ ಬಸ್‌ಗಳನ್ನು ಹಂಚಿಕೆ ಮಾಡಲಾಗಿತ್ತದೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿಗೆ ಕೈ ಎತ್ತಿದ್ದ ಸಿದ್ದರಾಮಯ್ಯ, ಇದ್ಯಾವ ಸಂವಿಧಾನದಲ್ಲಿದೆ ಸಿಎಂ ಸಾಹೇಬ್ರೇ?
ಯಾವ ನಿಗಮಕ್ಕೆ ಎಷ್ಟೆಷ್ಟು ಬಸ್?
ಕಲ್ಯಾಣ ಕರ್ನಾಟಕ (ಕೆಕೆಎಸ್‌ಆರ್‌ಟಿಸಿ)-700
ದಕ್ಷಿಣ ಕರ್ನಾಟಕ (ಕೆಎಸ್‌ಆರ್‌ಟಿಸಿ) -500
ಬೆಂಗಳೂರು ನಗರ (ಬಿಎಂಟಿಸಿ) - 400
ವಾಯುವ್ಯ ಕರ್ನಾಟಕ (ಎನ್‌ಡಬ್ಲ್ಯೂಕೆಆರ್‌ಟಿಸಿ)- 400
ಒಟ್ಟು- 2000 ಖರೀದಿಸಲಿ ಸಾರಿಗೆ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಜನಿವಾರದ ಜೊತೆ ಕರಿಮಣಿ, ಕಾಲುಂಗುರಕ್ಕೂ ಕುತ್ತು: ಅಭ್ಯರ್ಥಿಗಳು ನಿರಾಳ
ಈ ಹಿಂದೆ 2,381 ಡೀಸೆಲ್ ಬಸ್‌ಗಳು ಹಾಗೂ 716 ವಿದ್ಯುತ್ ಚಾಲಿತ ಬಸ್‌ಗಳನ್ನು ಹೊಸದಾಗಿ ಸೇರ್ಪಡೆಗೆ ಘೋಷಣೆ ಮಾಡಲಾಗಿತ್ತು. ಈ ಪೈಕಿ 700 ಬಸ್ ಗಳನ್ನ ಕಲ್ಯಾಣ ಕರ್ನಾಟಕ್ಕೆ ಬಿಡಲು ಸಾರಿಗೆ ಇಲಾಖೆ ತಯಾರಿ ಮಾಡಿಕೊಂಡಿದೆ. 2,381 ಡಿಸೇಲ್ ಬಸ್‌ಗಳು ಮತ್ತು 700 ಎಲೆಕ್ಟ್ರಿಕ್ ಬಸ್‌ಗಳು ಕೂಡ ಇದಕ್ಕೆ ಬರಲಿವೆ. 700 ಎಲೆಕ್ಟ್ರಿಕ್ ಬಸ್ ಗಳು ಕೇಂದ್ರ ಸರ್ಕಾರದ ಜಿಸಿಸಿ ಮಾಡೆಲ್ ನಲ್ಲಿ ರಸ್ತೆಗಿಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇಲ್ಲಿ ಪ್ರತಿ 1 ಕಿಮೀಗೆ 65 ರುಪಾಯಿಯಂತೆ 12 ವರ್ಷಗಳ ಕಾಲ ಸಂಚಾರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ತಿಂಗಳು ರಾಜ್ಯಕ್ಕೆ 300 ಬಸ್‌ಗಳು ಬರಲಿವೆ. ನಂತರ ಹಂತ ಹಂತವಾಗಿ ಉಳಿದ ಬಸ್‌ಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ಯೋಜನೆ ರೂಪಿಸಿಕೊಂಡಿದೆ.
