Asianet Suvarna News Asianet Suvarna News

ರಾಜ್ಯದಲ್ಲಿ ಮೊದಲ ಬಾರಿ 10,000ಕ್ಕಿಂತ ಕಡಿಮೆ ಕೇಸ್‌!

* ರಾಜ್ಯದಲ್ಲಿ ಮೊದಲ ಬಾರಿ 10000ಕ್ಕಿಂತ ಕಡಿಮೆ ಕೇಸ್‌!

* 2ನೇ ಅಲೆ: 56 ದಿನದ ಬಳಿಕ ಅತ್ಯಂತ ಕಡಿಮೆ ಸೋಂಕು

* 200ಕ್ಕಿಂತ ಕೆಳಗಿಳಿದ ಸಾವು: 42 ದಿನಗಳ ಬಳಿಕ ಪ್ರಥಮ

karnataka reports 9808 new cases 179 deaths pod
Author
Bangalore, First Published Jun 9, 2021, 7:25 AM IST

ಬೆಂಗಳೂರು(ಜೂ.09): ರಾಜ್ಯದಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಬರೋಬ್ಬರಿ 56 ದಿನಗಳ ನಂತರ ನಿತ್ಯ ಸೋಂಕು 10 ಸಾವಿರ ಮಿತಿಯೊಳಗೆ ಬಂದಿದ್ದರೆ, 42 ದಿನಗಳ ನಂತರ ನಿತ್ಯ ಸಾವಿನ ಸಂಖ್ಯೆ 200ರ ಗಡಿಯೊಳಗಿದೆ.

ಮಂಗಳವಾರ 9,808 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. 179 ಮಂದಿ ಮೃತರಾಗಿದ್ದು 23,449 ಮಂದಿ ಕೋವಿಡ್‌ನಿಂದ ಗುಣ ಹೊಂದಿದ್ದಾರೆ.

ಏಪ್ರಿಲ್‌ 13ರ ಬಳಿಕ ಮೊದಲ ಬಾರಿಗೆ ಕೋವಿಡ್‌ನ ದೈನಂದಿನ ಪ್ರಕರಣಗಳ ಸಂಖ್ಯೆ 10 ಸಾವಿರದಿಂದ ಕೆಳಗಿಳಿದಿದೆ. ಏಪ್ರಿಲ್‌ 27ರಂದು 180 ಸಾವು ವರದಿಯಾದ ಬಳಿಕ ಮೊದಲ ಬಾರಿಗೆ ಸಾವಿನ ಪ್ರಮಾಣ 200ಕ್ಕಿಂತ ಕಡಿಮೆ ದಾಖಲಾಗಿದೆ. 1.30 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ. 7.53ರ ಪಾಸಿಟಿವಿಟಿ ದರ ದಾಖಲಾಗಿದೆ. ಕಳೆದ ನಾಲ್ಕು ದಿನದಿಂದ ಪಾಸಿಟಿವಿಟಿ ದರ ಶೇ.10ರೊಳಗೆ ಇದೆ.

ಇದೇ ವೇಳೆ ಸಾವಿನ ಪ್ರಮಾಣದಲ್ಲಿ ಭಾರಿ ಕುಸಿತ ದಾಖಲಾಗಿದೆ. ಮರಣ ದರ ಶೇ.1.82 ವರದಿಯಾಗಿದೆ. ಬೆಂಗಳೂರು ನಗರದಲ್ಲಿ 44 ಮಂದಿ ಮೃತರಾಗಿದ್ದಾರೆ. ರಾಜ್ಯದಲ್ಲಿ ಸದ್ಯ 2.25 ಲಕ್ಷ ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 27.17 ಲಕ್ಷ ಮಂದಿಗೆ ಸೋಂಕು ಬಂದಿದ್ದು 24.60 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 32,099 ಮಂದಿ ಮರಣವನ್ನಪ್ಪಿದ್ದಾರೆ.

ಮೈಸೂರು 15, ಹಾವೇರಿ 11 ಮತ್ತು ಶಿವಮೊಗ್ಗದಲ್ಲಿ 10 ಮಂದಿ ಕೋವಿಡ್‌ ಕಾರಣದಿಂದ ಮರಣ ಹೊಂದಿದ್ದಾರೆ. ರಾಯಚೂರು ಮತ್ತು ಚಿತ್ರದುರ್ಗದಲ್ಲಿ ಕೋವಿಡ್‌ನಿಂದ ಮೃತಪಟ್ಟವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ 2,028 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸಾವಿರ ಮೀರಿದ ಪ್ರಕರಣ ದಾಖಲಾಗಿಲ್ಲ. ಬೀದರ್‌ 10, ಯಾದಗಿರಿ 33, ರಾಮನಗರ 42, ಬಾಗಲಕೋಟೆ 46, ರಾಯಚೂರು 56, ಕಲಬುರಗಿ 63, ಗದಗ 78 ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿವೆ.

ಒಂದೇ ದಿನ 1.94 ಲಕ್ಷ ಜನರಿಗೆ ಲಸಿಕೆ

ರಾಜ್ಯದಲ್ಲಿ ಮಂಗಳವಾರ 1.94 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದ್ದು ಈ ಪೈಕಿ ಯಾರಲ್ಲಿಯೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ರಾಜ್ಯದಲ್ಲಿ ಈವರೆಗೆ 29 ಲಕ್ಷ ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದು 1.27 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ.

ಮಂಗಳವಾರ 18 ರಿಂದ 44 ವರ್ಷದೊಳಗಿನ 99,633 ಮಂದಿ, 45 ವರ್ಷದಿಂದ ಮೇಲ್ಪಟ್ಟ73,753 ಮಂದಿ, ಮುಂಚೂಣಿ ಕಾರ್ಯಕರ್ತರು 4,313 ಮಂದಿ ಮತ್ತು ಆರೋಗ್ಯ ಕಾರ್ಯಕರ್ತರು 839 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಎರಡನೇ ಡೋಸ್‌ ಅನ್ನು 45 ವರ್ಷ ಮೇಲ್ಪಟ್ಟ13,593 ಮಂದಿ, ಆರೋಗ್ಯ ಕಾರ್ಯಕರ್ತರು 839 ಮಂದಿ, ಮುಂಚೂಣಿ ಕಾರ್ಯಕರ್ತರು 835 ಮಂದಿ, 18 ವರ್ಷದಿಂದ 44 ವರ್ಷದೊಳಗಿನ 699 ಮಂದಿ ಪಡೆದಿದ್ದಾರೆ.

Follow Us:
Download App:
  • android
  • ios